ಸಾವಿಗೆ ಹೆದರಲಿಲ್ಲ, ವಿಮಾನವನ್ನೇ ಪತನಗೊಳಿಸಲು ಬಯಸಿದ್ದೆ – ಸತ್ಯ ಬಾಯಿಬಿಟ್ಟ ಫ್ಲೈದುಬೈ ಕೋ- ಪೈಲಟ್

ಫ್ಲೈದುಬೈ ವಿಮಾನದಲ್ಲಿ ನಡೆದ ಭಯಾನಕ ಘಟನೆ ಇದೀಗ ಮತ್ತಷ್ಟು ಆತಂಕ ಮೂಡಿಸಿದೆ. 170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಕೊಡಲಿಯಿಂದ ದಾಳಿ ಮಾಡಿ, ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಬಳಿಕ ತನಿಖಾಧಿಕಾರಿಗಳ ಮುಂದೆ ಹಮಾಮ್ ಅಲ್-ಹಮ್ಮಾಮಿ ನೀಡಿದ್ದಾನೆ ಎನ್ನಲಾದ ಹೇಳಿಕೆ ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ತಾನು ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನಗೊಳಿಸಲು ಬಯಸಿದ್ದೆ, ಸಾವಿಗೆ ತಾನು ಹೆದರುತ್ತಿರಲಿಲ್ಲ ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ.
ವಿಮಾನ ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಕ್ಪಿಟ್ನಲ್ಲೇ ಇಂತಹ ದಾಳಿ ನಡೆದಿರುವುದು ಪ್ರಯಾಣಿಕರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಕ್ಯಾಪ್ಟನ್ ಸಮಯಕ್ಕೆ ಸರಿಯಾಗಿ ಪರಿಸ್ಥಿತಿಯನ್ನು ನಿಯಂತ್ರಿಸದೇ ಹೋಗಿದ್ದರೆ, ನೂರಾರು ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇತ್ತು.
ಇದೀಗ ತನಿಖಾಧಿಕಾರಿಗಳು ಸಹ-ಪೈಲಟ್ನ ಉದ್ದೇಶ, ಆತನ ಹಿನ್ನೆಲೆ ಹಾಗೂ ದಾಳಿಯ ಹಿಂದಿನ ಕಾರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಪ್ರಕರಣದಲ್ಲಿ ಭದ್ರತಾ ವ್ಯವಸ್ಥೆಗಳ ವೈಫಲ್ಯವಾಗಿದೆಯೇ? ಅಥವಾ ದಾಳಿಯ ಹಿಂದೆ ಇನ್ನೇನಾದರೂ ಕಾರಣವಿದೆಯೇ ಎಂಬ ಪ್ರಶ್ನೆಗಳಿಗೂ ಉತ್ತರ ಹುಡುಕಲಾಗುತ್ತಿದೆ.
ಇದನ್ನೂ ಓದಿ: ಬೆಳಗ್ಗೆ Or ಸಂಜೆ.. ಯಾವ ಟೈಮ್ನಲ್ಲಿ ವಾಕಿಂಗ್ ಮಾಡಿದ್ರೆ ಆರೋಗ್ಯಕ್ಕೆ ಹೆಚ್ಚು ಲಾಭ?
ಹಮ್ಮಾಮಿಯ ಮೊದಲ ವಿಮಾನಯಾನ ಸಂಸ್ಥೆಯಾದ ಸರ್ಕಾರಿ ಸ್ವಾಮ್ಯದ ಒಮಾನ್ ಏರ್, ಆತ ಉಗ್ರವಾದಕ್ಕೆ ಸಂಬಂಧಿಸಿದ ವೆಬ್ಸೈಟ್ಗಳನ್ನು ವೀಕ್ಷಿಸುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ದೊರೆತ ಬಳಿಕ ವಿಮಾನ ಹಾರಿಸುವುದನ್ನು ನಿಷೇಧಿಸಿತ್ತು. ನಂತರ ಆತನಿಗೆ ಕಚೇರಿ ಕೆಲಸ ನೀಡಲಾಗಿತ್ತು. ಆ ಬಳಿಕ ಹಮ್ಮಾಮಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಉದ್ಯೋಗ ದೊರೆತಿತ್ತು.
ಅದರಲ್ಲಿನ ಹಲವು ಪೋಸ್ಟ್ಗಳಲ್ಲಿ ಮಹಿಳೆಯರು ಉದ್ಯೋಗ ಮಾಡುವುದನ್ನು ವಿರೋಧಿಸಲಾಗಿತ್ತು. ಅಲ್ಲದೆ, ಮಹಿಳೆಯರು ಬುರ್ಖಾ ಧರಿಸಬೇಕು ಎಂಬುದು ಆತನ ಆದ್ಯತೆಯಾಗಿತ್ತು ಎನ್ನಲಾಗಿದೆ. 2021ರ ಡಿಸೆಂಬರ್ನಲ್ಲಿ ಹಮ್ಮಾಮಿಯು ಅರೇಬಿಕ್ ಭಾಷೆಯಲ್ಲಿ ಮಾಡಿದ್ದ ಪೋಸ್ಟ್ವೊಂದರಲ್ಲಿ, ತಾನು ಸಿರಿಯಾ ಅಥವಾ ಲೆಬನಾನ್ನ ವ್ಯಕ್ತಿಯಂತೆ ನಟಿಸಿ, ನಕಲಿ ಖಾತೆಯನ್ನು ಸೃಷ್ಟಿಸಿ, ಸೌದಿ ಮಹಿಳೆಯರನ್ನು ಸಂಪರ್ಕಿಸಿದ್ದಾಗಿ ಹೇಳಿದ್ದ ಎನ್ನಲಾಗಿದೆ.
ಸಾವಿಗೆ ಹೆದರಲಿಲ್ಲ, ವಿಮಾನವನ್ನೇ ಪತನಗೊಳಿಸಲು ಬಯಸಿದ್ದೆ ಎಂಬ ಹೇಳಿಕೆ ನಿಜವಾಗಿದ್ದರೆ, ಇದು ವಿಮಾನಯಾನ ಕ್ಷೇತ್ರದ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವ ಪ್ರಕರಣವಾಗಲಿದೆ.

ನೋಡಿರಿ

