ಟೊಮ್ಯಾಟೋ, ಈರುಳ್ಳಿ ನಂತರ ಈಗ ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ! – ಬೆಲೆ ದ್ವಿಗುಣಗೊಳ್ಳಲು ಕಾರಣವೇನು?
ಟೊಮ್ಯಾಟೋ, ಈರುಳ್ಳಿ ನಂತರ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಕಳೆದ ಆರು ವಾರಗಳಿಂದ ಬೆಳ್ಳುಳ್ಳಿ ಬೆಲೆ ದ್ವಿಗುಗೊಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 300 ರಿಂದ 400 ರೂ.ಗೆ ತಲುಪಿದೆ. ಒಂದು ತಿಂಗಳಲ್ಲಿ ಬೆಳ್ಳುಳ್ಳಿ ಬೆಲೆ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಹಿಳೆಯರ ಸುರಕ್ಷತೆಗೆ ನಮ್ಮ ಮೆಟ್ರೋದಲ್ಲಿ ಆದ್ಯತೆ – ಪ್ರಯಾಣಿಕರಿಗೆ ತುರ್ತು ಸಹಾಯವಾಣಿ ತೆರೆದ ಬಿಎಂಆರ್‌ಸಿಎಲ್
ಕಳೆದ ತಿಂಗಳು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಬೆಲೆ ಕೆಜಿಗೆ 200 ರಿಂದ 250 ರೂಪಾಯಿ ಇತ್ತು. ಆದರೆ ಕಳೆದ ಎರಡು ವಾರಗಳಿಂದ ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕೆಜಿಗೆ ಕೆಜಿಗೆ 300 ರಿಂದ 400 ರೂ.ಗೆ ತಲುಪಿದೆ. ಈ ವರ್ಷ ಬೆಳ್ಳುಳ್ಳಿ ಬೆಳೆ ಕೈಕೊಟ್ಟಿದ್ದರಿಂದ ಬೆಲೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಬೆಳ್ಳುಳ್ಳಿ ಬೆಲೆ ಏರಿಕೆಯಾಗಲು ಕಾರಣವೇನು?
ಬೆಳ್ಳುಳ್ಳಿ ಬೆಲೆ ಏರಿಕೆಗೆ ಎರಡು ಕಾರಣಗಳಿವೆ. ಮೊದಲನೆಯದು- ಹವಾಮಾನ ವೈಪರೀತ್ಯದಿಂದ ಬೆಳ್ಳುಳ್ಳಿ ಬೆಳೆ ಹಾಳಾಗಿದೆ. ಎರಡನೆಯ ಕಾರಣ ಕಡಿಮೆ ಉತ್ಪಾದನೆಯಿಂದಾಗಿ, ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿಯ ಪೂರೈಕೆಯಲ್ಲಿ ಭಾರಿ ಕಡಿತ ಕಂಡುಬಂದಿದೆ. ಇದರಿಂದಾಗಿ ಅದರ ಬೆಲೆ ಹೆಚ್ಚಾಗಿದೆ. ನಾಸಿಕ್ ಮತ್ತು ಪುಣೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಉತ್ಪಾದಿಸಲಾಗುತ್ತದೆ. ಹೊಸ ಬೆಳೆ ಮಾರುಕಟ್ಟೆಗೆ ಬರಲು ಸಮಯ ಹಿಡಿಯಲಿದ್ದು ಅಲ್ಲಿಯವರೆಗೆ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ.
ಬೆಳ್ಳುಳ್ಳಿಯ ಕೊರತೆಯಿಂದಾಗಿ, ಕಳೆದ ಕೆಲವು ವಾರಗಳಲ್ಲಿ ಅದರ ಬೆಲೆ ಹೆಚ್ಚಾಗಿದೆ. ಈ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುವ ಸಾಧ್ಯತೆಯಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಬೆಳ್ಳುಳ್ಳಿ ಬೆಲೆ ಏರಿಕೆ ಗ್ರಾಹಕರ ಕೈ ಸುಡಲಿದೆ.