ಪಾಕಿಸ್ತಾನದಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭಿಕ್ಷುಕರ ರಫ್ತು – ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ

ಪಾಕಿಸ್ತಾನದಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭಿಕ್ಷುಕರ ರಫ್ತು – ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ

ಪಾಪಿ ಪಾಕಿಸ್ತಾನದಲ್ಲಿ ಕಡು ಬಡತನದ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಕಡುಬಡತನ ಜನಸಂಖ್ಯೆ ಹೆಚ್ಚಾಗಿದ್ದು, ಶೇಕಡಾ 40 ರಷ್ಟು ಮಂದಿ ಕಡು ಬಡತನದಲ್ಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಈ ಬೆನ್ನಲ್ಲೇ ವಿವಿಧ ದೇಶಗಳಿಗ ಭಯೋತ್ಪಾದಕರನ್ನು ಮತ್ತು ಹಣಕ್ಕಾಗಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡುತ್ತಿದ್ದ ಪಾಕಿಸ್ತಾನದಿಂದ ಇದೀಗ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭಿಕ್ಷುಕರ ರಫ್ತು ಹೆಚ್ಚಾಗಿದೆ ಎಂದು ವರದಿಯಾಗಿದೆ.

ಸದ್ಯ ಪಾಕಿಸ್ತಾನದ ಜನತೆಯನ್ನು ಭೀಕರವಾಗಿ ಕಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಜನರಿಗೆ ಜೀವನ ಮಾಡುವುದು ಕಷ್ಟವಾಗಿ ಪರಿಣಮಿಸಿದೆ. ಹಣದುಬ್ಬರಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಈಗ ಭಿಕ್ಷುಕರ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗಾಗಿ ಪಾಕಿಸ್ತಾನದ ಭಿಕ್ಷುಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಪಾಕ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಪಾಪಿ ಪಾಕಿಸ್ತಾನ! – ದೇಶದಲ್ಲಿ ಕಡುಬಡತನ ಶೇ. 39.4ಕ್ಕೆ ಏರಿಕೆ!

ಇನ್ನು ಪಾಕಿಸ್ತಾನದ ಭಿಕ್ಷುಕರು ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಧಾರ್ಮಿಕ ವೀಸಾ ಬಳಸಿ ವಲಸೆ ಹೋಗುತ್ತಿದ್ದಾರೆ. ಇವರೆಲ್ಲರೂ ಉಮ್ರಾ ವೀಸಾ (ಪವಿತ್ರ ಸ್ಥಳಗಳ ಭೇಟಿಗಾಗಿ ಕೊಡುವ ವೀಸಾ)ಗಳನ್ನು ಪಡೆದುಕೊಂಡು ಸೌದಿ ಅರೇಬಿಯಾಗೆ ತೆರಳಿ ಬಳಿಕ ಅಲ್ಲಿ ಭಿಕ್ಷೆ ಬೇಡಲು ಆರಂಭಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೆಕ್ಕಾದ ಗ್ರಾಂಡ್‌ ಮಸೀದಿಯ ಬಳಿ ಜೇಬುಗಳ್ಳತನ ಆರೋಪದಡಿ ಬಂಧನಕ್ಕೊಳಪಟ್ಟ ಬಹುತೇಕ ಕಳ್ಳರು ಪಾಕಿಸ್ತಾನಿಯರೇ ಆಗಿದ್ದಾರೆ. ಹೀಗೆ ವಿದೇಶಗಳಿಗೆ ಹೋದ ಭಿಕ್ಷುಕರಲ್ಲಿ ಶೇ.90ರಷ್ಟು ಮಂದಿ ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಜೈಲು ಪಾಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನದಿಂದ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿರುವ ಭಿಕ್ಷುಕರನ್ನು ತಡೆಗಟ್ಟುವಂತೆ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಮತ್ತು ಇರಾಕ್‌ ದೇಶಗಳು ಈಗಾಗಲೇ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನದ ಬಡವರು ಯಾತ್ರಿಕರ ವೇಷದಲ್ಲಿ ನಮ್ಮ ದೇಶಗಳನ್ನು ಪ್ರವೇಶಿಸುತ್ತಿದ್ದಾರೆ. ಬಳಿಕ ಇಲ್ಲೇ ಉಳಿದುಕೊಂಡು ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಈ ದೇಶಗಳು ಪಾಕಿಸ್ತಾನಕ್ಕೆ ದೂರು ಸಲ್ಲಿಸಿವೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 1 ಕೋಟಿ ಪಾಕಿಸ್ತಾನಿಯರು ವಿದೇಶಗಳಲ್ಲಿ ವಾಸಿಸುತ್ತಿದ್ದು, ಇವರೆಲ್ಲರೂ ಭಿಕ್ಷೆ ಬೇಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಲವು ಬಾರಿ ಪಾಕಿಸ್ತಾನದಿಂದ ಮಧ್ಯಪ್ರಾಚ್ಯಕ್ಕೆ ತೆರಳುವ ವಿಮಾನಗಳು ಈ ಭಿಕ್ಷುಕರಿಂದಲೇ ತುಂಬಿರುತ್ತದೆ ಎಂದು ಸಾಗರೋತ್ತರ ಪಾಕಿಸ್ತಾನಿಯ ಸಮಿತಿಯ ಕಾರ್ಯದರ್ಶಿ ಜೀಶನ್‌ ಖಾನ್‌ಜಾದಾ ಹೇಳಿದ್ದಾರೆ.

Shwetha M