2 ವರ್ಷಗಳ ಬಳಿಕ ಡಿಕೆಶಿಗೆ ರಾಜಯೋಗ – 8 ವರ್ಷ ಸಿಎಂ ಆಗಿರುತ್ತಾರೆಂದು ಜ್ಯೋತಿಷಿ ಭವಿಷ್ಯ!

2 ವರ್ಷಗಳ ಬಳಿಕ ಡಿಕೆಶಿಗೆ ರಾಜಯೋಗ – 8 ವರ್ಷ ಸಿಎಂ ಆಗಿರುತ್ತಾರೆಂದು ಜ್ಯೋತಿಷಿ ಭವಿಷ್ಯ!

ಕರ್ನಾಟಕ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್ ಇಂದಲ್ಲ ನಾಳೆ ಸಿಎಂ ಆಗಿಯೇ ಆಗುತ್ತೇನೆಂಬ ನಂಬಿಕೆಯಲ್ಲಿದ್ದಾರೆ. ಇದೀಗ ಡಿಕೆಶಿ 8 ಎಂಟು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಜ್ಯೋತಿಷಿ ಬಿಬಿ ಆರಾಧ್ಯ (BB Aradhya) ಭವಿಷ್ಯ ನುಡಿದಿದ್ದಾರೆ. 2 ವರ್ಷಗಳ ಬಳಿಕ ಡಿಕೆಶಿಗೆ ಸಿಎಂ ಚಾನ್ಸ್ ಇದ್ಯಂತೆ.

ಇದನ್ನೂ ಓದಿ : ಡಿಕೆಶಿಯನ್ನ ಕಂಪ್ಲೀಟ್ ‘ಡಿಸ್ಟರ್ಬ್’ ಮಾಡಿದ ಎಂ.ಬಿ ಪಾಟೀಲ್ – ‘ಕೈ’ ಮನೆಯಲ್ಲಿ ಮತ್ತೆ ಸಿಎಂ ಕಿಚ್ಚು!

ಸಿಎಂ ಸಿದ್ದರಾಮಯ್ಯ (Siddaramaiah) ಹಾಲಿ ವಾಸ್ತವ್ಯ ಹೂಡಿರುವ ಸರ್ಕಾರಿ ನಿವಾಸ ಆಯ್ಕೆ ಮಾಡಿಕೊಳ್ಳುವಂತೆಯೂ ಆರಾಧ್ಯ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ವಿಧಾನಸೌಧದಲ್ಲಿ ಗುರುವಾರ ಮಧ್ಯಾಹ್ನ ಕೊಠಡಿ ಪೂಜೆಯನ್ನು ಡಿಕೆಶಿ ನೆರವೇರಿಸಲಿದ್ದಾರೆ. ಡಿಕೆ ಶಿವಕುಮಾರ್ (DK Shivakumar) ಗೆ ಲಕ್ಕಿ ಸಂಖ್ಯೆಯ ಕೊಠಡಿ 336 ರಲ್ಲಿ ಪೂಜೆ ನಡೆಯಲಿದೆ. ಜ್ಯೋತಿಷಿ ಆರಾಧ್ಯ ಸೂಚನೆ ಮೇರೆಗೆ ಕೊಠಡಿ ಪೂಜೆ ನಡೆಯಲಿದೆ. ಡಿಕೆ ಶಿವಕುಮಾರ್ ಜಾತಕ ಫಲದ ಪ್ರಕಾರವೇ ಜ್ಯೋತೀಷಿ ಮುಹೂರ್ತ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಜಿನ್ ಲಗ್ನದಲ್ಲಿ ಅರ್ಚಕರು ಪೂಜೆ ನೆರವೇರಿಸಲಿದ್ದಾರೆ.

suddiyaana