ಬೆಳ್ಳುಳ್ಳಿ ಬೆಲೆ ಏರಿಕೆಯಾದ ಬೆನ್ನಲ್ಲೇ ನೀರುಳ್ಳಿ ಬೆಲೆ ಏರಿಕೆ! – ಕ್ವಿಂಟಾಲ್​ಗೆ 500 ರೂ. ಏರಿಕೆ ಕಂಡ ಉಳ್ಳಾಗಡ್ಡಿ ರೇಟ್

ಬೆಳ್ಳುಳ್ಳಿ ಬೆಲೆ ಏರಿಕೆಯಾದ ಬೆನ್ನಲ್ಲೇ ನೀರುಳ್ಳಿ ಬೆಲೆ ಏರಿಕೆ! – ಕ್ವಿಂಟಾಲ್​ಗೆ 500 ರೂ. ಏರಿಕೆ ಕಂಡ ಉಳ್ಳಾಗಡ್ಡಿ ರೇಟ್

ದಿನದಿಂದ ದಿನಕ್ಕೆ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ ಬೆಳ್ಳುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ಈರುಳ್ಳಿ ಬೆಲೆ ಏರಿಕೆ ಕಂಡಿದ್ದು, ಗೃಹಿಣಿಯರ ಕಣ್ಣಲ್ಲಿ ನೀರು ತರಿಸುತ್ತಿದೆ.

ಹೌದು, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಬೆಳ್ಳುಳ್ಳಿ ಬೆಲೆ ಏರಿಕೆ ಕಂಡ ಬೆನ್ನಲ್ಲೇ ಈರುಳ್ಳಿ ಬೆಲೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಪ್ರತಿ ಕ್ವಿಂಟಾಲ್‌ಗೆ 520 ರೂಪಾಯಿಯಷ್ಟು ಹೆಚ್ಚಳ ಕಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:‌ ರಾಷ್ಟ್ರ ರಾಜಧಾನಿ ಪ್ರವೇಶಿಸಲು ರೈತರು ಸಜ್ಜು! – ಬುಲ್ಡೋಜರ್‌ಗಳ ಸಮೇತ ಶಂಭು ಗಡಿಯತ್ತ ಹೊರಟ ರೈತರು!

ಈರುಳ್ಳಿ ಮೇಲಿನ ರಫ್ತು ನಿಷೇಧವನ್ನ ತೆಗದುಹಾಕಲು ಕೇಂದ್ರ ಸರ್ಕಾರ ಸಜ್ಜಾಗಿದೆ ಅಂತ ಹೇಳಲಾಗ್ತಿದೆ. ಈ ಹಿನ್ನಲೆ ದೇಶದಲ್ಲಿ ಈರುಳ್ಳಿ ದರ ಏರಿಕೆ ಕಂಡಿದೆ. ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಲಸಲ್​ಗಾಂವ್​ನಲ್ಲಿ ಸಾಮಾನ್ಯ ಈರುಳ್ಳಿಯ ಸಗಟು ಮಾರಾಟ ದರ ಕ್ಷಿಂಟಾಲ್​ಗೆ 1800 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಶೇ.40ರಷ್ಟು ಈರುಳ್ಳಿ ಬೆಲೆಯಲ್ಲಿ ಹೆಚ್ಚಳಕಂಡಿದೆ.. ಇದೇ ಈರುಳ್ಳಿ ದರ ಫೆಬ್ರವರಿ 17ರಂದು ಕ್ವಿಂಟಾಲ್​ಗೆ 1,280 ರೂಪಾಯಿ ಇದ್ದಿದ್ದು ಕೇವಲ ಮೂರೇ ದಿನಕ್ಕೆ 520 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಬೆಳ್ಳುಳ್ಳಿ ಪ್ರತಿ ಕೆ.ಜಿಗೆ 600 ರೂಪಾಯಿ!

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳುಳ್ಳಿ ದರ ಕೆ.ಜಿಗೆ 500 ರೂಪಾಯಿ ದಾಟಿದೆ. ಮಹಾರಾಷ್ಟ್ರದಲ್ಲಿ ಪ್ರತಿ ಕೆ.ಜಿ ಬೆಳ್ಳುಳ್ಳಿ ಬೆಲೆ 600 ರೂಪಾಯಿಯಾಗಿದೆ. ರಾಜ್ಯದಲ್ಲೂ ಬೆಳ್ಳುಳ್ಳಿ ಬೆಲೆ 540 ರೂಪಾಯಿಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಬಿತ್ತನೆ ಪ್ರಮಾಣ ಇಳಿಕೆಯಾಗಿರೋದ್ರಿಂದ ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಭಾರೀ ಇಳಕೆ ಕಂಡ ಕಾರಣ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ.

ಒಟ್ಟಿನಲ್ಲಿ 600 ರೂಪಾಯಿ ಸನಿಹದಲ್ಲಿರೋ ಬೆಳ್ಳುಳ್ಳಿಗೆ ಠಕ್ಕರ್​ ಕೊಡೋಕೆ ಈರುಳ್ಳಿ ಸಹ ಸಜ್ಜಾಗಿ ನಿಂತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸಲು ಅಣಿಯಾಗಿದೆ.. ಲೋಕ ಸಭಾ ಚುನಾವಣೆ ಹೊತ್ತಲ್ಲೇ ಒಂದಾದ ಮೇಲೊಂದರಂತೆ ದಿನ ಬಳಕೆ ವಸ್ತಗಳು ದುಬಾರಿಯಾಗ್ತಿರೋದು ಗ್ರಾಹಕರ ಕಣ್ಣನ್ನ ಕೆಂಪಗಾಗಿಸಿದೆ. ಈರುಳ್ಳಿ, ಬೆಳ್ಳುಳ್ಳಿ ಸಾಲಿಗೆ ಮತ್ತಿನ್ಯಾವ ತರಕಾರಿ ಸೇರಿಕೊಂಡು ಗ್ರಾಹಕರಿಗೆ ಶಾಕ್ ನೀಡುತ್ತೆ ಅಂತ ಕಾದು ನೋಡಬೇಕಿದೆ.

Shwetha M