ಉದ್ಯೋಗಿಗಳಿಗೆ ಕಾರು ಗಿಫ್ಟ್ ನೀಡಿದ ಕಂಪನಿ! – ಅದೃಷ್ಟವಂತರು ಯಾರು ಗೊತ್ತಾ?

ಉದ್ಯೋಗಿಗಳಿಗೆ ಕಾರು ಗಿಫ್ಟ್ ನೀಡಿದ ಕಂಪನಿ! – ಅದೃಷ್ಟವಂತರು ಯಾರು ಗೊತ್ತಾ?

ಕೊವಿಡ್ ಬಳಿಕ ಜಗತ್ತಿನಾದ್ಯಂತ ಗೂಗಲ್‌, ಮೈಕ್ರೋಸಾಫ್ಟ್, ಟ್ವಿಟರ್‌ ಸೇರಿದಂತೆ ಪ್ರಸಿದ್ಧ ಸಂಸ್ಥೆಗಳೇ ನಷ್ಟದ ಕಾರಣ ನೀಡಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಇದರಿಂದಾಗಿ ಅನೇಕ ಉದ್ಯೋಗಿಗಳು ಕೆಲಸ ಇಲ್ಲದೇ ಮನೆಯಲ್ಲೇ ಖಾಲಿ ಕೂರುವಂತಾಗಿದೆ. ಇನ್ನೂ ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಸರಿಯಾದ ಸಮಯಕ್ಕೆ ವೇತನ ನೀಡದೆ ಸತಾಯಿಸಲಾಗುತ್ತಿದೆ. ಆದರೆ, ಭಾರತೀಯ ಮೂಲದ ಐಟಿ ಕಂಪನಿಯೊಂದು ಮಾತ್ರ ಕಂಪನಿ ಬೆಳವಣಿಗಾಗಿ ದುಡಿದ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ನೀಡಿದೆ.

ಇದನ್ನೂ ಓದಿ: ಮಚ್ಚು, ಲಾಂಗ್, ಚಾಕು ಖರೀದಿಗೆ ಆಧಾರ್ ಕಡ್ಡಾಯ – ಪೊಲೀಸರು ಹೊಸ ರೂಲ್ಸ್ ಮಾಡಿದ್ದೇಕೆ..?

ಹೌದು, ಅಹಮದಾಬಾದ್‌ ಮೂಲದ ತ್ರಿಧ್ಯಾ ಟೆಕ್‌ ಕಂಪನಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ತಮ್ಮ ಕಂಪನಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 13 ಉದ್ಯೋಗಿಗಳನ್ನು ಪಟ್ಟಿ ಮಾಡಿ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿ ಎಲ್ಲರನ್ನು ಬೆರಗಾಗುವಂತೆ ಮಾಡಿದೆ.

ತ್ರಿಧ್ಯಾ ಸಂಸ್ಥೆ ಆರಂಭವಾದಾಗಿನಿಂದಲೂ, ತನ್ನ ಉದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಪ್ರತಿ ಹಂತದಲ್ಲೂ ಕೆಲಸಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಉಡುಗೊರೆ ನೀಡುತ್ತಿದೆಯಂತೆ. ಈಗಲೂ ಅದೇ ಸಂಪ್ರದಾಯ ಮುಂದುವರಿಸಿರುವುದಾಗಿ ಕಂಪನಿ ಹೇಳಿದೆ.

ಕಳೆದ ವರ್ಷ (2022) ನವೆಂಬರ್‌ನಿಂದ ಈಚೆಗೆ ಸುಮಾರು 2,00,000 ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇವುಗಳಲ್ಲಿ, ಗೂಗಲ್, ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ಅಮೆಜಾನ್‌ನಂತಹ ಕಂಪನಿಗಳಿಂದ ಹೆಚ್ಚಿನ ಸಂಖ್ಯೆಯ ಜನರನ್ನು ವಜಾಗೊಳಿಸಲಾಗಿದೆ. ಇವರಲ್ಲಿ ಶೇ.30 ರಿಂದ ಶೇ.40ರಷ್ಟು ಭಾರತೀಯ ಐಟಿ ವೃತ್ತಿಪರರು ಇದ್ದಾರೆ.

suddiyaana