ಒಂದು ವಾರದ ಬ್ರೇಕ್ ಬಳಿಕ ಟೀಂ ಇಂಡಿಯಾ ಮತ್ತೆ ಅಖಾಡಕ್ಕೆ – ಇಂಗ್ಲೆಂಡ್ ವಿರುದ್ದ ಫಸ್ಟ್‌ ಬ್ಯಾಟಿಂಗ್ ಅಥವಾ ಬೌಲಿಂಗ್?

ಒಂದು ವಾರದ ಬ್ರೇಕ್ ಬಳಿಕ ಟೀಂ ಇಂಡಿಯಾ ಮತ್ತೆ ಅಖಾಡಕ್ಕೆ – ಇಂಗ್ಲೆಂಡ್ ವಿರುದ್ದ ಫಸ್ಟ್‌ ಬ್ಯಾಟಿಂಗ್ ಅಥವಾ ಬೌಲಿಂಗ್?

ಒಂದು ವಾರದ ಬ್ರೇಕ್ ಬಳಿಕ ಟೀಂ ಇಂಡಿಯಾ ಮತ್ತೆ ಅಖಾಡಕ್ಕಿಳಿಯುತ್ತಿದೆ. ಈಗ ಟೀಂ ಇಂಡಿಯಾ ಆಡ್ತಿರೋದು ದುರ್ಬಲ ಇಂಗ್ಲೆಂಡ್ ತಂಡದ ವಿರುದ್ಧ. ಡಿಫೆಂಡಿಂಗ್​ ಚಾಂಪಿಯನ್ಸ್​ಗಳನ್ನ ವೀಕ್​ ಟೀಂ ಅನ್ನೋ ಪರಿಸ್ಥಿತಿ ಬಂದಿದೆ. ಆಡಿರೋ 5 ಮ್ಯಾಚ್​​ಗಳ ಪೈಕಿ 4 ಪಂದ್ಯಗಳನ್ನ ಇಂಗ್ಲೆಂಡ್ ಸೋತಿದೆ. ಇಂಗ್ಲೆಂಡ್​ಗಿಂತ ಈ ಬಾರಿ ಅಫ್ಘಾನಿಸ್ತಾನವೇ ಸ್ಟ್ರಾಂಗ್ ಟೀಂ ಎನ್ನಿಸಿಕೊಂಡಿದೆ. ಹೀಗಾಗಿ ಇಂಗ್ಲೆಂಡ್ ಅನ್ನು ವೀಕ್​ ಟೀಂ ಅನ್ನದೆ ಬೇರೆ ವಿಧಿಯೇ ಇಲ್ಲ. ಆದ್ರೆ ಟೀಂ ಇಂಡಿಯಾ ಆಡಿರುವ ಎಲ್ಲಾ 5 ಮ್ಯಾಚ್​ಗಳನ್ನ ಕೂಡ ಗೆದ್ದಿರೋದ್ರಿಂದ ಇಂಗ್ಲೆಂಡ್​ ವಿರುದ್ಧವೂ ರೋಹಿತ್​​ ಪಡೆಯೇ ಗೆಲ್ಲುವ ಕುದುರೆಯಾಗಿದೆ. ಇಂಗ್ಲೆಂಡ್​ಗೆ ಈ ಪಂದ್ಯ ಮರ್ಯಾದೆ ಪ್ರಶ್ನೆಯಷ್ಟೇ. ಹೇಗೂ ಟೂರ್ನಿ ಔಟ್ ಆಗಿಯಾಗಿದೆ. ಫ್ಲೈಟ್ ಹತ್ತೋ ಮುನ್ನ ಒಂದೆರಡು ಪಂದ್ಯಗಳನ್ನಾದ್ರೂ ಗೆದ್ದು ಮರ್ಯಾದೆ ಉಳಿಸ್ಕೊಳ್ಳೋಣ ಅನ್ನೋ ಲೆಕ್ಕಾಚಾರದಲ್ಲಿ ಆಂಗ್ಲರಿದ್ದಾರೆ. ಆದ್ರೆ ಟೀಂ ಇಂಡಿಯಾಗೆ ಇಲ್ಲಿ ಗೆಲುವು ತುಂಬಾನೆ ಇಂಪಾರ್ಟೆಂಟ್. ಪಾಯಿಂಟ್ಸ್​​ ಟೇಬಲ್​​ನಲ್ಲಿ ಭಾರತ ಈಗ 2ನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಎಲ್ಲಾ ಮ್ಯಾಚ್​​ಗಳನ್ನ ಕೂಡ ಗೆಲ್ಲೋದು ಇಂಪಾರ್ಟೆಂಟ್ ಆಗುತ್ತೆ. ಹಾಗಿದ್ರೆ ಭಾರತ-ಇಂಗ್ಲೆಂಡ್​​ ಮಧ್ಯೆ ಮ್ಯಾಚ್​ ನಡೆಯುವ ಲಕ್ನೋ ಸ್ಟೇಡಿಯಂನ ಪಿಚ್​ ಹೇಗಿದೆ? ಬ್ಯಾಟಿಂಗ್ ಪಿಚ್ಚಾ ಇಲ್ಲಾ ಬೌಲಿಂಗ್ ಪಿಚ್ಚಾ? ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಯಾರೆಲ್ಲಾ ಆಡ್ತಾರೆ? ಹಾರ್ದಿಕ್ ಪಾಂಡ್ಯಾ ಕಥೆಯೇನು? ಇವೆಲ್ಲದರ ಕುರಿತ ಮಾಹಿತಿ ಈ ಲೇಖನದಲ್ಲಿದೆ.

ಇದನ್ನೂ ಓದಿ: ಸತತ ಸೋಲಿನ ಬಳಿಕ ಭಾರತವನ್ನು ಎದುರಿಸಲಿದೆ ಇಂಗ್ಲೆಂಡ್ –ಚಾಂಪಿಯನ್ ಟೀಮ್ ಎಡವುತ್ತಿರುವುದು ಎಲ್ಲಿ? 

ಫಸ್ಟ್ & ಫೋರ್ ಮೋಸ್ಟ್.. ಪಿಚ್​ ರಿಪೋರ್ಟ್.. ವಾಸ್ತವಾಗಿ ಲಕ್ನೋ ಪಿಚ್​​ ಕೂಡ ಬ್ಯಾಟ್ಸ್​​ಮನ್​ಗಳಿಗೆ ಹೆಚ್ಚು ಫೇವರ್ ಆಗಿದೆ. ಆದ್ರೂ ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಈ ಗ್ರೌಂಡ್​​ನಲ್ಲಿ ಇದುವರೆಗೆ ನಡೆದ ಪಂದ್ಯಗಳನ್ನ ನೋಡಿದ್ರೆ ಇದೊಂದು ಬ್ಯಾಲೆನ್ಸ್ಡ್ ಪಿಚ್ ಅಂತಾನೆ ಹೇಳಬಹುದು. ವಿಶೇಷವಾಗಿ ಸ್ಪಿನ್ನರ್ಸ್​​ಗಳಿಗೆ ಇಲ್ಲಿ ಹೆಚ್ಚಿನ ಅಡ್ವಾಂಟೇಜ್​ ಇದೆ. ಹೀಗಾಗಿ ಕುಲ್​ದೀಪ್ ಯಾದವ್, ರವೀಂದ್ರ ಜಡೇಜಾ ರೋಲ್ ತುಂಬಾನೆ ಮುಖ್ಯವಾಗಿರುತ್ತೆ. ಆರಂಭದಲ್ಲಿ ಒಂದಷ್ಟು ರನ್​ ಬಂದ್ರೂ ಕೂಡ ಮಿಡ್ಲ್ ಓವರ್ಸ್​ಗಳಲ್ಲಿ ಸ್ಪನ್ನರ್ಸ್​​ಗಳು ತಮ್ಮ ಆಟ ಶುರು ಮಾಡಬಹುದು. ಇದು ಸ್ಲೋ ಪಿಚ್ ಆಗಿದ್ದು, ಬೃಹತ್ ಸ್ಕೋರ್​ ಎಕ್ಸ್​ಪೆಕ್ಟ್​​ ಮಾಡೋಕೆ ಸಾಧ್ಯವಿಲ್ಲ. ಈ ವರ್ಲ್ಡ್​​ಕಪ್​ನಲ್ಲಿ ಲಕ್ನೋ ಗ್ರೌಂಡ್​​ನಲ್ಲಿ ಒಟ್ಟು ಮ್ಯಾಚ್​ಗಳು ನಡೆದಿದ್ದು ಈ ಪೈಕಿ ಎರಡು ಪಂದ್ಯಗಳನ್ನ ಚೇಸಿಂಗ್​ ಮಾಡಿದವರು ಗೆದ್ದಿದ್ದಾರೆ. ಹಾಗಂತಾ ಚೇಸಿಂಗ್​ ಮಾಡಿದ್ರಷ್ಟೇ ಗೆಲ್ಲೋಕೆ ಸಾಧ್ಯ ಅಂತಾ ಹೇಳೋಕೆ ಆಗಲ್ಲ. ಫಸ್ಟ್​ ಬ್ಯಾಟಿಂಗ್​ ಮಾಡಿದವರೂ ಗೆಲ್ಲಬಹುದು.. ಚೇಸಿಂಗ್​​ ಮಾಡಿದವರು ಬೇಕಾದ್ರೂ ಗೆಲ್ಲಬಹುದು. ಹೀಗಾಗಿ ಈ ಹಿಂದಿನ ಪಂದ್ಯಗಳಂತೆ ಟಾಸ್​ ಅಷ್ಟೊಂದು ಇಂಪಾರ್ಟೆಂಟ್ ಏನೂ ಆಗಲ್ಲ. ಫಸ್ಟ್ ಬ್ಯಾಟಿಂಗ್​ ಮಾಡಿದ್ರೂ ಅಥವಾ ಬೌಲಿಂಗ್ ಮಾಡಿದ್ರೂ ಟೀಂ ಪರ್ಫಾಮೆನ್ಸ್ ಮೇಲೆಯೇ ರಿಸಲ್ಟ್​ ನಿಂತಿದೆ. ಅಫ್​​ಕೋಸ್ ಎಲ್ಲಾ ಮ್ಯಾಚ್​​ನಲ್ಲೂ ಪರ್ಫಾಮೆನ್ಸ್​ ಮೇಲೆಯೇ ಫಲಿತಾಂಶ ಬರೋದು. ಆದ್ರೆ ಕೆಲ ಪಿಚ್​​ಗಳಲ್ಲಿ ನಿಮಗೆ ಗೊತ್ತಿರೋ ಹಾಗೆ ಟಾಸ್ ಗೆದ್ರಾ-ಸೋತ್ರಾ ಅನ್ನೋದು ಕೂಡ ಮುಖ್ಯವಾಗುತ್ತೆ. ಹೀಗಾಗಿ ಲಕ್ನೋ ಗ್ರೌಂಡ್​​ನಲ್ಲಿ ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ನಲ್ಲಿ ಟಾಸ್​ ಗೆದ್ರೆ ರೋಹಿತ್​ ಶರ್ಮಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ತಾರಾ? ಇಲ್ಲಾ ಬೌಲಿಂಗ್ ಮಾಡ್ತಾರಾ ಅನ್ನೋದು ತುಂಬಾ ಕುತೂಹಲಕಾರಿಯಾಗಿದೆ. ಯಾಕಂದ್ರೆ ಈ ಬಾರಿಯ ವಿಶ್ವಕಪ್​​ ಟೂರ್ನಿಯಲ್ಲಿ ಇದುವರೆಗೂ ಟೀಂ ಇಂಡಿಯಾ ಫಸ್ಟ್ ಬ್ಯಾಟಿಂಗ್​ ಮಾಡಿಲ್ಲ. ಹೀಗಾಗಿ ಈ ಸವಾಲು ಇಂಗ್ಲೆಂಡ್ ವಿರುದ್ಧ ಎದುರಾಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

ಇನ್ನು ಆಲ್ರೌಂಡರ್​​ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ನಲ್ಲೂ ಆಡೋದಿಲ್ಲ. ಪಾಂಡ್ಯ ಇನ್ನೂ ಕೂಡ ಕಂಪ್ಲೀಟ್ ಆಗಿ ಫಿಟ್ ಆಗಿಲ್ಲ. ಹೀಗಾಗಿ ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಮ್ಯಾಚ್​​ನಲ್ಲಿ ಆಡಿದ ತಂಡವೇ ಲಕ್ನೋದಲ್ಲೂ ಅಖಾಡಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇಂಗ್ಲೆಂಡ್​ ಮ್ಯಾಚ್​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡೋಣ.

ಟೀಂ ಇಂಡಿಯಾ PLAYING-11

ರೋಹಿತ್ ಶರ್ಮಾ‌,  ಶುಬ್ಮನ್ ಗಿಲ್,  ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್​​ದೀಪ್ ಯಾದವ್, ಮೊಹಮ್ಮದ್ ಶಮಿ OR ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರಿತ್ ಬುಮ್ರಾ ಇದು ಇಂಗ್ಲೆಂಡ್ ಮ್ಯಾಚ್​ಗೆ ಟೀಂ ಇಂಡಿಯಾದ ಸಂಭಾವ್ಯ ತಂಡ. ಮೊಹಮ್ಮದ್ ಶಮಿ ಕಳೆದ 5 ವಿಕೆಟ್​ಗಳನ್ನ ಪಡೆದಿದ್ದಾರೆ ಅನ್ನೋದೇನೊ ನಿಜ. ಆದ್ರೆ ಇಲ್ಲಿ ಆರ್​.ಅಶ್ವಿನ್​ ಕೂಡ ಪ್ಲೇಯಿಂಗ್​-11 ರೇಸ್​ನಲ್ಲಿದ್ದಾರೆ. ಯಾಕಂದ್ರೆ ಆಗ್ಲೇ ಹೇಳಿದ ಹಾಗೆ ಇದು ಸ್ಪಿನ್ನರ್ಸ್​ಗಳಿಗೆ ಫೇವರ್ ಆಗಿರುವಂಥಾ ಪಿಚ್ ಆಗಿರೋದ್ರಿಂದ ಅಶ್ವಿನ್ ಸೆಲೆಕ್ಟ್ ಆದ್ರೂ ಆಶ್ಚರ್ಯ ಇಲ್ಲ.

ಇನ್ನು ಭಾರತ-ಇಂಗ್ಲೆಂಡ್​ ತಂಡ ಒನ್‌ ಡೇ ವಿಶ್ವಕಪ್​​ನಲ್ಲಿ ಇದುವರೆಗೆ 8 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 4 ಪಂದ್ಯಗಳಲ್ಲಿ ಇಂಗ್ಲೆಂಡ್​ ಗೆದ್ದಿದೆ. 3 ಮ್ಯಾಚ್​​ಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. 2011ರಲ್ಲಿ ನಡೆದ ಮ್ಯಾಚ್​​ ಮಾತ್ರ ಟೈ ಆಗಿತ್ತು.

Shwetha M