2023ರ ಸೋಲಿನ ಕಹಿ ತೊಲಗುತ್ತಾ? – ಮೋದಿ ಸ್ಟೇಡಿಯಮ್​ನ ಭಯವೇಕೆ?
ಅಭಿಮಾನಿಗಳಿಂದ ಚೇಂಜ್ TREND

2023ರ ಸೋಲಿನ ಕಹಿ ತೊಲಗುತ್ತಾ? – ಮೋದಿ ಸ್ಟೇಡಿಯಮ್​ನ ಭಯವೇಕೆ?ಅಭಿಮಾನಿಗಳಿಂದ ಚೇಂಜ್ TREND

2026ರ ಟಿ-20 ವಿಶ್ವಕಪ್​ ಕ್ಲೈಮ್ಯಾಕ್ಸ್​ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಿದ್ಧವಾಗ್ತಿದೆ. ಕ್ಲೋಸಿಂಗ್ ಸೆರೆಮನಿ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗೇ ಇರುತ್ತೆ. ಲ್ಯಾಟಿನ್ ಪಾಪ್ ಕಿಂಗ್, ಗ್ಲೋಬಲ್ ಐಕಾನ್ ಮತ್ತು ಸೂಪರ್‌ಸ್ಟಾರ್ ರ್ಯಾಪ್ ಸಿಂಗರ್ ರಿಕಿ ಮಾರ್ಟಿನ್ ಪರ್ಫಾಮ್ ಮಾಡ್ತಾರೆ. ರಂಗು ರಂಗಿನ ಈ ರಣರೋಚಕ ಮ್ಯಾಚಲ್ಲಿ ಗೆದ್ದು ಚಾಂಪಿಯನ್ ಪಟ್ಟಕ್ಕೇರೋಕೆ ಎರಡೂ ತಂಡಗಳೂ ಫುಲ್ ಎಕ್ಸೈಟ್ ಆಗಿರ್ತಾರೆ. ಆದ್ರೆ ಈಗ ನರೇಂದ್ರ ಮೋದಿ ಸ್ಟೇಡಿಯಂ ಇದ್ದಕ್ಕಿದ್ದಂತೆ ಫುಲ್ ಟ್ರೆಂಡ್ ಆಗ್ತಿದೆ. ಮೀಮ್ಸ್, ಪೋಸ್ಟರ್​ಗಳು ಸದ್ದು ಮಾಡ್ತಿವೆ. ಲಕ್ಕಿ, ಅನ್​ಲಕ್ಕಿ ಅನ್ನೋ ವಾದ ಶುರುವಾಗಿದೆ.

ಇದನ್ನೂ ಓದಿ : ಇಂಗ್ಲೆಂಡ್ ವಿರೋಧ ರೋಚನ ಸೆಮಿಫೈನಲ್ ಪಂದ್ಯ ಗೆದ್ದ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧ ಗೆದ್ದು ಭಾರತ ಫೈನಲ್ ಪ್ರವೇಶ ಪಡೀತಾ ಇದ್ದಂತೆ ಕ್ರಿಕೆಟ್ ಅಭಿಮಾನಿಗಳೆಲ್ಲಾ ನರೇಂದ್ರ ಮೋದಿ ಕ್ರೀಡಾಂಗಣದ ಬಗ್ಗೆ ಮಾತಾಡೋಕೆ ಶುರು ಮಾಡಿದ್ದಾರೆ. ಯಾಕಂದ್ರೆ ಟೂರ್ನಿಯ ಫೈನಲ್ ಮ್ಯಾಚ್ ನೆಡಯೋದು ಇಲ್ಲೇ. ಇದೇ ಮೈದಾನದಲ್ಲಿ ಬಿಗ್ ಟೂರ್ನಮೆಂಟ್​ಗಳಲ್ಲೇ ಕೋಟ್ಯಂತರ ಭಾರತೀಯರ ಹಾರ್ಟ್ ಬ್ರೇಕ್ ಆಗಿದೆ. ಈಗ ಫ್ಯಾನ್ಸ್​ಗೆ ಮತ್ತೆ ಅದೇ ಟೆನ್ಷನ್ ಶುರುವಾಗಿದೆ.

ಫೈನಲ್ ಪಂದ್ಯ ಶಿಫ್ಟ್ ಮಾಡಿ ಅಂತಿದ್ದಾರೆ ಫ್ಯಾನ್ಸ್!

ಭಾರತ ಹಾಗೇ ನ್ಯೂಜಿಲೆಂಡ್ ತಂಡಗಳು ಫೈನಲ್​ನಲ್ಲಿ ಇದೇ ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗ್ತಾರೆ. ಸತತ 2 ನೇ ಬಾರಿ ಟ್ರೋಫಿ ಗೆಲ್ಲೋಕೆ ಟೀಂ ಇಂಡಿಯಾ ರೆಡಿಯಾಗ್ತಿದ್ರೆ ಮೆನ್ ಇನ್ ಬ್ಲ್ಯೂ ಬಾಯ್ಸ್​ನ ಹೊತ್ತು ಮೆರೆಸೋಕೆ ಅಭಿಮಾನಿಗಳೂ ಕಾಯ್ತಿದ್ದಾರೆ. ಆದ್ರೆ ಕೆಲವ್ರು ಪಂದ್ಯ ನಡೆಯಲಿರೋ ಸ್ಟೇಡಿಯಮ್​ ವಿರೋಧಿಸ್ತಿದ್ದಾರೆ. ಐಸಿಸಿ ಟೂರ್ನಮೆಂಟ್​ಗಳಲ್ಲಿ ಯಾಕೆ ಯಾವಾಗ್ಲೂ ಬಿಗ್ ಈವೆಂಟ್ಸ್​ನ ಇಲ್ಲೇ ಆಯೋಜನೆ ಮಾಡ್ತೀರಿ. ಪಂದ್ಯವನ್ನ ಬೇರೆ ಕಡೆ ಶಿಫ್ಟ್ ಮಾಡಿ ಅಂತಿದ್ದಾರೆ. ಇನ್ನೂ ಕೆಲವ್ರು ಪನೌತಿ ಸ್ಟೇಡಿಯಂ ಅಂದ್ರೆ ಅನ್​ಲಕ್ಕಿ ಸ್ಟೇಡಿಯಂ ಅಂತಾ ಪೊಸ್ಟ್​ಗಳನ್ನ ಹಾಕಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರ ಈ ವಾದಕ್ಕೆ ಕಾರಣ ಈ ಹಿಂದೆ ಕ್ಯೂಶಿಯಲ್ ಮ್ಯಾಚ್​ಗಳನ್ನ ಭಾರತ ಪಂದ್ಯವನ್ನ ಸೋತಿರೋದು.

2023ರ ಏಕದಿನ ವಿಶ್ವಕಪ್, ಸೌತ್ ಆಫ್ರಿಕಾ ವಿರುದ್ಧ ಸೋಲು!

ಭಾರತದ ಅಭಿಮಾನಿಗಳಿಗೆ ಸ್ಟೇಡಿಯಂ ಬಗ್ಗೆ ಬೇಸರ ಮೂಡೋಕೆ ಅತಿದೊಡ್ಡ ಕಾರಣ 2023ರ ಏಕದಿನ ವಿಶ್ವಕಪ್ ಫೈನಲ್. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಸೋಲೇ ಕಾಣದೆ ಫೈನಲ್​ಗೆ ಬಂದಿದ್ದ ಭಾರತ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಟ್ರೋಫಿ ಮಿಸ್ ಮಾಡಿಕೊಳ್ತು. ಌಂಡ್ ಫಾರ್ ದಿ ಫಸ್ಟ್ ಟೈಂ ಆ ಟೂರ್ನಿಯಲ್ಲಿ ಕೊನೇ ಪಂದ್ಯದಲ್ಲಿ ಹತ್ತೂ ವಿಕೆಟ್​ಗಳನ್ನ ಕಳ್ಕೊಂಡಿದ್ರು. ಈ ಪಂದ್ಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲೇ ನಡೆದಿತ್ತು. ಌಂಡ್ ಈ ಸಲ ಟಿ-20 ವಿಶ್ವಕಪ್​ನಲ್ಲಿ ಸೂಪರ್ 8 ಹಂತದಲ್ಲಿ ಅದೇ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಮ್ಯಾಚಲ್ಲಿ ಭಾರತ ಸೋಲನ್ನ ಕಂಡಿತ್ತು. ಟಿ-20 ವಿಶ್ವಕಪ್ ಅಂತಾ ಬಂದಾಗ ಸತತ 12 ಪಂದ್ಯಗಳನ್ನ ಗೆದ್ದಿದ್ದ ಭಾರತ ಮೋದಿ ಸ್ಟೇಡಿಯಮ್​ನಲ್ಲಿ ಅಜೇಯ ಯಾತ್ರೆಗೆ ಬ್ರೇಕ್ ಬಿದ್ದಿತ್ತು. ಅದೂ ಅಲ್ದೇ ಭಾರತ ಕಳೆದ 4 ಐಸಿಸಿ ಈವೆಂಟ್​ಗಳಲ್ಲಿ 30 ಪಂದ್ಯಗಳನ್ನ ಆಡಿದೆ. ಅದರಲ್ಲಿ ಕೇವಲ 2 ಪಂದ್ಯಗಳನ್ನ ಮಾತ್ರ ಸೋತಿದೆ. ಆ ಎರಡೂ ಪಂದ್ಯಗಳ ಸೋಲು ಇದೇ ಸ್ಟೇಡಿಯಮ್​ನಲ್ಲೇ. ಹೀಗಾಗಿ ಕ್ರೀಡಾಂಗಣವೇ ಅನ್ ಲಕ್ಕಿ ಅಂತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ವಾರ್ ನಡೀತಿದೆ. ಬಟ್ ಇದೆಲ್ಲಾ ಮೂಢನಂಬಿಕೆ ಅಷ್ಟೇ. ಪಂದ್ಯ ಗೆಲ್ಲಲೇಬೇಕು ಅಂತಿದ್ರೆ ಅದು ಟೀಂ ಎಫೆರ್ಟ್​ನಿಂದ ಮಾತ್ರವೇ ಸಾಧ್ಯ. ವಾಂಖೆಡೆಯಲ್ಲೇ ನೋಡಿ 250ಪ್ಲಸ್ ಹೊಡೆದ್ರೂ ಡಿಫೆನ್ಸ್ ಮಾಡಿಕೊಳ್ಳೋಕೆ ತಡಕಾಡಿದ್ರು. ಬಟ್ ಸಮ್ ಟೈಮ್ಸ್ 150 ಬಿಲೋ ಟಾರ್ಗೆಟ್ ಕೊಟ್ಟೂ ಗೆದ್ದಿದ್ದಿದೆ. ಹೀಗಾಗಿ ಇಲ್ಲಿ ಲಕ್ ಅನ್ ಲಕ್ ಅಂತಾ ಏನೋ ಇರೋದಿಲ್ಲ. ಆಯಾ ಪಂದ್ಯದಲ್ಲಿ ಯಾರು ಬೆಸ್ಟ್ ಪರ್ಫಾಮೆನ್ಸ್ ಕೊಡ್ತಾರೋ ಅವ್ರು ಗೆದ್ದೇ ಗೆಲ್ತಾರೆ. ಯಾವ ಮೂಮೆಂಟ್​ನಲ್ಲಿ ಬೇಕಿದ್ರೂ ಪಂದ್ಯ ಆಕಡೆ ಈ ಕಡೆ ಟರ್ನ್ ಆಗ್ಬಹುದು.

ಇನ್ನು ಮೋದಿ ಕ್ರೀಡಾಂಗಣದ ಬಿಸಿಸಿಐ ಪಾಲಿಗೆ ಪ್ರತಿಷ್ಠಿತ ಕ್ರೀಡಾಂಗಣ. ಅದೂ ಅಲ್ದೇ ನರೇಂದ್ರ ಮೋದಿ ಕ್ರೀಡಾಂಗಣ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, ಸುಮಾರು 1,32,000 ಪ್ರೇಕ್ಷಕರು ಪಂದ್ಯ ನೋಡ್ಬೋದು. ಹಾಗೇ  ಅನೇಕ ಸ್ಮರಣೀಯ ಪಂದ್ಯಗಳು ಮತ್ತು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ಈ ಸಲವೂ ಮೈದಾನದ ತುಂಬೆಲ್ಲಾ ಬ್ಲ್ಯೂ ಜೆರ್ಸಿ ತೊಟ್ಟು ಕ್ರೀಡಾಂಗಣಕ್ಕೆ ನೀಲಿ ಚಿತ್ತಾರ ಬಿಡಿಸಿದಂತಿರೋ ಅಭಿಮಾನಿ ಸಾಗರದ ಮುಂದೆ ಈ ಸಲ ಟೀಂ ಇಂಡಿಯಾ ಬಾಯ್ಸ್ ಟಿ-20 ವಿಶ್ವಕಪ್ ಟ್ರೋಫಿ ಗೆದ್ದಾಗ ಹಿಂದಿನ ನಂಬಿಕೆಗಳೆಲ್ಲಾ ಮರೆಯಾಗುತ್ತೆ.

Shantha Kumari

Leave a Reply

Your email address will not be published. Required fields are marked *