ವಿಮಾನ ಉರುಳಿಸುವ ಹಕ್ಕಿ – ಆಗಸದಲ್ಲಿ ಡಿಕ್ಕಿ, ರನ್ವೇಯಲ್ಲಿ ಬೆಂಕಿ
ಸರಣಿ ಪತನ ರಹಸ್ಯ!
ಅಜರ್ ಬೈಜಾನ್ ವಿಮಾನ ಪತನದಲ್ಲಿ 38 ಜನ ಮೃತಪಟ್ಟಿದ್ರು.. ಈ ಘಟನೆ ಮಾಸುವ ಮುನ್ನವೇ ಸೌತ್ ಕೊರಿಯಾದಲ್ಲಿ ಭೀಕರ ದುರಂತ ನಡೆದು 181 ಜನರಲ್ಲಿ ಕೇವಲ ಇಬ್ಬರು ಮಾತ್ರ ಬದುಕಿದ್ದಾರೆ.. ಒಂದು ಚಿಕ್ಕ ಹಕ್ಕಿ ಹೊಡೆೆದು ಈ ದುರಂತ ನಡೆದಿದೆ.. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಕ್ಕಿಯೊಂದು ವಿಮಾನಕ್ಕೆ ಬಡಿದಿದ್ದು, ಇದರ ಪರಿಣಾಮ ಬಲ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ನಂತ್ರ ಗೇರ್‌ನಲ್ಲಿ ಸಮಸ್ಯೆ ಆಗಿ ಕಾಂಪೌಂಡ್‌ಗೆ ಬಂದು ಗುದ್ದಿ ಸ್ಫೋಟಗೊಂಡಿದೆ ಎಂದು ವರದಿ ಆಗಿದೆ.
ಚಿಕ್ಕ ಹಕ್ಕಿಯಿಂದ ದೊಡ್ಡ ಗಂಡಾಂತರ
ಅಂದಹಾಗೆ ವಿಮಾನ ಹಾರಾಟದ ವೇಳೆ ಪಕ್ಷಿಗಳ ಗುಂಪು ಬೇಡ.. ಒಂದೇ ಒಂದು ಸಿಂಗಲ್ ಹಕ್ಕಿ ಬಂದು ವಿಮಾನಕ್ಕೆ ಹೊಡೆದರೂ ವಿಮಾನ ಪತನವಾಗುತ್ತೆ. ಹಾರುವ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದರೆ ಅದು ತುಂಬಾನೇ ಡೇಂಜರ್. ಹೀಗಾಗಿ ಹಕ್ಕಿಗಳ ಹಾರಾಟಕ್ಕಿಂತಲೂ ಮೇಲೆತ್ತರದಲ್ಲಿ ವಿಮಾನವನ್ನು ಹಾರಿಸಲಾಗುತ್ತದೆ. ಪಕ್ಷಿಗಳ ಡಿಕ್ಕಿಯಿಂದ ವಿಮಾನದ ವಿಂಡ್‌ಶೀಲ್ಡ್ ಕೂಡ ಒಡೆಯುವ ಸಾಧ್ಯತೆಯಿದೆ. ಇದರಿಂದ ವಿಮಾನವನ್ನು ಹತ್ತಿರ ಏರ್‌ಪೋರ್ಟ್‌ನಲ್ಲಿ ಇಳಿಸಬೇಕಾಗುತ್ತೆ. ಗ್ಲಾಸ್ ಹೋದ್ರೆ ಪೈಲಟ್‌ಗೆ ಗಾಳಿ ಹೊಡೆದು, ಮುಂದೆ ಏನನ್ನು ನೋಡೋಕೆ ಆಗಲ್ಲ.. ಪಕ್ಷಿಯು ಇಂಧನ ಟ್ಯಾಂಕ್‌ಗೆ ಬಂದು ಹೊಡೆದರೆ, ಅದರಿಂದ ಇಂಧನ ಲೀಕ್ ಆಗುತ್ತೆ.. ಇದ್ರಿಂದ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳಬಹುದು. ಪಕ್ಷಿಯು ವಿಮಾನದ ಇಂಜಿನ್‌ಗೆ ಡಿಕ್ಕಿ ಹೊಡೆದಾಗ, ಎಂಜಿನ್‌ನೊಳಗಿನ ಬ್ಲೇಡ್‌ಗಳು ಹಾನಿಗೊಳಗಾಗಬಹುದು. ಇದರಿಂದ ಎಂಜಿನ್‌ನಲ್ಲಿ ಬೆಂಕಿಯೂ ಹತ್ತಿಕೊಳ್ಳುವ ಸಾಧ್ಯತೆ ಇದೆ. ಅಥವಾ ಎಂಜಿನ್ ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಹಕ್ಕಿಗಳು ಇರದಂತೆ ಸಾಕಷ್ಟು ಕ್ರಮಗಳನ್ನ ಕೈಗೊಳ್ಳಾರೆ.. ವಿಮಾನ ಲ್ಯಾಂಡ್ ಆಗ್ತಾ ವಿಮಾನ ಕಳಗೆ ಬರಲೇ ಬೇಕು.. ಆಗ ಹಕ್ಕಿಗಳು ಹೊಡೆಯು ಚಾನ್ಸ್ ತುಂಬಾ ಇರುತ್ತೆ.. ಹೀಗಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ನಾನ್‌ವೇಜ್‌ಗಳನ್ನ ಬ್ಯಾನ್ ಮಾಡಲಾಗುತ್ತೆ..
ಪೈಲಟ್‌ಗಳ ನಿರ್ಲಕ್ಷ್ಯವೂ ವಿಮಾನ ದುರಂತಕ್ಕೆ ಕಾರಣ!
ನಾವು ಟೆಕ್ನಿಕಲ್ ಆಗಿ ಎಷ್ಟೇ ಮುಂದುವರಿದ್ರು. ವಿಮಾನ ತನ್ನ ಪಾಡಿಗೆ ತಾನು ಹೋಗಲ್ಲ.. ಅದಕ್ಕೆ ಪೈಲಟ್‌ಗಳ ಅವಶ್ಯಕತೆಯಿದೆ. ಒಬ್ಬ ಲಾರಿ ಡ್ರೈವರ್ ಹೇಗೆ ಲಾರಿ ಟ್ರೈರ್ ಸರಿಯಾಗಿ ಇದ್ಯಾ ಅಂತ ನೋಡ್ಕೊಂಡು ಹೋಗ್ತಾನೋ.. ಹಾಗೇ ವಿಮಾನವನ್ನೂ ಪೈಲಟ್ ಚೆಕ್ ಮಾಡಿಕೊಳ್ಳಲೇ ಬೇಕು.. ಪೈಲಟ್‌ಗಳಿಗೆ ಎಷ್ಟೇ ತರಬೇತಿ ನೀಡಿದ್ರು, ಸಾಕಷ್ಟು ತಪ್ಪುಗಳನ್ನ ಮಾಡ್ತಾನೆ ಇರ್ತಾರೆ.. ಅವರ ತಪ್ಪುಗಳಿಂದಲೇ ಸಾಕಷ್ಟು ವಿಮಾನ ದುರಂತ ನಡೆದು, ನೂರಾರು ಜನ ಪ್ರಾಣ ಕಳೆದುಕೊಳ್ತಾರೆ. ಪೈಲಟ್‌ಗಳು ಏಕಾಗ್ರತೆಯಿಂದ ಇರಬೇಕು ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ.. ಕಮರ್ಷಿಯಲ್ ಪೈಲಟ್‌ಗಳು ಸರಿಯಾಗಿ ವಿಶ್ರಾಂತಿ ಪಡೆಯಲ್ಲ. ಟೈಮ್ ಟೇಬಲ್ ಇರೋದ್ರಿಂದ ನಿರಂತರ ಪಯಣ ಮಾಡಲೇ ಬೇಕು. ಹೀಗಾಗಿ ವಿಶ್ರಾಂತಿ ಇಲ್ಲದೆ ಸುಸ್ತಾಗಿ ವಿಮಾನದಲ್ಲಿ ತೊಂದ್ರೆ ಆದಾಗ ಅದನ್ನ ಸರಿ ಮಾಡೋಕೆ ಅವರ ಕೈಯಲ್ಲಿ ಆಗದೇ ಗಾಬರಿ ಆಗ್ತಾರೆ. ಇನ್ನೂ ನಿರ್ಲಕ್ಷ್ಯ, ಅತಿಯಾದ ಆತ್ಮವಿಶ್ವಾಸ ಅಥವಾ ಗಡಿಬಿಡಿಯಿಂದ ವಿಮಾನವನ್ನ ಸರಿಯಾಗಿ ಚೆಕ್ ಮಾಡದೇ ಇರುವುದು ದುರಂತಕ್ಕೆ ಕಾರಣವಾಗುತ್ತೆ. FAA ನಿಯಮಗಳ ಪ್ರಕಾರ ವಿಮಾನಯಾನ ಪೈಲಟ್‌ಗಳು ವಿಮಾನವನ್ನ ಹಾರಿಸುವ ಕನಿಷ್ಠ 8 ಗಂಟೆಗಳ ಮೊದಲು ಆಲ್ಕೋಹಾಲ್ ಕುಡಿಯುವುದು ಬಿಡಬೇಕು.. ಆದ್ರೆ ಈ ನಿಯಮವನ್ನು ನಿರ್ಲಕ್ಷ ಮಾಡಿ ಆಲ್ಕೋಹಾಲ್ ಸೇರಿದಂತೆ ನಶೆ ಬರೋ ವಸ್ತುಗಳನ್ನ ಸೇವನೆ ಮಾಡ್ತಾರೆ. ಇದ್ರಿಂದ ಸಂಕಷ್ಟ ಎದುರಾಗಬಹುದು.. ಹವಮಾನದಿಂದ ಕೂಡ ವಿಮಾನ ದುರಂತಗಳು ನಡೆಯುತ್ತೆ..
ಬೆಲ್ಲಿ ಲ್ಯಾಡಿಂಗ್ ಅಂದ್ರೆ ಏನು?
ಬೆಲ್ಲಿ ಲ್ಯಾಂಡಿಂಗ್ ಎನ್ನುವುದು ತುರ್ತು ಲ್ಯಾಂಡಿಂಗ್ ಆಗಿದೆ. ವಿಮಾನವು ತನ್ನ ಲ್ಯಾಂಡಿಂಗ್ ಗೇರ್ ಅನ್ನು ಬಳಸದೆಯೇ ನೆಲಕ್ಕೆ ಲ್ಯಾಂಡ್ ಆಗಲಿದೆ. ಆದರೆ, ಎಂದಿನಂತೆ ವಿಮಾನ ಇಳಿಯೋದಿಲ್ಲ. ಇಲ್ಲಿ ವಿಮಾನದ ಸೊಂಟದ ಭಾಗ ಅಥವಾ ಹಿಂಬಂದಿಯ ಭಾಗ ಮೊದಲಿಗೆ ಇಳಿಯುತ್ತದೆ. ಲ್ಯಾಂಡಿಂಗ್ ಗೇರ್ ವ್ಯವಸ್ಥೆಯಲ್ಲಿ ಅಸಮರ್ಪಕ ಅಥವಾ ವೈಫಲ್ಯ ಉಂಟಾದಾಗ ಈ ಪರಿಸ್ಥಿತಿಯು ಸಾಮಾನ್ಯವಾಗಿ ಉದ್ಭವಿಸುತ್ತದೆ.. ಈ ವೇಳೆ ಕೂಡ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತೆ.. ಆದ್ರೆ ನೀರಲ್ಲಿ ಈ ತರ ಮಾಡಿದ್ರೆ ಸಮಸ್ಯೆ ಆಗುವುದು ತಪ್ಪುತ್ತೆ.