ಗಣರಾಜ್ಯೋತ್ಸವಕ್ಕೆ ಬಾಂಬ್ ಬೆದರಿಕೆ – ನಾಲ್ವರು ಅರೆಸ್ಟ್

ಗಣರಾಜ್ಯೋತ್ಸವಕ್ಕೆ ಬಾಂಬ್ ಬೆದರಿಕೆ – ನಾಲ್ವರು ಅರೆಸ್ಟ್

ಅಹಮದಾಬಾದ್: ಗಣರಾಜ್ಯೋತ್ಸವದಂದು ಅಹಮದಾಬಾದ್ ನ ಗೀತಾ ಮಂದಿರ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಅಹಮದಾಬಾದ್ ಪೊಲೀಸ್ ಕಚೇರಿಗೆ ಬೆದರಿಕೆ ಪತ್ರ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ – ಅದೆಷ್ಟು ಮೊದಲುಗಳಿಗೆ ಸಾಕ್ಷಿಯಾಯ್ತು ಗಣತಂತ್ರ..?

ಗೀತಾ ಮಂದಿರ ಬಸ್ ನಿಲ್ದಾಣ ಮತ್ತು ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಪತ್ರದಲ್ಲಿ ಬರೆಯಲಾಗಿತ್ತು. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರನ್ನು ಅಹಮದಾಬಾದ್ ನಲ್ಲಿ ಹಾಗೂ ಇನ್ನಿಬ್ಬರನ್ನು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬಂಧಿಸಿದ್ದಾರೆ.

ಈ ಬೆದರಿಕೆ ಪತ್ರದಲ್ಲಿ ಅಹಮದಾಬಾದ್ ರೈಲು ನಿಲ್ದಾಣ ಮತ್ತು ಗೀತಾ ಮಂದಿರ ಬಸ್ ನಿಲ್ದಾಣ ಹೊರತುಪಡಿಸಿ ಇತರ ಎರಡು ಸ್ಥಳಗಳನ್ನು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಕೆಲವು ಸಂಖ್ಯೆಗಳನ್ನು ಸಹ ಉಲ್ಲೇಖಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

suddiyaana