IND Vs PAK ಪಂದ್ಯಗಳು ಡಬಲ್ – ಇಂಡೋ-ಪಾಕ್ ನಡುವೆ ಟೆಸ್ಟ್ ಮ್ಯಾಚ್?
ಹಣಕ್ಕಾಗಿ ರೂಲ್ಸ್ ನೇ ಬದಲಿಸಿತಾ ICC?

ಇಂಡೋ-ಪಾಕ್ ಮ್ಯಾಚ್ ಅಂದ್ರೆ ಕ್ರಿಕೆಟ್ ಲೋಕವೇ ಕ್ಯೂರಿಯಸ್ ಆಗಿಬಿಡುತ್ತೆ. ಮಿಡ್ ನೈಟಲ್ಲಿ ಮ್ಯಾಚ್ ಇಟ್ರೂ ನಿದ್ದೆಗೆಟ್ಟು ಪಂದ್ಯ ನೋಡ್ತಾರೆ. ಯಾಕಂದ್ರೆ ಈ ಪಂದ್ಯಗಳಿಗೆ ಇರುವಂಥ ಕ್ರೇಜೇ ಅಂಥಾದ್ದು. ಐಸಿಸಿಗೂ ಕೂಡ ಹಣದ ಹೊಳೆಯೇ ಹರಿದುಬರುತ್ತೆ. ಆದ್ರೆ ಐಸಿಸಿ ಟೂರ್ನಮೆಂಟ್ಸ್ ಅಥವಾ ಏಷ್ಯಾಕಪ್ಗಳಲ್ಲಿ ಮಾತ್ರವೇ ಉಭಯ ತಂಡಗಳು ಎದುರು ಬದುರಾಗೋದು. ಐಸಿಸಿ ಈವೆಂಟ್ಸ್ಗಳಲ್ಲಂತೂ ಒಂದು ಪಂದ್ಯಕ್ಕಷ್ಟೇ ಸೀಮಿತ. ಯಾಕಂದ್ರೆ ಪಾಕಿಸ್ತಾನ ಗೆಲ್ಲಲ್ಲ ನೆಕ್ಸ್ಟ್ ರೌಂಡ್ಗೆ ಬರಲ್ಲ ಭಾರತಕ್ಕೆ ಎದುರಾಳಿ ಆಗಲ್ಲ. ಇದೇ ಕಾರಣಕ್ಕೆ ಐಸಿಸಿ ರೂಲ್ಸ್ನೇ ಚೇಂಜ್ ಮಾಡೋಕೆ ಮುಂದಾಗಿದೆ. ಟೆಸ್ಟ್ ಮ್ಯಾಚ್ಗಳಲ್ಲೂ ಇಂಡೋ-ಪಾಕ್ ಫೈಟ್ ಶುರುವಾಗುತ್ತೆ.
ಇದನ್ನೂ ಓದಿ : IND Vs BAN ಸರಣಿಗೆ ಗ್ರೀನ್ ಸಿಗ್ನಲ್ – ಅಫ್ಘಾನಿಸ್ತಾನಕ್ಕೆ ಕೈ ಕೊಡುತ್ತಾ BCCI?
ಭಾರತ-ಪಾಕ್ ಪಂದ್ಯಗಳನ್ನ ನೋಡ್ಬೇಕಂದ್ರೆ ಐಸಿಸಿ ಟೂರ್ನಮೆಂಟ್ಸ್ ಅಥವಾ ಏಷ್ಯಾಕಪ್ ಟೂರ್ನಿಗಳನ್ನೇ ಕಾಯ್ಬೇಕು. ಹಾಗಂತ ಇದು ಬರೀ ಪಂದ್ಯ ಅಥವಾ ಮೈದಾನಕ್ಕೆ ಮಾತ್ರ ಸೀಮಿತ ಆಗಿರೋದಿಲ್ಲ. ಎರಡೂ ರಾಷ್ಟ್ರಗಳಿಗೆ ಪ್ರತಿಷ್ಠೆಯೂ ಹೌದು. ಹಾಗೇ ಫ್ಯಾನ್ಸ್ಗೂ ಕೂಡ ಎಮೋಷನಲಿ ಕನೆಕ್ಟ್ ಆಗಿರುತ್ತೆ. ಌಂಡ್ ಇತ್ತೀಚಿನ ವರ್ಷಗಳಲ್ಲಿ ಭಾರತವೇ ಗೆಲ್ಲೋದು ಅನ್ನೋದು ಗೊತ್ತಿದ್ರೂ ಕೂಡ ಕ್ರೇಜ್ ಏನೂ ಕಮ್ಮಿ ಆಗಿಲ್ಲ. ಸೋ ಇಂಡೋ-ಪಾಕ್ ಮ್ಯಾಚಸ್ ಅಂದ್ರೆ ಬರೀ ಫ್ಯಾನ್ಸ್ ಅಷ್ಟೇ ಅಲ್ಲ ಐಸಿಸಿಗೂ ಹಣದ ಹಬ್ಬವೇ. ಹೀಗಾಗಿ ಕ್ರೇಜ್ ಡಬಲ್ ಮಾಡೋಕೆ ಹೆಚ್ಚಿನ ಹಣ ಗಳಿಸೋಕೆ ಅಂತ್ಲೇ ಹೊಸ ಪ್ಲ್ಯಾನ್ ಮಾಡಿದೆ.
ಐಸಿಸಿ ಪಂದ್ಯಾವಳಿಯಲ್ಲಿ ನಿಯಮಗಳನ್ನೇ ಬದಲಿಸಲು ಪ್ಲ್ಯಾನ್!
ಐಸಿಸಿ ಏಕದಿನ ಮತ್ತು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚಸ್ ಹೆಚ್ಚಳಕ್ಕೆ ಪ್ಲ್ಯಾನ್ ನಡೆದಿದೆ. ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯು ಪಂದ್ಯಾವಳಿಯ ನಿಯಮಗಳನ್ನೇ ಬದಲಾಯಿಸಲು ನಿರ್ಧರಿಸಿದೆ. ಪ್ರಸ್ತುತ, ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಸೂಪರ್ 8 ಸುತ್ತಿನ ಬದಲು ಸೂಪರ್ 10 ಸುತ್ತನ್ನು ಇಂಟ್ರೊಡ್ಯೂಸ್ ಮಾಡಬಹುದು. ಆಗ ಭಾರತ ಮತ್ತು ಪಾಕಿಸ್ತಾನ ಎರಡನೇ ಸುತ್ತಿನಲ್ಲಿಯೂ ಒಂದೇ ಗುಂಪಿನಲ್ಲಿ ಆಡಬಹುದು. ಌಂಡ್ ನೆಕ್ಸ್ಟ್ ಇಯರ್ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ತಂಡಗಳ ಸಂಖ್ಯೆಯನ್ನು 14 ರಿಂದ 12ಕ್ಕೆ ಇಳಿಸಲಾಗುತ್ತೆ. ಸೂಪರ್ 7 ಸುತ್ತನ್ನು ಪರಿಚಯಿಸಲು ಐಸಿಸಿ ಮುಂದಾಗಿದೆ. ಸೂಪರ್ 7ನಲ್ಲಿ ರೌಂಡ್ ರಾಬಿನ್ ನಡೆಸೋದ್ರಿಂದ ಭಾರತ ಮತ್ತು ಪಾಕಿಸ್ತಾನಕ್ಕೆ ನಾಕೌಟ್ ಪಂದ್ಯಗಳಿಗೂ ಮೊದಲೇ ಎರಡು ಬಾರಿ ಮುಖಾಮುಖಿ ಆಗಬಹುದು. ನಾಕೌಟ್ ಪ್ರವೇಶಿಸಿದರೆ ಮತ್ತೊಂದು ಬಾರಿ ಆಡುವ ಸಾಧ್ಯತೆ ಇದೆ. ಸೋ ಅಲ್ಲಿಗೆ ಒಂದೇ ಈವೆಂಟ್ನಲ್ಲಿ ಮೂರು ಪಂದ್ಯಗಳಲ್ಲಿ ಆಡಿದಂತಾಗುತ್ತೆ.
ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ನಲ್ಲೂ ಮುಖಾಮುಖಿಗೆ ಸಜ್ಜು!
ಇನ್ನು ವೈಟ್ ಬಾಲ್ ಟೂರ್ನಮೆಂಟ್ಗಳಲ್ಲಿ ಮಾತ್ರವೇ ಉಭಯ ತಂಡಗಳು ಎದುರು ಬದುರಾಗ್ತಿವೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನ ಕ್ರೇಜ್ ಹೆಚ್ಚಿಸಲು ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸಲು ಮುಂದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮೊದಲು ಸೆಮಿಫೈನಲ್‌ಗಳನ್ನು ಪರಿಚಯಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ WTC ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳು ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಆದರೆ, ಸೆಮಿಫೈನಲ್‌ಗಳನ್ನು ಮಾಡಿದ್ರೆ ಇತರ ತಂಡಗಳು ಫೈನಲ್ ತಲುಪುವ ಅವಕಾಶವನ್ನು ಪಡೆಯುತ್ತವೆ. ಐಸಿಸಿ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಅಫ್ಘಾನಿಸ್ತಾನ, ಐರ್ಲೆಂಡ್ ಮತ್ತು ಜಿಂಬಾಬ್ವೆಗಳನ್ನು ಸೇರಿಸುವ ಮೂಲಕ 12 ತಂಡಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ. ಹಾಗೇನಾದ್ರೂ ಆದ್ರೆ ಭಾರತ ಮತ್ತು ಪಾಕ್ ತಂಡಗಳು ಟೆಸ್ಟ್ ಮಾದರಿಯಲ್ಲೂ ಮುಖಾಮುಖಿ ಆಗೋ ಚಾನ್ಸಸ್ ಜಾಸ್ತಿ ಇರುತ್ತೆ.

ನೋಡಿರಿ

