ಕೃಷಿಗೆ ಡಿಜಿಟಲ್ ಟಚ್.. ಸಾಲದ ಮೂಲಕ ಸಪೋರ್ಟ್ – ಮೋದಿ ಬಜೆಟ್ ನಲ್ಲಿ ರೈತರಿಗೆ ಬಂಪರ್!
ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಕೃಷಿ ವಲಯಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ. ಪಶುಸಂಗೋಪನೆಯನ್ನೂ ಗಮನದಲ್ಲಿಟ್ಟುಕೊಂಡು 2023-24ರ ಆರ್ಥಿಕ ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈ ಸಲ ಹಸಿರುಕ್ರಾಂತಿಗೆ ಮುಂದಾಗಿರೋ ಕೇಂದ್ರ ಸರ್ಕಾರ ‘ಪಿಎಂ ಪ್ರಣಾಮ್ ಸ್ಕೀಂ’ ಮೂಲಕ ನಿರ್ಧಾರಗಳನ್ನ ಕೈಗೊಂಡಿದೆ. ಅಷ್ಟಕ್ಕೂ ಈ ಸಲದ ಬಜೆಟ್ನಲ್ಲಿ ರೈತರಿಗೆ ಏನೆಲ್ಲಾ ಪ್ರೋತ್ಸಾಹ ನೀಡಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ
ಇದನ್ನೂ ಓದಿ : ಸರ್ಜರಿ ವೇಳೆ ಬಾಲಕಿಯ ಅಂಗಾಂಗ ಕದ್ದರಾ ವೈದ್ಯರು? – ಹೆತ್ತವರ ಕಣ್ಣೀರಿಗೆ ಯಾರು ಹೊಣೆ?
– ಕೃಷಿಗೆ ಡಿಜಿಟಲ್ ಸೌಕರ್ಯ, ಕೃಷಿ ಆಧಾರಿತ ತಂತ್ರಜ್ಞಾನ ಅಭಿವೃದ್ಧಿ ಪಡಿಸುವವರಿಗೆ ಒತ್ತು
– ಪಿಎಂ ಪ್ರಣಾಮ್ ಯೋಜನೆ ಘೋಷಣೆ, 1 ಕೋಟಿ ರೈತರಿಗೆ ಸಾವಯವ ಕೃಷಿ ಉತ್ತೇಜನಕ್ಕೆ ಪ್ರೋತ್ಸಾಹ
– ಪರ್ಯಾಯ ರಸಗೊಬ್ಬರ ತಯಾರಿಕೆಗೆ ಆದ್ಯತೆ, ಜೈವಿಕ ಗೊಬ್ಬರ ತಯಾರಿಕೆಗೆ ‘ಗೋವರ್ಧನ್’ ಯೋಜನೆ
– ಹಸಿರು ಇಂಧನ ಬಳಕೆಗೆ 35 ಸಾವಿರ ಕೋಟಿ, 200 ಬಯೋ ಗ್ಯಾಸ್ ಪ್ಲ್ಯಾಂಟ್ ನಿರ್ಮಾಣ
– ಕೃಷಿ ಆಧಾರಿತ ಸ್ಟಾರ್ಟ್ ಅಪ್ಗಳಿಗೆ ವಿಶೇಷ ಆರ್ಥಿಕ ನೆರವು ನೀಡಲು ವಿಶೇಷ ಅನುದಾನ
– ರೈತರಿಗೆ ಬೆಳೆ ಯೋಜನೆ ಬಗ್ಗೆ ಸೂಕ್ತ ಮಾಹಿತಿ ನೀಡುವುದು, ಸಾಲ ಸೌಲಭ್ಯ ಡಿಜಿಟಲೀಕರಣ
– ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗೆ ಹಾಗೂ ಕೃಷಿ ಆಧಾರಿತ ಸ್ಟಾರ್ಟ್ ಅಪ್ಗಳಿಗೆ ಪ್ರತ್ಯೇಕ ಅನುದಾನ
– ಕೃಷಿಕರಿಗೆ ಸಾಲ ಯೋಜನೆ 20 ಲಕ್ಷ ಕೋಟಿವರೆಗೆ ವಿಸ್ತರಣೆ. ಹೈನುಗಾರಿಕೆಯ ಪಶು ಸಂಗೋಪನೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುದಾನ
– ಕೃಷಿಕರ ಆದಾಯ ಹೆಚ್ಚಿಸುವ ಯೋಜನೆಗಳಿಗೆ ಮೊದಲ ಆದ್ಯತೆ
– ಪಿಎಂ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಉಪಯೋಜನೆ ಘೋಷಣೆ, 6 ಸಾವಿರ ಕೋಟಿ ಮೀಸಲು
– ಪ್ರಧಾನಿ ಕಿಸಾನ್ ಯೋಜನೆಯಡಿಯಲ್ಲಿ ಕೃಷಿಕರಿಗೆ 2.2 ಲಕ್ಷ ಕೋಟಿ ಹಣ ವರ್ಗಾವಣೆ