ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯಿಂದ್ಲೇ ಚಿನ್ನ ಕಳ್ಳಸಾಗಣೆ – ಕೈಗಳಲ್ಲೇ ಬಂಗಾರ ಅಡಗಿಸಿದ್ದೇಗೆ ಗೊತ್ತಾ..?

ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯಿಂದ್ಲೇ ಚಿನ್ನ ಕಳ್ಳಸಾಗಣೆ – ಕೈಗಳಲ್ಲೇ ಬಂಗಾರ ಅಡಗಿಸಿದ್ದೇಗೆ ಗೊತ್ತಾ..?

ವಿಮಾನಗಳಲ್ಲಿ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಲು ಪ್ರಯಾಣಿಕರು ಮಾಡುವ ಪ್ಲ್ಯಾನ್​ಗಳು ಒಂದೆರಡಲ್ಲ. ಪರಿಶೀಲನೆ ವೇಳೆ ಅವ್ರು ಬಂಗಾರ ಅಡಗಿಸಿಟ್ಟ ಪರಿಗೆ ಕಸ್ಟಮ್ಸ್ ಅಧಿಕಾರಿಗಳೇ ದಂಗಾಗುತ್ತಾರೆ. ಆದ್ರೆ ಇಲ್ಲಿ ವಿಮಾನಯಾನ ಸಿಬ್ಬಂದಿಯೇ ಚಿನ್ನ ಕಳ್ಳಸಾಗಣೆ ಮಾಡಲು ಹೋಗಿ ತಗ್ಲಾಕ್ಕೊಂಡಿದ್ದಾನೆ.

ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ವಯನಾಡು ಮೂಲದ ಶಫಿ ಎಂಬಾತನನ್ನ ಬಂಧಿಸಲಾಗಿದ್ದು ಆತನಿಂದ 1,487 ಗ್ರಾಂ ಚಿನ್ನಾಭರಣವನ್ನ ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ : ವಿಮಾನದಲ್ಲಿ ಸಿಗರೇಟ್ ಹಚ್ಚಿದ ಯುವತಿ – ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು

ಬಹ್ರೇನ್-ಕೋಝಿಕೋಡ್-ಕೊಚ್ಚಿ ಮಾರ್ಗವಾಗಿ ಸಾಗುತ್ತಿದ್ದ ವಿಮಾನದಲ್ಲಿ ಚಿನ್ನ ಸಾಗಣೆ ಮಾಡಲು ಆರೋಪಿ ಶಫಿ ಪ್ಲ್ಯಾನ್ ಮಾಡಿದ್ದ. ಚಿನ್ನಾಭರಣವನ್ನು ಕೈಗೆ ಸುತ್ತಿಕೊಂಡು ಅದನ್ನ ಶರ್ಟ್​ನ ತೋಳುಗಳಲ್ಲಿ ಮುಚ್ಚಿಕೊಂಡಿದ್ದ. ಆದ್ರೆ ಕಸ್ಟಮ್ಸ್ ಅಧಿಕಾರಿಗಳ ಪರಿಶೀಲನೆ ವೇಳೆ ಆತನ ಕಳ್ಳಾಟ ಬಯಲಾಗಿದೆ. ಮತ್ತೊಂದೆಡೆ ಸಿಂಗಾಪುರದಿಂದ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ  3.32 ಕೋಟಿ ಮೌಲ್ಯದ 6.8 ಕೆಜಿ ತೂಕದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

suddiyaana