“90 ಸೆಕೆಂಡ್” ಗಳಲ್ಲಿ ಆಪರೇಷನ್! – ತಾಯಿ ಗರ್ಭದಲ್ಲಿರುವಾಗಲೇ ಮಗುವಿಗೆ ಹೃದಯ ಚಿಕಿತ್ಸೆ!

“90 ಸೆಕೆಂಡ್” ಗಳಲ್ಲಿ ಆಪರೇಷನ್! – ತಾಯಿ ಗರ್ಭದಲ್ಲಿರುವಾಗಲೇ ಮಗುವಿಗೆ ಹೃದಯ ಚಿಕಿತ್ಸೆ!

ನವದೆಹಲಿ: ತಾಯಿ ಹೊಟ್ಟೆಯಲ್ಲಿದ್ದ ಮಗುವಿಗೆ ಕೇವಲ 90 ಸೆಕೆಂಡುಗಳಲ್ಲಿ ಹೃದಯ ಶಸ್ತ್ರಚಿಕಿತ್ಸೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರು ಮಾಡಿದ್ದು, ಯಶಸ್ವಿಯಾಗಿದೆ.

ಈ ಹಿಂದೆ ಮೂರು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದ 28 ವರ್ಷದ ಗರ್ಭಿಣಿಯೊಬ್ಬರು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಶಸ್ತ್ರಚಿಕಿತ್ಸೆ ಅಗತ್ಯವಿದೆ ಅಂತಾ ವೈದ್ಯರು ಹೇಳಿದ್ದಾರೆ. ಮಗುವನ್ನು ಉಳಿಸಿಕೊಳ್ಳಲು ಮುಂದಾದ ದಂಪತಿ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದ್ದಾರೆ. ಬಳಿಕ ಏಮ್ಸ್ ಕಾರ್ಡಿಯೋಥೊರಾಸಿಕ್ ಸೈನ್ಸಸ್ ಸೆಂಟರ್ ನ ತಜ್ಞರ ತಂಡ ಕೇವಲ 90 ಸೆಕೆಂಡುಗಳಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ.  ಶಸ್ತ್ರಚಿಕಿತ್ಸೆಯ ನಂತರ ಗರ್ಭಿಣಿ ಮಹಿಳೆ ಮತ್ತು ಆಕೆಯ ಗರ್ಭದಲ್ಲಿರುವ ಮಗು ಆರೋಗ್ಯವಾಗಿದ್ದಾರೆ. ಬಲೂನ್ ಹಿಗ್ಗಿಸುವ ಪ್ರಕ್ರಿಯೆಯಿಂದ ಮಗುವಿನ ಜೀವ ಉಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಸೆನ್ಸಾರ್ ಸರಿ ಇಲ್ಲ.. ಬ್ಲೂಪರ್ ಬಿದ್ದು ಕಾರಿನ ಗ್ಲಾಸ್ ಛಿದ್ರ – ಟೋಲ್ ಶುರುವಾದ ಮೊದಲ ದಿನವೇ ರಗಳೆ!

ಈ ಪ್ರಕ್ರಿಯೆಯನ್ನು ‘ಬಲೂನ್ ಡಿಲೇಷನ್’ ಎಂದು ಕರೆಯಲಾಗುತ್ತದೆ. ಅಲ್ಟ್ರಾಸೌಂಡ್ ತಂತ್ರಜ್ಞಾನದ ಮೂಲಕ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವೈದ್ಯರು ತಾಯಿಯ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಜಿಯನ್ನು ಸೇರಿಸಿ ನಂತರ, ಬಲೂನ್ ಕ್ಯಾತಿಟರ್ ಬಳಸಿ ಅಡಚಣೆಯಾದ ಕವಾಟವನ್ನು ತೆಗೆದಿದ್ದಾರೆ. ರಕ್ತದ ಹರಿವಿಗೆ ದಾರಿ ಮಾಡಿಕೊಟ್ಟಿದ್ದಾರೆ.

ಈ ವಿಧಾನವು ಭ್ರೂಣದ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಅತೀ ನಾಚೂಕಿನಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಪ್ರಕ್ರಿಯೆಯಿಂದ ಮಗು ತಾಯಿಯ ಗರ್ಭದಲ್ಲಿರುವಾಗಲೇ ಕೆಲವು ವಿಧದ ಗಂಭೀರ ಹೃದಯ ಕಾಯಿಲೆಗಳನ್ನು ಪತ್ತೆಹಚ್ಚಬಹುದು, ಕೆಲವೊಮ್ಮೆ ಗರ್ಭಾಶಯದಲ್ಲೇ ಚಿಕಿತ್ಸೆ ನೀಡುವುದರಿಂದ ಮಗುವಿನ ಜನನದ ನಂತರ ಆಗುವ ಅಪಾಯವನ್ನು ಸರಿಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

suddiyaana