ಕೊಹ್ಲಿನೂ ಆಡ್ತಿಲ್ಲ.. ಪಾಂಡ್ಯನೂ ಆಡಲ್ಲ – ODI ಸರಣಿಗೂ ಮೊದ್ಲೇ ಇಂಜುರಿ ಬರೆ
AFG ಫೈಟ್ ಗೆ ಏನೆಲ್ಲಾ ಚಾಲೆಂಜ್?

ಕೊಹ್ಲಿನೂ ಆಡ್ತಿಲ್ಲ.. ಪಾಂಡ್ಯನೂ ಆಡಲ್ಲ – ODI ಸರಣಿಗೂ ಮೊದ್ಲೇ ಇಂಜುರಿ ಬರೆAFG ಫೈಟ್ ಗೆ ಏನೆಲ್ಲಾ ಚಾಲೆಂಜ್?

ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಮ್ಯಾಚ್ ಗೆದ್ದಿರೋ ಭಾರತ ಜೂನ್ 13 ಅಂದ್ರೆ ಇದೇ ಶನಿವಾರದಿಂದ ಏಕದಿನ ಸರಣಿ ಆಡಲಿದೆ. ನೆಕ್ಸ್​ಟ್ ಇಯರ್ ಏಕದಿನ ವಿಶ್ವಕಪ್ ಕೂಡ ಇರೋದ್ರಿಂದ ಈ ಸರಣಿ ಗೆಲುವು ಕೂಡ ತುಂಬಾನೇ ಮುಖ್ಯವಾಗುತ್ತೆ. ಆದ್ರೆ ಸರಣಿಗೆ ಇನ್ನೆರಡು ದಿನಗಳು ಇರುವಾಗ ಭಾರತಕ್ಕೆ ಗಾಯದ ಮೇಲೆ ಬರೆ ಬಿದ್ದಂತಾಗಿದ್ದಾಗಿದೆ. ಸ್ಟಾರ್ ಆಟಗಾರರಿಗೆ ಇಂಜುರಿ ಭೂತ ಬೆನ್ನೇರಿದ್ದು ಸರಣಿಯಿಂದಲೇ ರೂಲ್ಡ್ ಔಟ್ ಆಗಿದ್ದಾರೆ.

ಇದನ್ನೂ ಓದಿ : ಅಫ್ಘಾನಿಸ್ತಾನ ವಿರುದ್ಧ ದಾಖಲೆ ಗೆಲುವು ಗಳಿಸಿದರೂ ಸಿಗಲ್ಲ WTC ಅಂಕ – ಟೀಮ್ ಇಂಡಿಯಾಕ್ಕೆ ಪ್ರಯೋಜನವಿಲ್ಲ ಯಾಕೆ?

ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಶನಿವಾರದಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭ ಆಗಲಿದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಗೂ ಮುನ್ನ ಭಾರತಕ್ಕೆ ಮತ್ತೆ ಸೆಟ್ ಬ್ಯಾಕ್ ಆಗಿದೆ.  ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದಾರೆ. ಈಗಾಗ್ಲೇ ವಿರಾಟ್ ಕೊಹ್ಲಿ ಇಂಜುರಿಯಿಂದ ತಂಡದಿಂದ ಹೊರಬಿದ್ದಿದ್ರು. ಈಗ ಪಾಂಡ್ಯ ಕೂಡ ರೂಲ್ಡ್ ಔಟ್ ಆಗಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ಪಾಂಡ್ಯ ಔಟ್!

ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಿನ ಮೊದಲ ಏಕದಿನ ಪಂದ್ಯ ಜೂನ್‌ 13 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಇನ್ನು ಸರಣಿಯ ಎರಡನೇ ಪಂದ್ಯ ಲಕ್ನೋನಲ್ಲಿ ಜೂನ್ 17 ರಿಂದ ನಡೆದರೆ, ಮೂರನೇ ಏಕದಿನ ಪಂದ್ಯ ಜೂನ್‌ 20 ರಂದು ಚೆನ್ನೈನಲ್ಲಿ ನಡೆಯಲಿದೆ. ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಗೂ ಮುನ್ನ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಕಂಡೀಷನ್ ಹಾಕಿತ್ತು. ಸಂಪೂರ್ಣವಾಗಿ ಫಿಟ್ ಆಗಿದ್ದರೆ ಮಾತ್ರ ಆಡಲು ಸಾಧ್ಯ ಎಂದಿದ್ರು. ಹೀಗಾಗಿ ಇಬ್ಬರು ಆಟಗಾರರು ಬಿಸಿಸಿಐನಿಂದ ಎನ್​ಒಸಿ ಪಡೆಯಲು ಮುಂದಾಗಿದ್ರು. ಆದ್ರೀಗ ಪಾಂಡ್ಯ ಫಿಟ್​​ನೆಸ್ ಟೆಸ್ಟ್​ನಲ್ಲಿ ಪಾಸ್ ಆಗಿಲ್ಲ.

ಪಾಂಡ್ಯ ಕೂಡ ರೂಲ್ಡ್ ಔಟ್!

ಪಾಂಡ್ಯ ಫಿಟ್ ಆಗಿದ್ದಾರೆ ಎಂದು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ವರದಿ

ವರದಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸಲ್ಲಿಸಿದ್ದ ಪಾಂಡ್ಯ

ಹೊರಡುವ ಮುನ್ನ ನಡೆದ ಅವರ ಕೊನೆಯ ತರಬೇತಿ ಅವಧಿಯಲ್ಲಿ ಮತ್ತೆ ಫೇಲ್

ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಅವಕಾಶವನ್ನು ನೀಡಲಾಗಿಲ್ಲ

ರೋಹಿತ್ ಶರ್ಮಾ ಫಿಟ್ನೆಸ್‌ ಪರೀಕ್ಷೆ ಪಾಸ್‌ ಆಗಿದ್ದು ಅಫ್ಘಾನಿಸ್ತಾನದ ವಿರುದ್ಧ ಆಟ

ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಏಕದಿನ ಸರಣಿಯಿಂದ ಔಟ್

2025ರ ಮಾರ್ಚ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಆಡಿದ್ದೇ ಕೊನೆ

ಆಸ್ಟ್ರೇಲಿಯಾ ಎದುರಿನ ಸರಣಿ ಸರಣಿ ಪ್ರವಾಸಕ್ಕೂ ಮುನ್ನ ಗಾಯದ ಸಮಸ್ಯೆ

ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಗೂ ಮುನ್ನ ರೆಸ್ಟ್

ವರ್ಕ್‌ಲೋಡ್ ಮ್ಯಾನೇಜ್‌ ಮಾಡುವ ಉದ್ದೇಶದಿಂದ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ

2027 ರ ಏಕದಿನ ವಿಶ್ವಕಪ್‌ ಟಾರ್ಗೆಟ್ ಹಿನ್ನೆಲೆಯಲ್ಲಿ ಈ ಸರಣಿ ಎರಡೂ ತಂಡಗಳಿಗೆ ತುಂಬಾನೇ ಇಂಪಾರ್ಟೆಂಟ್. ಹೀಗಿರುವಾಗ್ಲೇ ಸ್ಟಾರ್ ಪ್ಲೇಯರ್ಸ್ ಇಂಜುರಿ ಆಗಿರೋದು ಬಿಸಿಸಿಐಗೂ ತಲೆಬಿಸಿ ಹೆಚ್ಚಿಸಿದೆ. ಹಾಗೇ ಯಾರನ್ನ ರಿಪ್ಲೇಸ್ ಮಾಡ್ಬೇಕು ಅನ್ನೋದು ಕೂಡ ದೊಡ್ಡ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ.

Shantha Kumari

Leave a Reply

Your email address will not be published. Required fields are marked *