ವಾಯು ಮಾಲಿನ್ಯದಿಂದ ತತ್ತರಿಸಿದ ಭಾರತ: ಬಿಹಾರ ಅತೀ ಕಲುಷಿತ ನಗರ

ವಾಯು ಮಾಲಿನ್ಯದಿಂದ ತತ್ತರಿಸಿದ ಭಾರತ: ಬಿಹಾರ ಅತೀ ಕಲುಷಿತ ನಗರ

ನವದೆಹಲಿ: 2022 ರಲ್ಲಿ ಭಾರತದಲ್ಲಿ ವಾಯು ಮಾಲಿನ್ಯದ ಮಟ್ಟವು ತೀರಾ ಹದಗೆಟ್ಟಿದ್ದು, ಈ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಬಿಹಾರದ ಕತಿಹಾರ್ ನವೆಂಬರ್ 7 ರಂದು 163 ಭಾರತೀಯ ನಗರಗಳಲ್ಲಿ 360 ರಷ್ಟು ವಾಯು ಗುಣಮಟ್ಟ ಸೂಚ್ಯಂಕವನ್ನು ಹೊಂದಿತ್ತು. ದೆಹಲಿಯ ಎಕ್ಯೂಐ 354, ನೋಯ್ಡಾ 328 ಮತ್ತು ಗಾಜಿಯಾಬಾದ್ 304 ರಷ್ಟಿದೆ ಎಂದು ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.

ಇದನ್ನೂ ಓದಿ:  ಹಿಮಾಚಲ ಪ್ರದೇಶದಲ್ಲಿ ಪಕ್ಷಾಂತರ ಪರ್ವ: ಮತದಾನಕ್ಕೆ ಕೆಲವೇ ದಿನಗಳಿರುವಾಗ ಬಿಜೆಪಿಗೆ ಸೇರಿದ 26 ಕಾಂಗ್ರೆಸ್ ನಾಯಕರು

ಬೇಗುಸರಾಯ್ (ಬಿಹಾರ), ಬಲ್ಲಬ್‌ಗಢ್, ಫರಿದಾಬಾದ್, ಕೈತಾಲ್ ಮತ್ತು ಹರಿಯಾಣದ ಗುರುಗ್ರಾಮ್ ಮತ್ತು ಗ್ವಾಲಿಯರ್ (ಮಧ್ಯ ಪ್ರದೇಶ) ಸೋಮವಾರ ಬಿಡುಗಡೆ ಮಾಡಲಾದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿದೆ. ಈ ಅಧ್ಯಯನ ವರದಿ ಭಾರತಕ್ಕೆ ಎಚ್ಚರಿಕೆಯ ಕರೆಯಂತಿದೆ.

ವಾಹನಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಪರಿಸರ ಸಚಿವ ಗೋಪಾಲ್ ರಾಯ್ ಅವರು ಉತ್ತರ ಪ್ರದೇಶ ಮತ್ತು ಹರಿಯಾಣ ಮುಖ್ಯಮಂತ್ರಿಗಳಿಗೆ ರಾಜಧಾನಿಯ ಗಡಿಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಅನಗತ್ಯ ಸರಕುಗಳನ್ನು ಸಾಗಿಸುವ ಟ್ರಕ್‌ಗಳನ್ನು ಬೇರೆಡೆಗೆ ತಿರುಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಭೂಮಿ ಮತ್ತು ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ಮುನ್ಸೂಚಕ ಏಜೆನ್ಸಿಯಾದ ಸಫರ್ ಪ್ರಕಾರ, ಪ್ರತಿಕೂಲವಾದ ಗಾಳಿಯಿಂದಾಗಿ ದೆಹಲಿಯ ಪಿಎಂ 2.5 ಮಾಲಿನ್ಯದಲ್ಲಿ ಶುಕ್ರವಾರ ಶೇ 30 ಇತ್ತು. ಶನಿವಾರ ಶೇ 21 ಕ್ಕೆ ಇಳಿದಿದೆ. ಆ ಕಡೆಯಿಂದ ಈ ಕಡೆ ದೂಳಿನ ಕಣ ಕರೆದೊಯ್ಯುವ ಗಾಳಿಯು ವಾತಾವರಣದ ಕೆಳಮಟ್ಟದ ಎರಡು ಪದರಗಳಲ್ಲಿ ಬೀಸುತ್ತದೆ. ಟ್ರೋಪೋಸ್ಫಿಯರ್ ಮತ್ತು ಸ್ಟ್ರಾಟೋಸ್ಪಿಯರ್ ಈ ಎರಡು ಪದರಗಳಲ್ಲಿ ಅದು ಬೀಸುತ್ತದೆ. ಇದೇ ಗಾಳಿ ಕೃಷಿ ತಾಜ್ಯ ಸುಡುವ ಬೆಂಕಿಯ ಹೊಗೆಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಒಯ್ಯುತ್ತದೆ.

ವಾಯು ಗುಣಮಟ್ಟ ಸೂಚ್ಯಂಕ ಅಥವಾ AQI PM 2.5 ಮಟ್ಟಗಳ ಸಾಂದ್ರತೆಯನ್ನು ಅಳೆಯುತ್ತದೆ. 2.5 ಮೈಕ್ರಾನ್‌ಗಳಿಗಿಂತ ಕಡಿಮೆಯಿರುವ ಸೂಕ್ಷ್ಮ ಕಣಗಳು ನಮ್ಮ ದೇಹಕ್ಕೆ ಪ್ರವೇಶಿಸಿ, ದೀರ್ಘಕಾಲದ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದೆ.

ವಿಷಕಾರಿ ಗಾಳಿಯು ಆರೋಗ್ಯಕರ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಲ್ಲದೆ, ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಅಕಾಲಿಕ ಮರಣವನ್ನು ಉಂಟುಮಾಡುತ್ತದೆ. ಗ್ರೀನ್‌ಪೀಸ್ ಪ್ರಕಾರ, ವಾಯು ಮಾಲಿನ್ಯದಿಂದಾಗಿ 2017 ರಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.

suddiyaana