ಹುಬ್ಬಳ್ಳಿ ಕೇಸ್ ಬೆನ್ನಲ್ಲೇ ದತ್ತ ಪೀಠ ಕೇಸ್ ಕೂಡ ರೀ ಓಪನ್! – ಹಿಂದೂ ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಲು ಮುಂದಾಯ್ತಾ ರಾಜ್ಯ ಸರ್ಕಾರ?
ರಾಮಮಂದಿರ ಲೋಕಾರ್ಪಣೆ ಹೊತ್ತಲ್ಲೇ ರಾಜ್ಯ ಸರ್ಕಾರ 30 ವರ್ಷಗಳ ಹಿಂದಿನ ರಾಮಜನ್ಮ ಭೂಮಿ ಗಲಭೆ ಕೇಸ್ ರೀಓಪನ್ ಮಾಡಿತ್ತು. ಪ್ರಕರಣ ಸಂಬಂಧ ಶ್ರೀಕಾಂತ ಪೂಜಾರಿ ಎಂಬ ಆರೋಪಿಯನ್ನೂ ಬಂಧಿಸಿತ್ತು. ಈ ಸಂಬಂಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಬಿಜೆಪಿ ನಾಯಕರು ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ನಡುವೆಯೇ ರಾಜ್ಯ ಸರ್ಕಾರ ಮತ್ತೊಂದು ಪ್ರಚೋದನಕಾರಿ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ವರದಿಯಾಗಿದೆ. 2017ರ ದತ್ತಪೀಠ ಹೋರಾಟಗಾರ ಮೇಲಿನ ಕೇಸ್ ರೀ ಓಪನ್ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮನ್ಸ್ ನೀಡಿದ್ದಾಗಿ ಹಿಂದು ಕಾರ್ಯಕರ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಪಾಪಿ.. – ಕೆಲಸಕ್ಕೆ ಸೇರಿದ ಕೆಲವೇ ಹೊತ್ತಲ್ಲಿ ಮಾಲೀಕನ ಮಗಳನ್ನು ಕಿಡ್ನ್ಯಾಪ್ ಮಾಡಿದ!
ಹೌದು, ರಾಜ್ಯದಲ್ಲಿ ರಾಮಜನ್ಮ ಭೂಮಿ ಗಲಭೆ ಕೇಸ್ ವಿಚಾರವಾಗಿ ವಿವಾದವೆದ್ದಿದೆ. ಬಿಜೆಪಿ ನಾಯಕರ ಪ್ರತಿಭಟನೆ ಬೆನ್ನಲ್ಲೇ 7 ವರ್ಷದ ಬಳಿಕ ದತ್ತಪೀಠ ಹೋರಾಟಗಾರ ವಿರುದ್ಧ ತನಿಖೆ ನಡೆಯುವ ಸಾಧ್ಯತೆ ಇದೆ. 2017ರಲ್ಲಿ ದತ್ತಪೀಠದ ಗೋರಿ ಒಡೆದಿರುವ ಪ್ರಕರಣಕ್ಕೆ ಸಂಬಂದಪಟ್ಟಂತೆ ಜನವರಿ 8ಕ್ಕೆ ವಿಚಾರಣೆಗೆ ಹಾಜರಾಗಲು ಕೋರ್ಟ್ ಸಮನ್ಸ್ ನೀಡಿದೆ. ಬಿಜೆಪಿ ಹಿಂಪಡೆದ ಕೇಸ್ಗೆ ಕಾಂಗ್ರೆಸ್ ಮರು ಜೀವ ನೀಡಿದಂತಾಗಿದೆ. 14 ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಮರು ತನಿಖೆ ನಡೆಸುವ ಸಾಧ್ಯತೆ ಇದೆ.
2017ರಲ್ಲಿ ದತ್ತಪೀಠದಲ್ಲಿ ಗೋರಿ ಒಡೆದಿದ್ದ ಕಾರಣಕ್ಕೆ ಇವರ ಮೇಲೆ ಕೇಸ್ ದಾಖಲು ಮಾಡಲಾಗಿತ್ತು. ಬಳಿಕ ಬಿಜೆಪಿ ಸರ್ಕಾರ ಈ ಕೇಸ್‌ಗಳನ್ನು ಹಿಂಪಡೆದುಕೊಂಡಿತ್ತು ಈಗ ಜ.8ಕ್ಕೆ ಇದೇ ಪ್ರಕರಣದ ವಿಚಾರಣೆಗೆ ಒಳಗಾಗುವಂತೆ ಕೋರ್ಟ್ ಸಮನ್ಸ್ ನೀಡಿದೆ. ಹಿಂದೂ ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಆರೋಪ ಮಾಡಲಾಗಿದೆ.