ಬಿ ವೈ ವಿಜಯೇಂದ್ರಗೆ ಇಂದು ‘ಪಟ್ಟಾಭಿಷೇಕ’ -ಕಮಲ ಪಾಳಯದಲ್ಲಿ ಸಂಭ್ರಮ

ಬಿ ವೈ ವಿಜಯೇಂದ್ರಗೆ ಇಂದು ‘ಪಟ್ಟಾಭಿಷೇಕ’ -ಕಮಲ ಪಾಳಯದಲ್ಲಿ ಸಂಭ್ರಮ

ರಾಜ್ಯ  ಬಿಜೆಪಿಯಲ್ಲಿ ಇಂದಿನಿಂದ ಬಿ.ವೈ.ವಿಜಯೇಂದ್ರ ಸಾರಥ್ಯ ಶುರುವಾಗುತ್ತಿದೆ. ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಅಧಿಕಾರ ಸ್ವೀಕರಿಸಲಿದ್ದಾರೆ. ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿ.ವೈ.ವಿಜಯೇಂದ್ರ  ಅವರಿಗೆ ಬಿಜೆಪಿಯ ಧ್ವಜ ನೀಡಿ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಗಣಪತಿ ಹೋಮ

ಬಿಜೆಪಿ ಕಚೇರಿಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಗಣಪತಿ ಹೋಮ ನಡೆಸಲಾಗಿದೆ. ನಿರ್ವಿಘ್ನವಾಗಿ ಬಿ.ವೈ.ವಿಜಯೇಂದ್ರ ಅವರು ಕಾರ್ಯ ನಿರ್ವಹಿಸಲಿ ಎಂದು ಪ್ರಾರ್ಥಿಸಲಾಗಿದೆ. ಬಳಿಕ ಪಕ್ಷದ ಕಚೇರಿ ಮುಂಭಾಗ ಗೋಪೂಜೆ, ಬಳಿಕ ಗಣಹೋಮದ ಪೂರ್ಣಾಹುತಿ ನಡೆಸಲಾಗಿದೆ. ಈ ವೇಳೆ ಹಾಲಿ ಅಧ್ಯಕ್ಷರು, ನಿಯೋಜಿತ ಅಧ್ಯಕ್ಷರು ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಮುಂದಿರುವ ಸವಾಲುಗಳೇನು? – ವಿಜಯೇಂದ್ರ ಅವರ ವಿಜಯಕ್ಕಿರುವ ಆರು ಮೆಟ್ಟಿಲುಗಳು ಯಾವುದು?

ಅಪ್ಪನ ಆಶಿರ್ವಾದ ಪಡೆದ ವಿಜೆಯೇಂದ್ರ

ಪಕ್ಷದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸುವ ಮುನ್ನ ವಿಜಯೇಂದ್ರ ಅವರು ತಂದೆಯ ಆಶೀರ್ವಾದ ಪಡೆಯಲು ಬೆಂಗಳೂರಿನ ಡಾಲರ್ಸ್​ ಕಾಲೋನಿಯ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ತಂದೆಯ ಆಶಿರ್ವಾದ ಪಡೆದು ಬಳಿಕ ಬಿಜೆಪಿ ಕಚೇರಿಗೆ ತೆರಳಿದ್ದಾರೆ.

ಶುಕ್ರವಾರವೇ ಶಾಸಕಾಂಗ ಸಭೆ

ನಿಗದಿಯಂತೆ ಶುಕ್ರವಾರವೇ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಸಭೆಯಲ್ಲಿ ವಿಪಕ್ಷನಾಯಕ ಆಯ್ಕೆ ಅಂತಿಮವಾಗುತ್ತೆ ಅಂತಾ ಹೇಳಲಾಗ್ತಿದೆ.

ಮುಂಚೂಣಿಯಲ್ಲಿ ಅಶ್ವಥ್ ನಾರಾಯಣ್ ಹೆಸರು

ಕೇಂದ್ರದ ವೀಕ್ಷಕರು ನಾಳೆ ಬೆಂಗಳೂರಿಗೆ ಬರೋ ಸಾಧ್ಯತೆ ಇದೆ. ಮೂಲಗಳ ಪ್ರಕಾರ ವಿಪಕ್ಷ ನಾಯಕ ಸ್ಥಾನದ ರೇಸ್‌ನಲ್ಲಿ ಅಶ್ವಥ್ ನಾರಾಯಣ ಹೆಸರು ಪ್ರಬಲವಾಗಿ ಕೇಳಿಬರ್ತಿದೆ.  ಅಶ್ವತ್ಥ ನಾರಾಯಣ್ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆ ಇದೆ.

Shwetha M