ಬೆಂಗಳೂರಿನಲ್ಲಿ ಉಸಿರಾಡೋದು ಕಷ್ಟ ಕಷ್ಟ – ರಾಜಧಾನಿಯಲ್ಲಿ ಹೆಚ್ಚಾದ ವಾಯು ಮಾಲಿನ್ಯ
ಬೆಂಗಳೂರಿನಲ್ಲಿ ಗಾಳಿ ಕೂಡಾ ಸೇಫ್ ಅಲ್ಲ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿ ಹೋಗಿದೆ. ಒಂದೆಡೆ ದಟ್ಟ ಮಂಜು, ಒಂದೆಡೆ ಉಸಿರಾಡುವ ಗಾಳಿಯಲ್ಲಿ ಸೇರಿ ಹೋದ ಮಿತಿ ಮೀರಿದ ಮಾಲಿನ್ಯ, ಹೀಗಾಗಿ ದೆಹಲಿಯಲ್ಲಿ ಉಸಿರಾಡಲು ಜನ ಕಷ್ಟ ಪಡುತ್ತಿದ್ದಾರೆ. ಇದೀಗ ಬೆಂಗಳೂರಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ:ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ! – ಈ ಮಾರ್ಗದಲ್ಲಿ ಮೆಟ್ರೋ ಸೇವೆ 1 ಗಂಟೆ ಲೇಟ್ !
ವಾಯು ಮಾಲಿನ್ಯ, ಕಲುಷಿತ ಗಾಳಿ, ಉಸಿರಾಡಲು ಕಷ್ಟ ಅನ್ನೋ ಪರಿಸ್ಥಿತಿ ಬಂದಾಗ ಎಲ್ಲರಿಗೂ ನೆನಪಾಗುವುದು ರಾಷ್ಟ್ರ ರಾಜಧಾನಿ ದೆಹಲಿಯ ದುಸ್ಥಿತಿ. ಆದರೆ, ನಮ್ಮ ರಾಜಧಾನಿ ಬೆಂಗಳೂರಲ್ಲೂ ಗಾಳಿಯ ಗುಣಮಟ್ಟ ಕೂಡಾ ಹದಗೆಟ್ಟಿದೆ ಎಂಬ ಆಘಾತಕಾರಿ ಸುದ್ದಿ ಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸದ್ದಿಲ್ಲದೇ, ವಾಯು ಗುಣಮಟ್ಟ ಕುಸಿತವಾಗುತ್ತಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ದೆಹಲಿಯಲ್ಲಿ AQI 340 ಇದ್ದರೇ, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ AQI 180 ದಾಖಲಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (AQI) 180ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ದಿನೇ ದಿನೇ ವಾಹನ ದಟ್ಟಣೆ ಜಾಸ್ತಿಯಾಗುತ್ತಿದೆ. ಕಟ್ಟಡ ನಿರ್ಮಾಣ ಕಾರ್ಯಗಳು ಮುಗಿಯುವುದೇ ಇಲ್ಲ. ಜೊತೆಗೆ ಈ ಬಾರಿ ಚಳಿ ಕೂಡಾ ವಿಪರೀತವಿದೆ. ಉಸಿರಾಟದ ಸಮಸ್ಯೆ ಇರುವವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ, ಹೊರ ಹೋಗುವಾಗ ಮಾಸ್ಕ್ ಧರಿಸಿ ಹೋಗುವುದು ಉತ್ತಮ.

ನೋಡಿರಿ

