PAK ಎದೆ ಸೀಳೋಕೆ ಅಗ್ನಿ-5 ರೆಡಿ – ಭಾರತಕ್ಕೆ ಬಂಕರ್ ಬಸ್ಟರ್ ಬಲ!

ಅಮೆರಿಕಾದ ಶಕ್ತಿ ಶಾಲಿ ಕ್ಷಿಪಣಿ.. GBU -57 ಬಾಂಬ್ ಅನ್ನು ಎಲ್ಲ ಬಾಂಬ್ ಗಳ ಅಪ್ಪ ಅಂತಲಾ ಕರೆಯಲಾಗುತ್ತೆ.. ಮೊನ್ನೆ ಮೊನ್ನೆ ಇರಾನ್ ಮೇಲೆ ಅಮೆರಿಕ ಇದ್ದನ್ನ ಹಾಕಿಯೇ ದಾಳಿ ಮಾಡಿತ್ತು. ಇಂತಹ ಕ್ಷೀಪಣಿಗಳು ನಮ್ಮ ದೇಶಕ್ಕೂ ಬೇಕಾಗಿದೆ. ಯಾಕಂದ್ರೆ ನಮ್ಮ ಅಕ್ಕಪಕ್ಕ ಇರೋರೆಲ್ಲಾ ನಮ್ಮ ವಿರೋಧಿ ರಾಷ್ಟ್ರಗಳೇ.. ಹೀಗಾಗಿ ಭಾರತವು ಇದಕ್ಕಿಂತ ಹೆಚ್ಚಿನ ಶಕ್ತಿ, ಸಾಮರ್ಥ್ಯದ ಬಾಂಬ್ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಅಮೆರಿಕಾದಂತೆ ವಿಮಾನದಲ್ಲಿ ಹೊತ್ತೊಯ್ಯುವ ಬಾಂಬ್ ಬದಲು, ಭಾರತವು ಮಿಸೈಲ್ ಮೂಲಕವೇ ಶತ್ರುವಿನ ಗುರಿಯನ್ನು ಭೂಮಿಯೊಳಕ್ಕೆ ನುಗ್ಗಿ ಹೊಡೆದುರುಳಿಸುವ ಗುರಿ ಹೊಂದಿದೆ. ಇದರಿಂದ ಪ್ಲೆಕ್ಸಿಬಲ್ ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮವಾದ, ಶಕ್ತಿಶಾಲಿಯಾದ ಮಿಸೈಲ್ ನಿರ್ಮಿಸುವುದು ಭಾರತದ ಉದ್ದೇಶ. ಇದ್ದಕ್ಕಾಗಿಯೇ ಅಗ್ನಿ-5 ರ ಎರಡು ಹೊಸ ವರ್ಷನ್ ಮಿಸೈಲ್ಗಳು ಅಭಿವೃದ್ಧಿಪಡಿಸೋ ಹಂತದಲ್ಲಿ ಭಾರತವಿದೆ.
ಇದೇ ಜೂನ್ 22 ರಂದು ಅಮೆರಿಕದ B2 ಸ್ಟೈಲ್ತ್ ಬಾಂಬರ್‌ಗಳನ್ನ ಬಳಸಿ ಇರಾನ್ ಮೇಲೆ ದಾಳಿ ನಡೆಸಿದೆ. ಈ ಬಂಕರ್-ಬಸ್ಟರ್ ಬಾಂಬ್‌ಗಳು 200 ಅಡಿ ಆಳದ ಭೂಗತ ರಚನೆಗಳನ್ನು ಭೇದಿಸಿ ಇಸ್ರೇಲ್‌ನ ನ್ಯೂಕ್ಲಿಯರ್ ಘಟಕಗಳನ್ನು ಧ್ವಂಸ ಮಾಡಿದ್ದವು. ಈ ಘಟನೆಯಿಂದ ಪ್ರೇರಿತದವಾದ ಭಾರತವು ತನ್ನ ಭೂಗತ ಗುರಿಗಳನ್ನು ಭೇದಿಸುವ ಸಾಮರ್ಥ್ಯವಿರುವ ಕ್ಷಿಪಣಿಗಳ ಅಭಿವೃದ್ಧಿ ಪಡಿಸುತ್ತಿದೆ .DRDO ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಭಾರತವು ಈಗಾಗಲೇ SPICE-2000 ಮತ್ತು ಹಮ್ಮರ್ ಕ್ಷಿಪಣಿಗಳಂತಹ ನಿಖರ ಗುರಿಯ ಶಸ್ತ್ರಾಸ್ತ್ರಗಳನ್ನು 2019ರ ಬಾಲಕೋಟ್ ದಾಳಿಯಲ್ಲಿ ಬಳಸಿದೆ. ಆದರೆ GBU-57 ರಂತಹ ದೊಡ್ಡ ಪ್ರಮಾಣದ ಬಂಕರ್-ಬಸ್ಟರ್ ಬಾಂಬ್‌ಗಳಿಗೆ ಸಮನಾದ ಶಸ್ತ್ರಾಸ್ತ್ರವನ್ನು ಇನ್ನೂ ಅಭಿವೃದ್ಧಿಪಡಿಸಿಲ್ಲ. ಈ ಹೊಸ ಕ್ಷಿಪಣಿ ದೊಡ್ಡ ಭಾರತ ರಕ್ಷಣಾ ಸಾಮರ್ಥ್ಯದಲ್ಲಿ ದೊಡ್ಡ ಮೈಲಿಗಲ್ಲು ಆಗಲಿದೆ.
ಈ ಕ್ಷಿಪಣಿಗಳನ್ನ ಸುಖೋಯ್ -30 MKI ಮತ್ತು ರೆಫೇಲ್ ಯುದ್ಧ ವಿಮಾನಗಳಿಂದ ಉಡಾಯಿಸಬಹುದಾದಂತೆ ವಿನ್ಯಾಸಗೊಳಿಸುವ ಸಾಧ್ಯತೆಯಿದೆ. ಎಷ್ಟೇ ದಪ್ಪ ಪದರದ ಕಾಂಕ್ರೀಟ್, ಗಟ್ಟಿಯಾದ ವಸ್ತು ಇದ್ದರೂ ಅದ್ದನ್ನ ಬೇದಿಸಿ ಶತ್ರುವಿನ ಮಿಲಿಟರಿ ಸೌಲಭ್ಯ ಹೊಡೆದುರುಳಿಸಲು ಹೊಸ ಕ್ಷಿಪಣಿ ವಿನ್ಯಾಸಗೊಳಿಸಲಾಗುತ್ತಿದೆ. ಈ ಕ್ಷಿಪಣಿಯು ಸ್ಫೋಟಗೊಳ್ಳುವ ಮೊದಲು ಭೂಮಿಯೊಳಗೆ 80 ರಿಂದ 100 ಮೀಟರ್ ಆಳಕ್ಕೆ ಹೋಗಿ ಭೇದಿಸಲಿದೆ. 240 ರಿಂದ 300 ಅಡಿ ಅಳದವರೆಗೂ ಮಿಸೈಲ್ ಹೋಗಿ ಸ್ಫೋಟವಾಗಲಿದೆ.. ಭೂಮಿಯೊಳಗೆ ಪಾಕಿಸ್ತಾನವು ಪರಮಾಣು ಅಸ್ತ್ರ, ಬಾಂಬ್ ಗಳನ್ನ ಇಟ್ಟಿದೆ. ಅವುಗಳನ್ನು ನಾಶಪಡಿಸುವ ಉದ್ದೇಶದಿಂದಲೇ ಭಾರತ ಈ ಹೊಸ ಬಂಕರ್ ಬಸ್ಟರ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿದೆ.
ಈಗ ಅಭಿವೃದ್ಧಿ ಪಡಿಸುತ್ತಿರೋ ಕ್ಷಿಪಣಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಶಕ್ತಿಶಾಲಿ ಬಾಂಬ್ ಹಾಗೂ ಸಿಡಿತಲೆಯಾಗಿರಲಿದೆ. ಹೊಸ ವರ್ಷನ್ ಕ್ಷಿಪಣಿಯಲ್ಲಿ 2,500 ಕಿಮೀ ವರೆಗೂ ಹೋಗುವ ಸಾಮರ್ಥ್ಯವನ್ನ ಅಭಿವೃದ್ದಿಪಡಿಸುತ್ತಿದೆ. ಹೊಸ ಮಿಸೈಲ್ ಮ್ಯಾಕ್ 8 ಮತ್ತು ಮ್ಯಾಕ್ 20 ಸ್ಪೀಡ್ ಮಧ್ಯೆ ವೇಗವಾಗಿ ಹೋಗುವ ಮಿಸೈಲ್ ಆಗಿರಲಿದೆ. ಹೀಗಾಗಿ ಇದು ಹೈಪರ್ ಸಾನಿಕ ಅಸ್ತ್ರವಾಗಲಿದೆ.

ನೋಡಿರಿ

