ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಕೈ ಅರೆಬೆತ್ತಲೇ ಪ್ರತಿಭಟನೆ – ದೇಶದ ಮರ್ಯಾದೆ ತಗೀತಾ ಕಾಂಗ್ರೆಸ್‌?

ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಕೈ ಅರೆಬೆತ್ತಲೇ ಪ್ರತಿಭಟನೆ – ದೇಶದ ಮರ್ಯಾದೆ ತಗೀತಾ ಕಾಂಗ್ರೆಸ್‌?

ನವದೆಹಲಿಯ ಭಾರತ್‌ ಮಂಟಪದಲ್ಲಿ ನಡೆಯುತ್ತಿರುವ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026’ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅರೆಬೆತ್ತಲೆಯಾಗಿ (ಶರ್ಟ್ ತೆಗೆದು) ಪ್ರತಿಭಟನೆ ನಡೆಸಿದೆ. ಯುವ ಕಾಂಗ್ರೆಸ್ ಸದಸ್ಯರೆಂದು ಹೇಳಿಕೊಳ್ಳುವ ಸುಮಾರು 10 ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. “ನಾಲ್ಕೈದು ಜನರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವೈಯಕ್ತಿಕ ಸಮಸ್ಯೆಗೆ ಬೆಸತ್ತು ದೆಹಲಿ ಮೆಟ್ರೋಗೆ ಹಾರಿ ಯುವಕ ಸೂ*ಸೈಡ್

ಕ್ಯೂಆರ್ (QR) ಕೋಡ್ ಹೊಂದಿದ್ದ ಪಾಸ್‌ಗಳನ್ನು ಬಳಸಿಕೊಂಡು ಪ್ರತಿಭಟನಾಕಾರರು ಸಭಾಂಗಣವನ್ನು ಪ್ರವೇಶಿಸಿದ್ದರು ಎಂದು ವರದಿಯಾಗಿದೆ. ​ವಶಕ್ಕೆ ಪಡೆದ ಎಲ್ಲರನ್ನು ವಿಚಾರಣೆಗಾಗಿ ತಿಲಕ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದೆಹಲಿ ಪೊಲೀಸರು ಖಚಿತಪಡಿಸಿದ್ದಾರೆ. ಇದರಲ್ಲಿ ಭಾಗಿಯಾದವರ ವಿರುದ್ಧ ನಾವು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುವ ಕಾಂಗ್ರೆಸ್ಸಿಗರ ಈ ವಿನೂತನ ಪ್ರತಿಭಟನೆ ಎಲ್ಲರಿಗೂ ಪಥ್ಯವಾಗಿಲ್ಲ. ದೇಶ ವಿದೇಶಗಳಿಂದ ಸಮಿಟ್​ನಲ್ಲಿ ಪಾಲ್ಗೊಳ್ಳಲು ಬಂದಿರುವ ಅತಿಥಿಗಳ ಮುಂದೆ ನಡೆದ ಈ ಪ್ರತಿಭಟನೆ ಹಲವರಿಗೆ ಅಸಮಾಧಾನ ತಂದಿದೆ. ದೇಶವನ್ನು ಬೆತ್ತಲುಗೊಳಿಸಲು ಕಾಂಗ್ರೆಸ್ ಯತ್ನಿಸಿ, ತಾನೇ ಬೆತ್ತಲಾಗಿದೆ ಎಂದು ಕೆಲವರು ಟೀಕಿಸಿದ್ದಾರೆ.

‘ಪ್ರತಿಭಟನೆ ನಡೆಸಲು ಇದು ಸರಿಯಾದ ಸ್ಥಳ ಎಂಬುದು ಒಬ್ಬ ಸಂದರ್ಶಕನಾಗಿ ನನ್ನ ಅನಿಸಿಕೆ. ಇದರಿಂದ ದೇಶಕ್ಕೆ ಕೆಟ್ಟ ಪ್ರಚಾರ ಸಿಗುತ್ತದೆ. ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದು ನಡೆಯುತ್ತಿರುವ, ಮತ್ತು ಎಐ ಬಗ್ಗೆ ಮಾತನಾಡುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಯುವುದು ಸರಿಯಲ್ಲ. ಪ್ರಧಾನಿಗಳ ವಿರುದ್ಧ ಘೋಷಣೆಗಳನ್ನು ಕೂಗುವಾಗ ನಾನು ಬೂತ್​ನಲ್ಲೇ ನಿಂತಿದ್ದೆ. ಜಗಳ ಹುಟ್ಟುಹಾಕುವುದೇ ಈ ಪ್ರತಿಭಟನೆಯ ಉದ್ದೇಶ ಇತ್ತು ಎಂದನಿಸುತ್ತದೆ’ ಎಂದು ಸುಮಿತ್ ಪಟನಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಬಹಳಷ್ಟು ಜನರು ಇದೇ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ. ಜಗತ್ತು ಭಾರತದ ಬೆಳವಣಿಗೆ ಕಾಣಲು ಸೇರಿದರೆ, ಕಾಂಗ್ರೆಸ್ ಪಕ್ಷವು ಕಲಹ ಹುಟ್ಟುಹಾಕಲು ಆಸಕ್ತವಾಗಿದೆ ಎಂದು ಜುಬಿನ್ ಅಶಾರಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ವಿಪಕ್ಷದ ಈ ವರ್ತನೆಯನ್ನು ಬಲವಾಗಿ ಖಂಡಿಸಿದ್ದಾರೆ.

Kishor KV

Leave a Reply

Your email address will not be published. Required fields are marked *