45 ವರ್ಷಗಳ ನಂತರ ತಾಜ್ ಮಹಲ್ ಗೋಡೆ ಮುಟ್ಟಿದ ಯಮುನೆ..!

45 ವರ್ಷಗಳ ನಂತರ ತಾಜ್ ಮಹಲ್ ಗೋಡೆ ಮುಟ್ಟಿದ ಯಮುನೆ..!

45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯಮುನಾ ನದಿಯ ನೀರು ಆಗ್ರಾದ ಐತಿಹಾಸಿಕ ಕಟ್ಟಡ ತಾಜ್ ಮಹಲ್ ಗೋಡೆಗಳಿಗೆ ಅಪ್ಪಳಿಸಿದೆ. ಯಮುನಾ ನದಿಯ ನೀರಿನಿಂದ ತಾಜ್ ಮಹಲ್ ಹಿಂಭಾಗದ ಉದ್ಯಾನವು 45 ವರ್ಷಗಳ ನಂತರ ಮೊದಲ ಬಾರಿಗೆ ಮುಳುಗಿದೆ. ತಾಜ್ ಮಹಲ್ ನೆಲಮಾಳಿಗೆಗೆ ನೀರು ತಲುಪಿಲ್ಲ. ಆದರೆ ಯಮುನಾ ನದಿಯ ಹರಿವು ಹೆಚ್ಚಾಗಿದ್ದರಿಂದ ತಾಜ್ ಮಹಲ್ ಸೌಂದರ್ಯಕ್ಕೆ ಧಕ್ಕೆ ಉಂಟಾಗಬಹುದು ಎಂಬ ಆತಂಕ ಎದುರಾಗಿದೆ.

ಇದನ್ನೂ ಓದಿ: ಮಕ್ಕಳ ಶುಲ್ಕ ಭರಿಸಲು ಸಾಧ್ಯವಾಗದೇ ಅಮ್ಮನ ಹತಾಶೆ – ಸತ್ತರೆ ಪರಿಹಾರ ಸಿಗಬಹುದು ಎಂದು ಬಸ್‌ಗೆ ಅಡ್ಡಬಂದು ಪ್ರಾಣಬಿಟ್ಟ ತಾಯಿ..!

ದೆಹಲಿಯಲ್ಲಿ ಯಮುನೆ ಉಕ್ಕಿ ಹರಿಯುತ್ತಿದ್ದು, ಆಗ್ರಾದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಮುನಾ ನದಿ ಪ್ರವಾಹಕ್ಕೆ ರಸ್ತೆಗಳು ಮತ್ತು ತಾತ್‌ಗಂಜ್‌ನ ಸ್ಮಶಾನ ಮುಳುಗಡೆಯಾಗಿದೆ. ಇತ್ಮದ್-ಉದ್-ದೌಲಾ ಸ್ಮಾರಕದ ಗೋಡೆಗೆ ಯುಮನಾ ನದಿ ನೀರು ತಲುಪಿದೆ. 45 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಾಜ್ ಮಹಲ್ ಆವರಣವನ್ನೂ ಯಮುನೆ ತಲುಪಿದ್ದಾಳೆ. 1978 ರ ಪ್ರವಾಹದ ಸಮಯದಲ್ಲಿ ಯಮುನಾ ಕೊನೆಯ ಬಾರಿ ತಾಜ್ ಮಹಲ್ ಆವರಣ ತಲುಪಿತ್ತು.  ನೀರಿನ ಮಟ್ಟವು ಅಂದು 495 ಅಡಿಗಳಷ್ಟು ‘ಕಡಿಮೆ-ಪ್ರವಾಹ ಮಟ್ಟವನ್ನು’ ಮೀರಿ 497.9 ಅಡಿಗಳನ್ನು ತಲುಪಿತ್ತು.

ಮುಂಜಾಗ್ರತಾ ಕ್ರಮವಾಗಿ ಸಿಕಂದ್ರದ ಕೈಲಾಸ ದೇಗುಲದಿಂದ ತಾಜ್ ಮಹಲ್ ಬಳಿಯ ದಸರಾ ಘಾಟ್ ವರೆಗೆ ನದಿ ಘಾಟ್‌ಗಳಲ್ಲಿ ಪ್ರವಾಹ ತಡೆಯಲು ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಆಗ್ರಾದಲ್ಲಿ ಪ್ರವಾಹದಂತಹ ಪರಿಸ್ಥಿತಿಯ ನಡುವೆ ಅಧಿಕಾರಿಗಳು ಪರಿಹಾರ ಸಿದ್ಧತೆಯನ್ನು ಹೆಚ್ಚಿಸಿದ್ದಾರೆ. ತಾಜ್ ಮಹಲ್‌ಗೆ ಹೋಗುವ ಯಮುನಾ ಕಿನಾರಾ ರಸ್ತೆ ಕೂಡಾ ಜಲಾವೃತವಾಗಿದೆ.

suddiyaana