ಕೋವಿಶೀಲ್ಡ್ ಲಸಿಕೆಯನ್ನು ಜಾಗತಿಕವಾಗಿ ಹಿಂಪಡೆದ ಆಸ್ಟ್ರಾಜೆನೆಕಾ! – ಲಸಿಕೆ ಪಡೆದವರ ಕತೆಯೇನು?
ಕಳೆದ ಮೂರು ವರ್ಷಗಳ ಹಿಂದೆ ಕೊರೊನಾ ಮಹಾಮಾರಿ ಜನರ ಜೀವ ಹಿಂಡಿತ್ತು. ಕೊವಿಡ್‌ನಿಂದಾಗಿ ಲೆಕ್ಕವಿಲ್ಲದಷ್ಟು ಮಂದಿ ಜೀವ ಕಳೆದುಕೊಂಡಿದ್ದರು. ಜೀವ ಉಳಿಸಿಕೊಳ್ಳುವ ಸಲುವಾಗಿ ಆರೋಗ್ಯ ಇಲಾಖೆ ಸೂಚನೆಯಂತೆ ಕೋಟ್ಯಂತರ ಮಂದಿ ಕೋವಿಡ್ ಲಸಿಕೆ ಪಡೆದಿದ್ದರು. ಇದೀಗ ಲಸಿಕೆಯಿಂದ ಅಪರೂಪದ ಅಡ್ಡಪರಿಣಾಮ ಉಂಟಾಗಬಹುದು ಎಂದು ಒಪ್ಪಿಕೊಂಡ ಬಳಿಕ ಕೋವಿಡ್ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಅಸ್ಟ್ರಾಜೆನೆಕಾ ಆರಂಭಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅಯೋಧ್ಯೆಗೆ ಬರುವ ಭಕ್ತರಿಗೆ ತಿಲಕ ಇಡುವುದೇ ಈತನ ಕೆಲಸ – ಪುಟ್ಟ ಬಾಲಕನ ದಿನದ ಆದಾಯ ಎಷ್ಟು ಗೊತ್ತಾ?
ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಕೋಟ್ಯಂತರ ಮಂದಿ ಪಡೆದಿದ್ದಾರೆ. ಆದರೆ ಸ್ವಲ್ಪ ದಿನದ ಬಳಿಕ ಈ ಲಸಿಕೆಗಳ ವಿರುದ್ಧ ಅಪಶೃತಿ ಕೇಳಿಬರಲು ಶುರುವಾಯಿತು. ಆದರೆ ಅದಾಗಲೇ ಪ್ರಪಂಚದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಲಸಿಕೆಯನ್ನು ಪಡೆದುಕೊಂಡಿದ್ದರು. ಆದರೆ ಕೋವಿಶೀಲ್ಡ್ ಲಸಿಕೆ ಬಲು ಅಪರೂಪವಾಗಿ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟೀಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಇತ್ತೀಚೆಗೆ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ. ಇದೀಗ ಈ ಲಸಿಕೆಯನ್ನು ವಾಣಿಜ್ಯ ಕಾರಣಗಳಿಗಾಗಿ ಜಾಗತಿಕ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಗುತ್ತಿದೆ ಅಂತಾ ಘೋಷಣೆ ಮಾಡಿದೆ. ಲಸಿಕೆಯನ್ನು ಇನ್ಮುಂದೆ ತಯಾರಿಸಲಾಗುವುದಿಲ್ಲ ಅಥವಾ ಸರಬರಾಜು ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ನವೀಕರಿಸಿದ ಲಸಿಕೆಗಳ ಹೆಚ್ಚುವರಿಯಾಗಿ ಲಭ್ಯವಿದೆ. ಇದು ಲಸಿಕೆಗೆ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು ತನ್ನ ಮಾರ್ಕೆಟಿಂಗ್ ಅಧಿಕಾರವನ್ನು ಸ್ವಯಂಪ್ರೇರಣೆಯಿಂದ ಹಿಂತೆಗೆದುಕೊಂಡಿರುವುದರಿಂದ ಲಸಿಕೆಯನ್ನು ಇನ್ಮುಂದೆ ಯುರೋಪಿಯನ್ ಒಕ್ಕೂಟದಲ್ಲಿ ಬಳಸಲು ಅಧಿಕೃತಗೊಳಿಸಲಾಗಿಲ್ಲ. ಹಿಂಪಡೆಯಲು ಅರ್ಜಿಯನ್ನು ಮಾರ್ಚ್ 5 ರಂದು ಸಲ್ಲಿಸಲಾಗಿತ್ತು. ಮಂಗಳವಾರದಿಂದ (ಮಾ.7) ಜಾರಿಗೆ ಬಂದಿದೆ.