ಒಡಿಶಾ ರೈಲು ದುರಂತದ ಬಳಿಕ ಎಚ್ಚೆತ್ತ ಇಲಾಖೆ – ರೈಲು ಚಾಲಕರಿಗೆ ಇನ್ಮುಂದೆ ಹೊಸ ರೂಲ್ಸ್!‌

ಒಡಿಶಾ ರೈಲು ದುರಂತದ ಬಳಿಕ ಎಚ್ಚೆತ್ತ ಇಲಾಖೆ – ರೈಲು ಚಾಲಕರಿಗೆ ಇನ್ಮುಂದೆ ಹೊಸ ರೂಲ್ಸ್!‌

 ನವದೆಹಲಿ: ದೇಶದಲ್ಲಿ ಪದೇ ಪದೆ ರೈಲು ದುರಂತಗಳು ಸಂಭವಿಸುತ್ತಲೇ ಇದೆ. ಒಡಿಶಾದಲ್ಲಿ ಸಂಭವಿಸುಸಿದ್ದ ಭೀಕರ  ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು. ಈ ಸರಣಿ ರೈಲು ದುರಂತದ ಬೆನ್ನಲೇ ರೈಲ್ವೇ ಮಂಡಳಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇತ್ತೀಚೆಗೆ ರೈಲು ಅವಘಡಗಳು ಹೆಚ್ಚಾಗುತ್ತಲೇ ಇದೆ. ಈ ಹಿನ್ನಲೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಪ್ರಕಾರ ರೈಲು ಚಾಲಕರ ಗರಿಷ್ಠ ಕೆಲಸದ ಅವಧಿ 12 ಗಂಟೆಗಳನ್ನು ಮೀರಬಾರದು ಎಂದು ರೈಲ್ವೆ ಮಂಡಳಿಯು ಎಲ್ಲಾ ವಲಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ʼಆಪರೇಷನ್ ಅಜಯ್’2ನೇ ಹಂತದಲ್ಲಿ ಇಸ್ರೇಲ್​​ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

ರೈಲ್ವೆ ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಸಿಬ್ಬಂದಿಗಳ ಕರ್ತವ್ಯದ ಅವಧಿಗೆ ಸಂಬಂಧಿಸಿದ ಈ ಮಾರ್ಗಸೂಚಿಯಲ್ಲಿ ಚಾಲಕರ ಮತ್ತು ಸಿಬ್ಬಂದಿಗಳ ಒಂದು ಟ್ರಿಪ್‌ನ ಕರ್ತವ್ಯದ ಅವಧಿ 12 ಗಂಟೆಗಳನ್ನು ಮೀರಬಾರದು ಎಂದಿದೆ. ಆದರೆ ಸತತ 12 ಗಂಟೆಗಳ ನಿರಂತರ ಕೆಲಸದ ಅವಧಿಯಲ್ಲಿ ಚಾಲಕರಿಗೆ ಊಟ ಸೇರಿದಂತೆ ಇತರ ವಿಶ್ರಾಂತಿಗೆ ಸಮಯವೇ ದೊರಕುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಕಿಡಿಕಾರಿವೆ.

ಅತಿಯಾದ ಕೆಲಸದ ಅವಧಿಯಿಂದ ನಿದ್ದೆಗಣ್ಣಿನಲ್ಲಿ ಅಥವಾ ಆಯಾಸದ ವೇಳೆ ಚಾಲನೆ ಮಾಡುವುದು ಭೀಕರ ಅಪಘಾತಗಳಿಗೆ ಕಾರಣವಾಗಬಹುದು ಎಂದು ನಿಟ್ಟಿನಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎನ್ನಲಾಗಿದೆ.

296 ಜನರನ್ನು ಬಲಿ ಪಡೆದ ಜೂ.2ರ ಒಡಿಶಾ ರೈಲು ದುರಂತದಲ್ಲಿ ಗುರುತು ಪತ್ತೆಯಾಗದ 28 ಜನರ ಮತದೇಹಗಳಿಗೆ ಮಂಗಳವಾರ ಅಂತ್ಯಸಂಸ್ಕಾರ ನಡೆಸಲಾಯಿತು. ಈ ಶವಗಳಿಗೆ ಇಲ್ಲಿನ ಪಾಲಿಕೆಯ ಮಹಿಳಾ ಸ್ವಯಂಸೇವಕರು ಸ್ವಯಂಪ್ರೇರಿತವಾಗಿ ಅಗ್ನಿಸ್ಪರ್ಶ ಮಾಡಿದರು. ಅಪಘಾತ ನಡೆದು ನಾಲ್ಕು ತಿಂಗಳ ಕಾಲ ಈ ದೇಹಗಳನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಲೆಂದು ಇಲ್ಲಿನ ಏಮ್ಸ್‌ ಆಸ್ಪತ್ರೆಯ ಶವಾಗಾರದಲ್ಲಿ ಸಂಗ್ರಹಿಡಲಾಗಿತ್ತು. ಆದರೆ ಈ 28 ದೇಹಗಳನ್ನು ಯಾರೂ ಸ್ವೀಕರಿಸಿದ ಕಾರಣ ಅದರ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಿ ಸಿಬಿಐ ಆದೇಶದ ಮೇರೆಗೆ ಅಂತ್ಯ ಸಂಸ್ಕಾರ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

Shwetha M