ಬಾಲ ಬಿಚ್ಚಿದ್ರೆ ಎಂಥಾ ಪರಿಸ್ಥಿತಿ ನಿಭಾಯಿಸಲೂ ಸಿದ್ಧ – ಪಾಕಿಸ್ತಾನಕ್ಕೆ ಭಾರತೀಯ ಸೇನಾಧಿಕಾರಿಗಳ ಎಚ್ಚರಿಕೆ

ಬಾಲ ಬಿಚ್ಚಿದ್ರೆ ಎಂಥಾ ಪರಿಸ್ಥಿತಿ ನಿಭಾಯಿಸಲೂ ಸಿದ್ಧ – ಪಾಕಿಸ್ತಾನಕ್ಕೆ ಭಾರತೀಯ ಸೇನಾಧಿಕಾರಿಗಳ ಎಚ್ಚರಿಕೆ

ಗಡಿಯಲ್ಲಿ ಪದೇಪದೆ ಕ್ಯಾತೆ ತೆಗೆದು ಭಾರತದ ತಾಳ್ಮೆ ಕೆಣಕುತ್ತಿರೋ ಪಾಕಿಸ್ತಾನಕ್ಕೆ ಭಾರತದ ಸೇನಾ ಅಧಿಕಾರಿಗಳು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರ್ ಕುರಿತು ಮೂರು ವಿಭಾಗದ ಸೇನಾ ಅಧಿಕಾರಿಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ನಮ್ಮ ಎಲ್ಲಾ ಸೈನಿಕ ನೆಲೆಗಳು ಹಾಗೂ ಉಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ, ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸನ್ನದ್ಧವಾಗಿದೆ ಎಂದು ಡಿಜಿಎಂಒ ರಾಜೀವ್ ಘಾಯ್ ತಿಳಿಸಿದ್ದಾರೆ.

ಇದನ್ನೂ ಓದಿ : 18ನೇ ಸೀಸನ್ RCBಗೆ ಸ್ಪೆಷಲ್  – ಕೊಹ್ಲಿ, ಶೆಫರ್ಡ್, ಡೇವಿಡ್ ಸುನಾಮಿ

ಮೂರು ಸೇನೆಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದೆ. ಭಾರತದ ಸೇನಾ ನೆಲೆಗಳನ್ನು ನಾಶಪಡಿಸಿದ್ದೇವೆ, ಅವರಿಗೆ ನಮ್ಮೊಂದಿಗೆ ಹೋರಾಡಲಾಗುವುದು, ಯುದ್ಧದಲ್ಲಿ ನಾವು ಗೆದ್ದಿದ್ದೇವೆ ಎಂದು ಪಾಕಿಸ್ತಾನ ಸುದ್ದಿಗೋಷ್ಠಿ ನಡೆಸಿದ ಕಾರಣ, ನಾವು ಸತ್ಯವನ್ನು ತಿಳಿಸಲು ಮತ್ತೆ ಬರಬೇಕಾಯಿತು ಎಂದು ಸೇನೆ ಹೇಳಿದೆ. ನಮ್ಮ ಎಲ್ಲಾ ವಾಯುನೆಲೆಗಳು ಉತ್ತಮ ಸ್ಥಿತಿಯಲ್ಲಿವೆ. ನಾನು ನಮ್ಮ ಗಡಿ ಭದ್ರತಾ ಪಡೆಯನ್ನೂ ಹೊಗಳಲು ಬಯಸುತ್ತೇನೆ. ಅವರು ನಮ್ಮನ್ನು ತುಂಬಾ ಧೈರ್ಯದಿಂದ ಬೆಂಬಲಿಸಿದರು. ಅವರ ಪ್ರತಿ ಎಚ್ಚರಿಕೆ ವ್ಯವಸ್ಥೆಗಳು ನಮ್ಮ ವಾಯು ರಕ್ಷಣಾ ವ್ಯವಸ್ಥೆಯ ಭಾಗವಾಗಿದ್ದವು, ಇದು ಪಾಕಿಸ್ತಾನದ ದುಷ್ಟ ಉದ್ದೇಶಗಳನ್ನು ನಾಶಮಾಡಿತು ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಏರ್ ಮಾರ್ಷಲ್ ಎ.ಕೆ. ಭಾರ್ತಿ ಮಾತನಾಡಿ, ನಮ್ಮ ಹಳೆಯ ಆಯುಧಗಳು ಯುದ್ಧದಲ್ಲಿ ಅದ್ಭುತಗಳನ್ನು ಮಾಡಿವೆ. ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವು. ಆಕಾಶ್ ವ್ಯವಸ್ಥೆಯನ್ನು ಬಳಸಿಕೊಂಡು, ಪಾಕಿಸ್ತಾನ ಕಳುಹಿಸಿದ್ದ ಡ್ರೋನ್‌ಗಳನ್ನು ನಾವು ನಾಶಪಡಿಸಿದ್ದೇವೆ. ಪಾಕಿಸ್ತಾನದ ಪಿಎಲ್-15 ಕ್ಷಿಪಣಿ ಮತ್ತು ಚೀನಾದ ಡ್ರೋನ್‌ಗಳನ್ನು ನಾವು ಯಶಸ್ವಿಯಾಗಿ ಗುರಿಯಾಗಿಸಿಕೊಂಡಿದ್ದೇವೆ ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಹೇಳಿದರು. ಪಾಕಿಸ್ತಾನಿ ಡ್ರೋನ್‌ಗಳನ್ನು ಲೇಸರ್ ಬಂದೂಕುಗಳಿಂದ ಗುರಿಯಾಗಿಸಲಾಗಿತ್ತು ಎಂದು ಹೇಳಿದ್ದಾರೆ. ಪಾಕಿಸ್ತಾನದ ಸೇನೆ ಭಯೋತ್ಪಾದಕರ ಜೊತೆ ನಿಂತಿತ್ತು ನಮ್ಮ ಹೋರಾಟ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧವೇ ಹೊರತು ಪಾಕಿಸ್ತಾನಿ ಸೈನ್ಯದ ವಿರುದ್ಧವಾಗಿರಲಿಲ್ಲ. ಆದರೆ ಪಾಕಿಸ್ತಾನಿ ಸೈನ್ಯವು ಭಯೋತ್ಪಾದಕರ ಜೊತೆ ನಿಲ್ಲುವುದು ಸೂಕ್ತವೆಂದು ಭಾವಿಸಿ ಅವರ ಹೋರಾಟವನ್ನು ತನ್ನದೇ ಆದ ಹೋರಾಟವನ್ನಾಗಿ ಮಾಡಿಕೊಂಡಿತು. ಅಂತಹ ಪರಿಸ್ಥಿತಿಯಲ್ಲಿ, ಅವರು ಅನುಭವಿಸುವ ಯಾವುದೇ ನಷ್ಟಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದಿದ್ದಾರೆ.

Shantha Kumari

Leave a Reply

Your email address will not be published. Required fields are marked *