ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸೋಕೆ BJP ರೆಡಿ – ಯಾರಾಗ್ತಾರೆ ಮುಖ್ಯಮಂತ್ರಿ?

ಪಶ್ಚಿಮ ಬಂಗಾಳದ ಚುನಾವಣೆಯ ಫಲಿತಾಂಶ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಮಮತಾ ಬ್ಯಾನರ್ಜಿಯ ಭದ್ರಕೋಟೆಯನ್ನು ಒಡೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ. 200 ಕ್ಕೂ ಅಧಿಕ ಕ್ಷೇತ್ರವನ್ನು ಗೆಲ್ಲುವ ಮೂಲಕ ಬಂಗಾಳದಲ್ಲಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷ ಸಜ್ಜಾಗಿದೆ. ಇದೀಗ ಬಂಗಾಳದಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದ್ದು, ಹಲವು ದಿಗ್ಗಜರ ಹೆಸರು ಕೇಳಿ ಬರುತ್ತದೆ.
ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ಎದುರು ಈ ಬಾರಿ ಸೋಲನ್ನು ಕಂಡಿದ್ದಾರೆ. ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಇದೀಗ ಬಿಜೆಪಿ ಸಿದ್ದವಾಗಿದ್ದು, ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನ ನೀಡಬಹುದು ಎಂದು ಹೇಳಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಪ್ರಚಾರದ ಸಮಯದಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದವರನ್ನೇ ಮುಖ್ಯಮಂತ್ರಿಯನ್ನಾಗಿ ನೇಮಿಸುತ್ತೇವೆ ಎಂದು ಒತ್ತಿ ಒತ್ತಿ ಹೇಳಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ತರಕಾರಿ ದರಕ್ಕೆ ತಲೆ ಗಿರಗಿರ – ಡಬಲ್ ರೇಟ್.. ಗ್ರಾಹಕರು ಶಾಕ್..!
ಪ್ರಚಾರದ ಸಮಯದಲ್ಲಿಯೂ ಬಂಗಾಳದ ಮಹಿಳೆಯರ ಸುರಕ್ಷತೆಯ ಕುರಿತು ಬಿಜಿಪಿ ಪ್ರಣಾಳಿಕೆ ಹೊರಡಿಸಿತ್ತು. ಈ ಬಾರಿ ವಿಶೇಷವಾಗಿ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಪಕ್ ಸಫಲವಾಗಿದೆ. ಹೀಗಾಗಿ ಬಂಗಾಳದಲ್ಲಿ ಮಹಿಳಾ ಮುಖ್ಯಮಂತ್ರಿಯನ್ನು ನೇಮಿಸುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸದ್ಯ ದೆಹಲಿಯಲ್ಲಿ ರೇಖಾ ಗುಪ್ತ ಮಾತ್ರ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಈ ಪಟ್ಟಿಗೆ ಇದೀಗ ಪಶ್ಚಿಮ ಬಂಗಾಳ ಸೇರುವ ಸಾಧ್ಯತೆ ಇದೆ.
ಇನ್ನು ಬಂಗಾಳದ ಪ್ರಮುಖ ಬಿಜೆಪಿ ನಾಯಕಿಯರನ್ನು ನೋಡುವುದಾದರೆ ಅಗ್ನಿಮಿತ್ರ ಪಾಲ್ ಮತ್ತು ರೂಪಾ ಗಂಗೂಲಿ ಮುಂಚೂಣಿಯಲ್ಲಿದ್ದಾರೆ. ರೂಪಾ ಗಂಗೂಲಿ ಮಹಾಭಾರತದ ದ್ರೌಪದಿ ಪಾತ್ರದಲ್ಲಿ ಇಡೀ ದೇಶಕ್ಕೆ ಚಿರಪರಿಚಿತರು. ಅವರು ರಾಜ್ಯಸಭಾ ಸಂಸದೆಯೂ ಆಗಿದ್ದಾರೆ. ಸೋನಾರ್ಪುರ್ ದಕ್ಷಿಣ ಶಾಸಕಿಯಾಗಿದ್ದರೆ, ಬಂಗಾಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರಿಂದ ತಳಮಟ್ಟದ ಸಂಪರ್ಕವನ್ನು ಹೊಂದಿದ್ದಾರೆ.
ಟಿಎಂಸಿಯ ಮಾಜಿ ನಾಯಕ ಹಾಗೂ ಮಮತಾ ಅವರ ಆಪ್ತ ಸಹಾಯಕನಾಗಿದ್ದ ಸುವೇಂದು ಅಧಿಕಾರಿ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರಲ್ಲಿ ಪ್ರಮುಖರು. , ಸುವೇಂದು ಅವರು ತಳಮಟ್ಟದ ಸಂಪರ್ಕ ಹೊಂದಿದ್ದು, ಈ ಬಾರಿ ಮಮತಾ ಭದ್ರಕೋಟೆ ಎನಿಸಿಕೊಂಡಿದ್ದ ಭವಾನಿಪುರದಲ್ಲಿಯೇ ಅವರಿಗೆ ಸೋಲುಣಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸುವೇಂದು 2021 ರಲ್ಲಿ ಲಂಚ ಪ್ರಕರಣವೊಂದರದಲ್ಲಿ ಸಿಲುಕಿದ್ದರು. ಹೀಗಾಗಿ ಬಿಜೆಪಿ ಇವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವುದು ಕೊಂಚ ಅನುಮಾನ ಎನ್ನಲಾಗುತ್ತಿದೆ.

ನೋಡಿರಿ

