ಮಣಿಪುರದಲ್ಲಿ ಆಫ್ರಿಕನ್​​ ಹಂದಿ ಜ್ವರ ಪತ್ತೆ – ಇಂಫಾಲ್​ನಲ್ಲಿ ಕಟ್ಟೆಚ್ಚರ, ಹಂದಿ ಮಾಂಸ ಬೆಲೆ ಭಾರಿ ಇಳಿಕೆ

ಮಣಿಪುರದಲ್ಲಿ ಆಫ್ರಿಕನ್​​ ಹಂದಿ ಜ್ವರ ಪತ್ತೆ – ಇಂಫಾಲ್​ನಲ್ಲಿ ಕಟ್ಟೆಚ್ಚರ, ಹಂದಿ ಮಾಂಸ ಬೆಲೆ ಭಾರಿ ಇಳಿಕೆ

ಜನಾಂಗೀಯ ಸಂಘರ್ಷದಲ್ಲಿ ಬೆಂದುಹೋಗಿರುವ ಮಣಿಪುರಕ್ಕೆ ಈಗ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದೆ. ಇಂಫಾಲ್‌ನಲ್ಲಿ ಇದೀಗ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗಿರುವುದಾಗಿ ಮಣಿಪುರದ ಪಶುವೈದ್ಯಕೀಯ ಇಲಾಖೆ ಮಾಹಿತಿ ನೀಡಿದೆ.

ಇಂಫಾಲ್​ನ ಪಶ್ಚಿಮ ಪ್ರದೇಶದಲ್ಲಿರುವ ಎರೋಸೆಂಬಾದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗಿದೆ. ಈ ಹಿನ್ನೆಲೆ ಎರೋಸೆಂಬಾದಲ್ಲಿನ ಹಂದಿ ಸಾಕಣೆಯನ್ನು ಹಂದಿ ಜ್ವರ ಹರಡುತ್ತಿರುವ ಝೋನ್​ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಸಾಕಿದ ಹಂದಿಗಳನ್ನು ಬೇರೆ ಪ್ರದೇಶಗಳಿಗೆ ವರ್ಗಾಯಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ಮಣಿಪುರದ ಇಂಫಾಲ್​ನಲ್ಲಿ ಸತ್ತ ಹಂದಿಗಳು, ಅಥವಾ ಸೋಂಕಿತ ಹಂದಿಗಳ ವಿಲೇವಾರಿ ಮೇಲೆಯೂ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ – ವೈರಿ ರಾಷ್ಟ್ರದ ಜೊತೆಗಿನ ಮ್ಯಾಚ್ ಬೇಡ ಎಂದು ಬಾಯ್ಕಟ್ ಟ್ರೆಂಡ್

ಮಣಿಪುರದಲ್ಲಿ ಹಂದಿ ಮಾಂಸ  ಹೆಚ್ಚು ಜನಪ್ರಿಯವಾಗಿದೆ. ಇದೀಗ ಮಣಿಪುರದಲ್ಲಿ ಹಲವಾರು ಹಂದಿಗಳು ಸೋಂಕಿಗೆ ಒಳಗಾಗಿರುವುದರಿಂದಾಗಿ ಅಲ್ಲಿನ ಜನತೆಗೆ ಆತಂಕ ಎದುರಾಗಿದೆ. ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗುತ್ತಿದ್ದಂತೆ ಹಂದಿ ಮಾಂಸದ ಬೆಲೆ ಭಾರಿ ಇಳಿಕೆಯಾಗಿದೆ. ಪ್ರಸ್ತುತ ಕೆಜಿಗೆ 180-200 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಆಫ್ರಿಕನ್​​ ಹಂದಿ ಜ್ವರ ಎಂದರೇನು?

ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುವ ಇನ್ಫ್ಲೂಯೆಂಜಾ ಎ (influenza A) ಎಂಬ ಹೆಸರಿನ ವೈರಸ್ ಮೂಲಕ ಮನುಷ್ಯರಿಗೆ ಹರಡುವ ಜ್ವರವನ್ನೇ ಹಂದಿಜ್ವರ ಅಥವಾ ಸ್ವೈನ್ ಫ್ಲೂ ಎಂದು ಕರೆಯುತ್ತಾರೆ. ಆಫ್ರಿಕನ್ ಹಂದಿ ಜ್ವರವನ್ನು ಪ್ರಾಣಿಗಳ ಆರೋಗ್ಯಕ್ಕಾಗಿ ವಿಶ್ವ ಸಂಸ್ಥೆ ವರ್ಗೀಕರಿಸಿದೆ, ಇದು ದೇಶೀಯ ಮತ್ತು ಕಾಡು ಹಂದಿಗಳ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಂಕ್ರಾಮಿಕ ವೈರಲ್ ಕಾಯಿಲೆ ಎಂದು ಕೋಯಿಕ್ಕೋಡ್ ಜಿಲ್ಲೆಯ ಪೆರಂಬ್ರಾ ಬಳಿಯ ಜಾನಕಿಕ್ಕಾಡ್ ಪರಿಸರ ಪ್ರವಾಸೋದ್ಯಮ ಕೇಂದ್ರದಿಂದಲೂ ವರದಿ ಮಾಡಲಾಗಿತ್ತು.

ಅಕ್ಟೋಬರ್ 13 ರಂದು ಮಣಿಪುರ ಸರ್ಕಾರದ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆಯ ನಿರ್ದೇಶನದ ಅನುಸಾರವಾಗಿ ಏಕಾಏಕಿ ಹಂದಿ ಜ್ವರ ಪತ್ತೆಯಾದ ಅಧಿಸೂಚನೆಯನ್ನ ಹೊರಡಿಸಿತ್ತು. ಇಂಫಾಲ್​ನ ಪಶ್ಚಿಮ ವಲಯದ ಡೆಪ್ಯೂಟಿ ಕಮಿಷನರ್​ ಈ ಬಗ್ಗೆ ಮಾಹಿತಿ ನೀಡಿದ್ದು, ಪಶು ವೈದ್ಯ ಸಂಗೋಪನಾ ಇಲಾಖೆಯ ಅಧಿಕಾರಿಗಳಾದ ಇಬೊಟೊಂಬಿ ಸಿಂಗ್​​ ಸೋಂಕಿನ ವಿರುದ್ಧ ಹೋರಾಟಡಲು ತುರ್ತು ಕ್ರಮ ಕೈಗೊಳ್ಳಲಾಗುವುದು. ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆಯೂ ಸೋಂಕು ಹರಡದಂತೆ ಹಂದಿಗಳು ವಾಸುಸುತ್ತಿರುವ ಪ್ರದೇಶದಲ್ಲಿ ನಿಗಾ ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Shwetha M