ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ 100 ರೂ. ಏರಿಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ 100 ರೂ. ಏರಿಕೆ!

ನವದೆಹಲಿ: ತಿಂಗಳ ಮೊದಲ ದಿನವೇ ಸರ್ಕಾರಿ ಸ್ವಾಮ್ಯ ಅನಿಲ ಕಂಪನಿಗಳು ದೇಶದ ಜನತೆಗೆ ಬಿಗ್‌ ಶಾಕ್‌ ನೀಡಿವೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ. ಏರಿಕೆ ಮಾಡಿದ್ದು,ಇಂದಿನಿಂದಲೇ (ಬುಧವಾರ) ಈ ದರ ಜಾರಿಗೆ ಬರಲಿದೆ.

ವಾಣಿಜ್ಯ ಮತ್ತು ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಗಳು ಪ್ರತಿ ತಿಂಗಳ ಮೊದಲ ದಿನದಂದು ಮಾಸಿಕ ಪರಿಷ್ಕರಣೆಗಳಿಗೆ ಒಳಗಾಗುತ್ತವೆ. ಈ ತಿಂಗಳು ಕೂಡ ವಾಣಿಜ್ಯ ಸಿಲಿಂಡರ್‌ ದರ ಪರಿಷ್ಕರಣೆ ಮಾಡಲಾಗಿದೆ. ಜಾರಿ ಮಾಡಿರುವ ಈ ದರದಿಂದ ಗ್ರಾಹಕರ ಜೇಬಿಗೆ ಮತ್ತೆ ಹೊರೆಬೀಳಲಿದೆ.

ಇದನ್ನೂ ಓದಿ: ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ – ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಇತ್ತೀಚಿನ ಪರಿಷ್ಕರಣೆಯೊಂದಿಗೆ 19 ಕೆ.ಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ (LPG Cylinder) ಈಗ ದೆಹಲಿಯಲ್ಲಿ 1,731 ರೂ. ನಿಂದ 1,833 ರೂ., ಮುಂಬೈನಲ್ಲಿ 1,785.50 ರೂ., ಕೋಲ್ಕತ್ತಾದಲ್ಲಿ ರೂ.1,943 ಮತ್ತು ಚೆನ್ನೈ ಪ್ರತಿ ಸಿಲಿಂಡರ್ ಗೆ ರೂ.1,999.50ಕ್ಕೆ ಏರಿಕೆ ಆಗಿದೆ.

ಅಕ್ಟೋಬರ್‍ನಲ್ಲಿ ತೈಲ ಕಂಪನಿಗಳು 209 ರೂ.ಗಳಷ್ಟು ದರವನ್ನು ಹೆಚ್ಚಿಸಿದ್ದವು. ಆದರೆ ಗೃಹಬಳಕೆಯ ಎಲ್‍ಪಿಜಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‍ಗೆ 903 ರೂ., ಬೆಂಗಳೂರಿನಲ್ಲಿ 905 ರೂ. ಇದೆ.

Shwetha M