34 ದಿನಗಳ ಬಳಿಕ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಳ -100 ಅಡಿಯ ಗಡಿ ದಾಟಿದ ನೀರಿನ ಮಟ್ಟ
ಕಳೆದ ಮೂರು ದಿನಗಳ ಹಿಂದೆ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ 34 ದಿನಗಳ ಬಳಿಕ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಏರಿಕೆಯಾಗಿದೆ. ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ರೈತರ ಮುಖದಲ್ಲಿ ಸಂತಸ ಮೂಡಿದೆ.
ಈ ಬಾರಿ ಮುಂಗಾರು ಮಳೆ ಕೈ ಕೊಟ್ಟ ಪರಿಮಾಣ ಕೆಆರ್‌ಎಸ್ ನೀರಿನ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಕಳೆದ ಸೆಪ್ಟೆಂಬರ್ 1 ರಿಂದ 100 ಅಡಿಗಿಂತ ಕಡಿಮೆ ಪ್ರಮಾಣದಲ್ಲಿ ಡ್ಯಾಂನ ನೀರಿನ ಮಟ್ಟ ಇತ್ತು. ಇದೀಗ ಕಳೆದ 3 ದಿನಗಳ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ 100.36 ಅಡಿಗೆ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ ಬಳಕೆದಾರರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಪೊಲೀಸ್ ಇಲಾಖೆ!
ಮಳೆ ಬಿದ್ದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಇದರಿಂದ ಡ್ಯಾಂ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ತಮಿಳುನಾಡು ನೀರಿನ ಕ್ಯಾತೆಯ ನಡುವೆ ಕೆಆರ್‌ಎಸ್ 100 ಅಡಿ ಭರ್ತಿಯಾಗಿರೋದು ಸಮಾಧಾನಕರ ಸಂಗತಿಯಾಗಿದೆ.
ನಿನ್ನೆ 11,800 ಕ್ಯೂಸೆಕ್ ಒಳಹರಿವು ಇತ್ತು. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ನಿಂತಿರುವ ಪರಿಣಾಮ ಡ್ಯಾಂಗೆ ಇಂದು 9,052 ಕ್ಯೂಸೆಕ್ ಒಳಹರಿವು ಇದೆ. ನಾಳೆ ಇನ್ನಷ್ಟು ಪ್ರಮಾದಲ್ಲಿ ಒಳಹರಿವು ಕಡಿಮೆಯಾಗಲಿದೆ. ಇತ್ತ ಡ್ಯಾಂನಿಂದ ತಮಿಳುನಾಡಿಗೆ 1,482 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ.
ಕೆಆರ್ಎಸ್ ಡ್ಯಾಂನ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ – 124.80 ಅಡಿಗಳು
- ಇಂದಿನ ಮಟ್ಟ – 100.36 ಅಡಿಗಳು
- ಗರಿಷ್ಠ ಸಾಂದ್ರತೆ – 49.452 ಟಿಎಂಸಿ
- ಇಂದಿನ ಸಾಂದ್ರತೆ – 23.095 ಟಿಎಂಸಿ
- ಒಳ ಹರಿವು – 9,052 ಕ್ಯೂಸೆಕ್