4 ಗ್ಯಾರಂಟಿಗಳ ಜಾರಿ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಗೆ ರಾಜ್ಯ ಸರ್ಕಾರದಿಂದ ಪ್ಲಾನ್! – ಏನಿದು ಗೃಹ ಆರೋಗ್ಯ ಯೋಜನೆ?

4 ಗ್ಯಾರಂಟಿಗಳ ಜಾರಿ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಗೆ ರಾಜ್ಯ ಸರ್ಕಾರದಿಂದ ಪ್ಲಾನ್! – ಏನಿದು ಗೃಹ ಆರೋಗ್ಯ ಯೋಜನೆ?

ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಮಾದರಿಯಲ್ಲೇ ಮತ್ತೊಂದು ಯೋಜನೆ ಜಾರಿ ಮಾಡಲು ಪ್ಲಾನ್‌ ಮಾಡುತ್ತಿದೆ. ಆರೋಗ್ಯ ಇಲಾಖೆ ಗೃಹ ಆರೋಗ್ಯ ಯೋಜನೆಯನ್ನು ಜಾರಿ ಮಾಡಲು ಚಿಂತನೆ ನಡೆಸುತ್ತಿದ್ದು, ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ – ಹಾಸನ ಕ್ಷೇತ್ರದಿಂದ ಮತ್ತೆ ಲೋಕಸಭಾ ಅಖಾಡಕ್ಕೆ ಹೆಚ್.ಡಿ ದೇವೇಗೌಡ ಸ್ಪರ್ಧೆ?

ಆರೋಗ್ಯ ಇಲಾಖೆ ರಾಜ್ಯದ ಜನತೆಗೆ ಗೃಹ ಆರೋಗ್ಯ ಜಾರಿ ಮಾಡಲು ತೀರ್ಮಾನ ಮಾಡಿದೆ. ಮನೆ ಬಾಗಿಲಿಗೆ ವೈದ್ಯರನ್ನ ಕಳುಹಿಸಿ ತಪಾಸಣೆ ಮಾಡಿಸಲು ಚರ್ಚೆ ನಡೆಸಲಾಗುತ್ತಿದೆ. ಮನೆ ಮನೆಗೆ ತೆರಳಿ ಬಿಪಿ, ಶುಗರ್, ಜ್ವರ, ಸಣ್ಣ ಪುಟ್ಟ ಖಾಯಿಲೆಗಳಿಗೆ ಚಿಕಿತ್ಸೆ ನೀಡಿಸಲು ಮುಂದಾಗಿದೆ. ಈ ಯೋಜನೆ ಮೊದಲ ಬಾರಿಗೆ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿ ಸಾಧಕ-ಬಾಧಕಗಳನ್ನ ಪರಿಶೀಲನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಈ ಯೋಜನೆ ಜಾರಿ ಮಾಡಲು ಪೂರ್ವ ತಯಾರಿ ನಡೆಯುತ್ತಾ ಇದ್ದು, ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಲಿದೆ. ಕ್ಯಾಬಿನೆಟ್ ನಲ್ಲಿ ಅಪ್ರೂವ್ ಆದ ಬಳಿಕ ಪ್ರಾಯೋಗಿಕವಾಗಿ ಎಂಟು ಜಿಲ್ಲೆಗಳಲ್ಲಿ ಜಾರಿ ಮಾಡಲು ಮುಂದಾಗಿದೆ. ಬೇಕಾಗುವ ಸಿಬ್ಬಂದಿಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ವೈದ್ಯರನ್ನೇ ಬಳಸಿಕೊಳ್ಳಲಿದ್ದಾರಂತೆ. ಬೇಕಾಗುವ ಖರ್ಚು ಮತ್ತು ವೆಚ್ಚಗಳ ಬಗ್ಗೆ ಪರಿಶೀಲನೆ ನಡೆಯುತ್ತಾ ಇದೆ.

suddiyaana