2027ರ ವಿಶ್ವಕಪ್ ಗಿಲ್ಲ ವೆಸ್ಟ್ ಇಂಡೀಸ್ – 10 ಟೀಂ.. Qualifier ಪಾಸ್ ಆಗ್ತಾರಾ?
ದೈತ್ಯರಿಲ್ಲದ ವರ್ಲ್ಡ್ ಕಪ್ ಮಂಕಾಗುತ್ತಾ?

2027ರ ಏಕದಿನ ವಿಶ್ವಕಪ್ಗೆ ಪ್ರಿಪರೇಷನ್ಸ್ ಜೋರಾಗಿದೆ. ಶೆಡ್ಯೂಲ್, ಗ್ರೌಂಡ್ ಎಲ್ಲವೂ ಫೈನಲ್ ಆಗಿದೆ. ಌಂಡ್ ಈಗ ಟೀಮ್ಸ್ ಕೂಡ ಫೈನಲ್ ಆಗ್ತಿವೆ. ಬಟ್ ಬೇಸರದ ವಿಚಾರ ಅಂದ್ರೆ ಒನ್ಸ್ ಅಗೇನ್ ವೆಸ್ಟ್ ಇಂಡೀಸ್ ಟೀಂ ಡೈರೆಕ್ಟ್ ಕ್ವಾಲಿಫಿಕೇಷನ್ ಟಿಕೆಟ್ ಪಡೆಯುವಲ್ಲಿ ಫೇಲ್ಯೂರ್ ಆಗಿದೆ. ಕ್ವಾಲಿಫೈಯರ್ ಪಂದ್ಯಗಳನ್ನ ಆಡಿ ಸೆಲೆಕ್ಟ್ ಆಗ್ಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ : IPL ಗಾಯ.. ಟೀಂ ಇಂಡಿಯಾಗೆ ಬರೆ – ನೋವಿದ್ರೂ ಇಂಜೆಕ್ಷನ್ ಪಡೆದು ಆಡ್ತಾರಾ?
2027ರ ಏಕದಿನ ವಿಶ್ವಕಪ್ನಲ್ಲಿ ಆಡಲು ವೆಸ್ಟ್ ಇಂಡೀಸ್ ತಂಡ ನೇರ ಅರ್ಹತೆ ಪಡೆಯುವಲ್ಲಿ ಫೇಲ್ಯೂರ್ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಸತತ ಮೂರನೇ ಸಲ ಇದು. ಏಕದಿನ ವಿಶ್ವಕಪ್ನಲ್ಲಿ ಕೆರಿಬಿಯನ್ ತಂಡ 1974 ಹಾಗೇ 1979 ಅಂದ್ರೆ ಬ್ಯಾಕ್ ಟು ಬ್ಯಾಕ್ ಎರಡು ಸಲ ವಿಶ್ವ ಚಾಂಪಿಯನ್ ಆಗಿದ್ದ ತಂಡ ದಶಕದಿಂದ ಕಂಪ್ಲೀಟ್ ಹಳ್ಳ ಹಿಡಿದಿದೆ. 2019ರಲ್ಲಿ ಅರ್ಹತಾ ಸುತ್ತಿನಲ್ಲಿ ಸೆಲೆಕ್ಟ್ ಆಗಿದ್ದ ವಿಂಡೀಸ್ ಪಡೆ 2023ರ ವಿಶ್ವಕಪ್ನಲ್ಲಿ ಕ್ವಾಲಿಫೈ ಕೂಡ ಆಗಿರಲಿಲ್ಲ. ಈಗ 2027ರ ವಿಶ್ವಕಪ್ಗೆ ನೇರ ಸ್ಥಾನವನ್ನು ಕಳ್ಕೊಂಡಿದೆ. ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಫ್ಘಾನಿಸ್ತಾನ ಗೆದ್ದಿದ್ದು ರ್ಯಾಂಕಿಂಗ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿ ಡೈರೆಕ್ಟ್ ಕ್ವಾಲಿಫೈ ಟಿಕೆಟ್ ಪಡ್ಕೊಂಡಿದೆ.
ಟಾಪ್-8ನಲ್ಲೂ ಸ್ಥಾನ ಇಲ್ಲ.. ವಿಶ್ವಕಪ್ ಹೋಸ್ಟಿಂಗ್ ನಲ್ಲೂ ಇಲ್ಲ!
ಐಸಿಸಿ ರೂಲ್ಸ್ ಪ್ರಕಾರ 2027ರ ಸೆಪ್ಟೆಂಬರ್ 30ರ ವೇಳೆಗೆ ಏಕದಿನ ಮಾದರಿ ಕ್ರಿಕೆಟ್ನ ರ್ಯಾಂಕಿಂಗ್ ಪಟ್ಟಿದಲ್ಲಿ ಟಾಪ್ 8ನಲ್ಲಿರುವ ತಂಡಗಳು ನೇರವಾಗಿ ವಿಶ್ವಕಪ್ಗೆ ಕ್ವಾಲಿಫೈ ಆಗ್ತಾರೆ. ಹಾಗೇ ಟೂರ್ನಿ ಹೋಸ್ಟ್ ಮಾಡಲಿರುವ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳಿಗೂ ಅರ್ಹತೆ ಸಿಗುತ್ತೆ. ಸೋ ಅಲ್ಲಿಗೆ 10 ಟೀಂ ಫೈನಲ್ ಆಯ್ತು. ಇನ್ನುಳಿದ ನಾಲ್ಕು ಸ್ಥಾನಗಳಿಗಾಗಿ ಕ್ವಾಲಿಫೈಯರ್ ಪಂದ್ಯಗಳನ್ನ ಆಡಿ ಸೆಲೆಕ್ಟ್ ಆಗ್ಬೇಕು. 2027 ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿವೆ. ಇಂಟ್ರೆಸ್ಟಿಂಗ್ ಅಂದ್ರೆ ಇಲ್ಲಿ 4 ಸ್ಥಾನಗಳಿಗಾಗಿ ಒಟ್ಟು 10 ತಂಡಗಳು ಫೈಟ್ ಮಾಡಲಿವೆ. ಹೀಗಾಗಿ ವಿಂಡೀಸ್ ಇಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದ್ರ ಮೇಲೆ ಏಕದಿನ ವಿಶ್ವಕಪ್ನಲ್ಲಿ ಆಡ್ತಾರಾ ಇಲ್ವಾ ಅನ್ನೋದು ಡಿಸೈಡ್ ಆಗಲಿದೆ. ಬ್ಯಾಡ್ ಲಕ್ ಏನಂದ್ರೆ ಕಳೆದ ಬಾರಿ ಇದೇ ರೀತಿ ಅರ್ಹತಾ ಸುತ್ತಿನಲ್ಲಿಯೇ ಕಳಪೆ ಪ್ರದರ್ಶನ ನೀಡಿ ಡಿಸ್ ಕ್ವಾಲಿಫೈ ಆಗಿದ್ರು. ಹೀಗಾಗಿ ಈ ಬಾರಿಯೂ ಕೂಡ ಅರ್ಹತೆ ಕಳೆದುಕೊಳ್ಳೋ ಆತಂಕವೂ ಇದೆ. ಹಾಗಂತ ವಿಂಡೀಸ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ರೆ ಅಲ್ಲಿನ ಫ್ಯಾನ್ಸ್ ಅಷ್ಟೇ ಅಲ್ಲ. ಇಡೀ ಕ್ರಿಕೆಟ್ ಅಭಿಮಾನಿಗಳೂ ಸಫರ್ ಆಗ್ತಾರೆ. ಯಾಕಂದ್ರೆ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರೋ ತಂಡ ಅದು. ಕ್ರಿಕೆಟ್ ಅಂದ್ರೆ ಜಸ್ಟ್ ಗೇಮ್ ಅಲ್ಲ. ಬರೀ ಸೋಲು ಗೆಲುವೂ ಅಲ್ಲ. ಎಂಜಾಯ್ ಮಾಡ್ಬೇಕು ಅನ್ನೋದನ್ನ ಕಲಿಸಿದ್ದೇ ಇವ್ರು. ಹಾಗೇ ಕ್ರಿಕೆಟ್ ಜಗತ್ತನ್ನೇ ಆಳಿದ ಬಲಿಷ್ಠ ಆಟಗಾರರ ಪಡೆಯೂ ವಿಂಡೀಸ್ ಇತಿಹಾಸದಲ್ಲಿದೆ. ಹೀಗಿದ್ರೂ ಯಾಕೆ ಇತ್ತೀಚಿನ ದಿನಗಳಲ್ಲಿ ವಿಶ್ವಕಪ್ ಟೂರ್ನಿಗೂ ಸೆಲೆಕ್ಟ್ ಆಗ್ತಿಲ್ಲ ಅಂದ್ರೆ ಅದಕ್ಕೆ ಒಂದಷ್ಟು ಕಾರಣಗಳೂ ಇವೆ.
ವಿಂಡೀಸ್ ಮಂಡಳಿ ಫೇಲ್ಯೂರ್.. ಫ್ರಾಂಚೈಸಿ ಲೀಗ್ ಗಳ ವ್ಯಾಮೋಹ!
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಹಿರಿಯ ಆಟಗಾರರ ನಡುವಿನ ಸಂಭಾವನೆ ಮನಸ್ತಾಪಗಳು, ಕಾಂಟ್ರ್ಯಾಕ್ಟ್ ನಿಂದಾಗಿ ಸಾಕಷ್ಟು ಎಫೆಕ್ಟ್ ಆಗಿದೆ. ಹಾಗೇ ಅಲ್ಲಿನ ಪ್ರಮುಖ ಆಟಗಾರರು ರಾಷ್ಟ್ರೀಯ ತಂಡಕ್ಕಿಂತ ಜಾಗತಿಕ ಟಿ20 ಲೀಗ್ಗಳಿಗೆ ಹೆಚ್ಚಿನ ಪ್ರಿಯಾರಿಟಿ ನೀಡ್ತಿದ್ದಾರೆ. ಬಿಗ್ ಹಿಟ್ಟರ್ಸ್ ಆಗಿರೋದ್ರಿಂದ ಟಿ-20 ಫಾರ್ಮೆಟ್ನಲ್ಲಿ ಸುನಾಮಿ ಎಬ್ಬಿಸ್ತಾರೆ. ಐಪಿಎಲ್, ಸಿಪಿಎಲ್, ಬಿಬಿಎಲ್ ನಂತ ಟಿ-20 ಲೀಗ್ಗಳಲ್ಲಿ ಸ್ವಲ್ಪ ಟೈಮಲ್ಲೇ ಕೋಟಿ ಕೋಟಿ ಹಣ ಮಾಡ್ಬೋದು. ಹೀಗಾಗಿ ಆಂಡ್ರೆ ರಸೆಲ್, ಸುನಿಲ್ ನರೈನ್, ಕೀರಾನ್ ಪೊಲಾರ್ಡ್ ಮತ್ತು ನಿಕೋಲಸ್ ಪೂರನ್ ರಂಥ ಮ್ಯಾಚ್-ವಿನ್ನರ್ಗಳು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿದ್ರು. ಹಾಗೇ 50 ಓವರ್ಗಳ ಕ್ರಿಕೆಟ್ಗೆ ಕೇವಲ ಸಿಕ್ಸರ್-ಬೌಂಡರಿಗಳಷ್ಟೇ ಸಾಕಾಗಲ್ಲ. ಜಾಸ್ತಿ ಹೊತ್ತು ಕ್ರೀಸ್ನಲ್ಲಿ ನಿಂತು ಇನಿಂಗ್ಸ್ ಕಟ್ಟಬೇಕು. ಸಿಂಗಲ್ಸ್-ಡಬಲ್ಸ್ ರನ್ ತೆಗೆದುಕೊಳ್ಳುವ ತಾಳ್ಮೆ ಇರಬೇಕು. ಬಟ್ ಇಲ್ಲಿನ ದೈತ್ಯರು ಬರೀ ಬೌಂಡರಿಗಳನ್ನೇ ನೋಡೋದ್ರಿಂದ ಬೇಗ ಬೇಗ ವಿಕೆಟ್ ಕಳ್ಕೊಳ್ತಾರೆ. ಹಾಗೇ ಕೆರೆಬಿಯನ್ ದ್ವೀಪಗಳ ಪ್ರಾದೇಶಿಕ ಟೂರ್ನಿಗಳಲ್ಲಿ ಗುಣಮಟ್ಟವೂ ಕುಸಿದಿದ್ದು ಪ್ರತಿಭಾವಂತ ಆಟಗಾರರ ಆಯ್ಕೆಯೂ ಕಡಿಮೆಯಾಗಿದೆ. ಸೋ ಈ ಎಲ್ಲಾ ಕಾರಣಗಳಿಂದ ತಂಡದ ಪ್ರದರ್ಶನವೂ ವೀಕ್ ಆಗ್ತಿದೆ. ಆದ್ರೆ ಹಿಂದೆಲ್ಲಾ ವಿಂಡೀಸ್ ಅಂದ್ರೆ ರಣಭಯಂಕರವಾಗಿತ್ತು. ಇಡೀ ಕ್ರಿಕೆಟ್ ಲೋಕವೇ ಶೇಕ್ ಆಗ್ತಿತ್ತು. ಅಲ್ಲಿದ್ದ ದೈತ್ಯ ಬ್ಯಾಟರ್ಗಳ ದಂಡು, ಏಳಡಿ ಎತ್ತರದ ಬೌಲರ್ಗಳಿಂದ ನುಗ್ಗಿ ಬರ್ತಿದ್ದ ಚೆಂಡುಗಳು, ಗ್ರೌಂಡ್ನಿಂದ ಆಚೆ ಬೀಳ್ತಿದ್ದ ಬಾಲುಗಳಿಗೆ ಲೆಕ್ಕವೇ ಇರ್ಲಿಲ್ಲ. ಇದೇ ಕಾರಣಕ್ಕೆ ವಿಂಡೀಸ್ ಮ್ಯಾಚಸ್ ಅಂದ್ರೆ ಜಗತ್ತಿನೆಲ್ಲೆಡೆ ಇರುವ ಫ್ಯಾನ್ಸ್ ಎಂಜಾಯ್ ಮಾಡ್ತಿದ್ರು.
ಭಯಾನಕ ಬೌಲರ್ಗಳಿಗೂ ಹೆಸರಾಗಿದ್ದ ತಂಡ ವಿಂಡೀಸ್. ಎದುರಾಳಿ ಬ್ಯಾಟರ್ಗಳು ಅಕ್ಷರಶಃ ನಡುಗ್ತಾ ಇದ್ರು. ಮೈಕಲ್ ಹೋಲ್ಡಿಂಗ್, ಕರ್ಟ್ಲಿ ಆಂಬ್ರೋಸ್ ರಂಥ ಏಳಡಿ ಎತ್ತರದ ಬೌಲರ್ಗಳು ಗಂಟೆಗೆ 150+ ಕಿಲೋಮೀಟರ್ ಸ್ಪೀಡ್ನಲ್ಲಿ ಬೌನ್ಸರ್ ಹಾಕಿದ್ರೆ ಬ್ಯಾಟರ್ಸ್ ನಿಂತಲ್ಲೇ ಶೇಕ್ ಆಗಿ ಬಿಡ್ತಿದ್ರು. ಹೆಲ್ಮೆಟ್ ಇಲ್ಲದ ಆ ಕಾಲದಲ್ಲಿ ಬ್ಯಾಟರ್ಗಳು ರಕ್ತಸಿಕ್ತರಾದ ಇತಿಹಾಸವಿದೆ. 1970 ಮತ್ತು 1980ರ ದಶಕದಲ್ಲಿ ಜಗತ್ತನ್ನೇ ಆಳಿದ ಈ ತಂಡದಲ್ಲಿ ವಿಶ್ವದ ಶ್ರೇಷ್ಠ ಪ್ಲೇಯರ್ಗಳೇ ತುಂಬಿದ್ರು. 1975 ಮತ್ತು 1979 ರಲ್ಲಿ ಸತತ ಎರಡು ಬಾರಿ ವಿಶ್ವಕಪ್ಗಳನ್ನು ಗೆದ್ದು ಇತಿಹಾಸ ಬರೆದ ಈ ತಂಡ 1983ರ ವಿಶ್ವಕಪ್ನಲ್ಲೂ ರನ್ನರ್-ಅಪ್ ಆಗಿತ್ತು. ಹಾಗೇ 2012 ಮತ್ತು 2016 ರಲ್ಲಿ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡವೂ ಇವ್ರದ್ದೇ. 2004 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದು ಬೀಗಿದ್ರು. 1970 ರ ಮಿಡಲ್ ಆಫ್ ದಿ ಡಿಕೇಡ್ ಏನಿದ್ಯಲ್ಲ ಅಲ್ಲಿಂದ 1990 ರ ದಶಕದ ಆರಂಭದವರೆಗೆ ಅಂದ್ರೆ 15 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ನಲ್ಲಿ ಈ ತಂಡ ಒಂದೂ ಸರಣಿಯನ್ನು ಸೋಲದೆ ವಿಶ್ವದಾಖಲೆ ಬರೆದಿತ್ತು. ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಸರ್ ಗ್ಯಾರಿ ಸೋಬರ್ಸ್ ಟೆಸ್ಟ್ ಇನಿಂಗ್ಸ್ ಒಂದರಲ್ಲಿ 6 ಸಿಕ್ಸರ್ ಬಾರಿಸಿದ್ದು ಹಾಗೇ ಅತಿ ಹೆಚ್ಚು ರನ್ (365*) ಗಳಿಸಿದ್ದ ದಾಖಲೆ ಇವ್ರ ಹೆಸರಲ್ಲೇ ಇದೆ. ಸರ್ ವಿವಿಯನ್ ರಿಚರ್ಡ್ಸ್ ಅಂತೂ ಬೌಲರ್ಗಳ ಪಾಲಿನ ಸಿಂಹಸ್ವಪ್ನ. ಹೆಲ್ಮೆಟ್ ಧರಿಸದೆ ಜಗತ್ತಿನ ಭಯಂಕರ ವೇಗಿಗಳನ್ನೂ ನಡುಗಿಸಿದ ಬ್ಯಾಟಿಂಗ್ ಕಿಂಗ್. ತಮ್ಮ ಅಗ್ಗೆಸ್ಸಿವ್ ಬ್ಯಾಟಿಂಗ್ನಿಂದಲೇ ಸದ್ದು ಮಾಡಿದವ್ರು. ಹಾಗೇ ಬ್ರಯಾನ್ ಲಾರಾ ಹೆಸ್ರಂತೂ ಕ್ರಿಕೆಟ್ ಇರೋವರೆಗೂ ಅಜರಾಮರ. ಟೆಸ್ಟ್ ಕ್ರಿಕೆಟ್ ಇನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ (400 ರನ್*) ಗಳಿಸಿದ ವಿಶ್ವದಾಖಲೆ ಇಂದಿಗೂ ಇವರ ಹೆಸರಲ್ಲೇ ಇದೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 501* ರನ್ ಗಳಿಸಿದ್ದಾರೆ. ಶಿವನಾರಾಯಣ್ ಚಂದ್ರಪಾಲ್ ಕೂಡ ಕೆರೆಬಿಯನ್ ನಾಡಿನ ಅತಿದೊಡ್ಡ ಹೆಸ್ರು. ಹಾಗೇ ಬೌಲಿಂಗ್ ಅಂತೂ ಬಂದಾಗ್ಲೂ ರಣಬೇಟೆಗಾರರೇ ಇದ್ರು. 1970 ಮತ್ತು 80 ರ ದಶಕದಲ್ಲಿ ಮೈಕಲ್ ಹೋಲ್ಡಿಂಗ್, ಮಾಲ್ಕಮ್ ಮಾರ್ಷಲ್, ಕರ್ಟ್ಲಿ ಆಂಬ್ರೋಸ್ ಮತ್ತು ಕರ್ಟ್ನಿ ವಾಲ್ಷ್, ಜೋಯಲ್ ಗಾರ್ನರ್ ಮತ್ತು ಆಂಡಿ ರಾಬರ್ಟ್ಸ್ ಬ್ಯಾಟರ್ಗಳ ಬಲವನ್ನೇ ಕುಗ್ಗಿಸಿಬಿಡ್ತಿದ್ರು. ಇನ್ನು ಕ್ಯಾಪ್ಟನ್ಸ್ ಅಂತಾ ಬಂದಾಗ್ಲೂ ವಿಂಡೀಸ್ ಪಡೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದವ್ರೂ ಇದ್ದಾರೆ. ಸರ್ ಕ್ಲೈವ್ ಲಾಯ್ಡ್ ವೆಸ್ಟ್ ಇಂಡೀಸ್ಗೆ ಸತತ ಎರಡು ವಿಶ್ವಕಪ್ ಗೆದ್ದುಕೊಟ್ಟ ಮಹಾನ್ ನಾಯಕ. ಡ್ಯಾರೆನ್ ಸಾಮಿ 2 ಟಿ20 ವಿಶ್ವಕಪ್ಗಳನ್ನು ಗೆದ್ದುಕೊಟ್ಟ ಕ್ಯಾಪ್ಟನ್. ಇನ್ನು ಯುನಿವರ್ಸಲ್ ಬಾಸ್ ಅಂತಾನೇ ಕರೆಸಿಕೊಳ್ಳೋ ಕ್ರಿಸ್ ಗೇಲ್ ಟಿ20 ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್. ಹಾಗೇ ಕಿರಾನ್ ಪೊಲಾರ್ಡ್, ಆಂಡ್ರೆ ರಸೆಲ್ ಮತ್ತು ಡ್ವೇನ್ ಬ್ರಾವೋ ಜಾಗತಿಕ ಟಿ20 ಲೀಗ್ಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಸಿದ್ದ ಪ್ಲೇಯರ್ಸ್. ಇಂದಿಗೂ ವಿಂಡೀಸ್ ಆಟಗಾರರಿಗೆ ಫ್ರಾಂಚೈಸಿ ಲೀಗ್ಗಳು ಅಂತಾ ಬಂದಾಗ ಜಗತ್ತಿನಾದ್ಯಂತ ತುಂಬಾನೇ ಬೇಡಿಕೆ ಇದೆ.
ಸೋ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಯಾಕೆ ಎಲ್ರಿಗಿಂತ ಸ್ಪೆಷಲ್ ಅಂದ್ರೆ ಅವ್ರು ಯಾವುದೋ ಒಂದು ದೇಶವನ್ನ ರೆಪ್ರಸೆಂಟ್ ಮಾಡ್ತಿಲ್ಲ. ಕೆರಿಬಿಯನ್ ಸಮುದ್ರದ 14ಕ್ಕೂ ಹೆಚ್ಚು ವಿವಿಧ ದ್ವೀಪ ರಾಷ್ಟ್ರಗಳು ಮತ್ತು ಪ್ರಾಂತ್ಯಗಳ ಆಟಗಾರರು ಒಟ್ಟಾಗಿ ಈ ಒಂದೇ ತಂಡದಲ್ಲಿ ಆಡುತ್ತಾರೆ. ಬಾರ್ಬಡೋಸ್, ಜಮೈಕಾ, ಟ್ರಿನಿಡಾಡ್ ಮತ್ತು ಟೊಬಾಗೊ, ಗಯಾನಾ, ಆಂಟಿಗುವಾ ಮತ್ತು ಬಾರ್ಬುಡಾ, ಸೇಂಟ್ ಲೂಸಿಯಾ ಮತ್ತು ಗ್ರೆನಡಾದಂತಹ ಪ್ರತ್ಯೇಕ ದೇಶಗಳ ಆಟಗಾರರು ಈ ತಂಡದ ಭಾಗವಾಗಿದ್ದಾರೆ. ಹೀಗಾಗೇ ವೆಸ್ಟ್ ಇಂಡೀಸ್ ಕ್ರಿಕೆಟ್ ಕೇವಲ ಆಟವಾಗಿರದೆ, ಅವರ ಕಲ್ಚರ್, ಎಂಟರ್ಟೈನ್ಮೆಂಟ್, ಅಗ್ರೆಶನ್, ಸೆಲೆಬ್ರೇಷನ್ ಹೀಗೆ ಎಲ್ಲವೂ ಕೂಡ ಜಾಗತಿಕ ಕ್ರಿಕೆಟ್ನಲ್ಲಿ ಬಹುದೊಡ್ಡ ಅಭಿಮಾನಿ ಪಡೆಯನ್ನೇ ಹೊಂದಿದೆ. ಇದೇ ಕಾರಣಕ್ಕೆ 2027ರ ಏಕದಿನ ವಿಶ್ವಕಪ್ನಲ್ಲಿ ಅವ್ರು ಅರ್ಹತೆ ಪಡೆಯದೇ ಇದ್ರೆ ಇಡೀ ಟೂರ್ನಮೆಂಟ್ ಮಂಕಾಗುತ್ತೆ. ಹಾಗೇ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಅಭಿಮಾನಿ ಬಳಗವೂ ಬೇಜಾರ್ ಆಗಲಿದೆ.

ನೋಡಿರಿ

