ಸೆಮಿಫೈನಲ್ ರೇಸ್‌ನಲ್ಲಿ ಅಫ್ಘಾನಿಸ್ತಾನ – ಬಾಕಿಯಿರುವ ಎರಡು ಪಂದ್ಯಗಳಲ್ಲಿ ಗೆದ್ದರೆ ಅಫ್ಘಾನಿಸ್ತಾನಕ್ಕೆ ಚಾನ್ಸ್

ಸೆಮಿಫೈನಲ್ ರೇಸ್‌ನಲ್ಲಿ ಅಫ್ಘಾನಿಸ್ತಾನ – ಬಾಕಿಯಿರುವ ಎರಡು ಪಂದ್ಯಗಳಲ್ಲಿ ಗೆದ್ದರೆ ಅಫ್ಘಾನಿಸ್ತಾನಕ್ಕೆ ಚಾನ್ಸ್

ಎರಡು ವಿಶ್ವಕಪ್​ಗಳಲ್ಲಿ ಅಫ್ಘಾನಿಸ್ತಾನ ಗೆದ್ದಿದ್ದು ಒಂದು ಮ್ಯಾಚ್​ನ್ನ ಮಾತ್ರ. ಆದರೆ, ಈ ಬಾರಿಯ ವರ್ಲ್ಡ್​​ಕಪ್​​ನಲ್ಲಿ ಆಡಿರುವ 7 ಮ್ಯಾಚ್​​ಗಳಲ್ಲಿ 4 ಪಂದ್ಯಗಳನ್ನ ಗೆದ್ದುಕೊಂಡಿದೆ. 8 ಪಾಯಿಂಟ್ಸ್​​ಗಳನ್ನ ಗಳಿಸಿದೆ. ಸೆಮಿಫೈನಲ್​ ರೇಸ್​​ನಲ್ಲಿ ಆಫ್ಘನ್ನರು ಕೂಡ ಇದ್ದಾರೆ. ಅಫ್ಘಾನಿಸ್ತಾನದ ಪಾಲಿಗೆ ಇದು ನಿಜಕ್ಕೂ ಗ್ರೇಟೆಸ್ಟ್ ಅಚೀವ್​ಮೆಂಟ್​. ಹಂಗೋ ಹಿಂಗೋ ಆಫ್ಘನ್ನರು ಸೆಮಿಫೈನಲ್​​ಗೆ ಎಂಟ್ರಿಯಾದ್ರೂ ಆಶ್ಚರ್ಯ ಇಲ್ಲ.

ಇದನ್ನೂ ಓದಿ: ಟೀಮ್ ಇಂಡಿಯಾ ಫೀಲ್ಡಿಂಗ್‌ನಲ್ಲೂ ಸಖತ್ ಪವರ್ – ಮ್ಯಾಚ್‌ನ ಬೆಸ್ಟ್ ಫೀಲ್ಡರ್‌ಗೆ ಗೋಲ್ಡ್ ಮೆಡಲ್

2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವರ್ಲ್ಡ್​​ಕಪ್​ನಲ್ಲಿ ಕೀನ್ಯಾ ತಂಡ ಸೆಮಿಫೈನಲ್​​ ಬಂದಿತ್ತು. ಸೆಮಿಫೈನಲ್​​ನಲ್ಲಿ ಕೀನ್ಯಾವನ್ನ ಸೋಲಿಸಿ ಟೀಂ ಇಂಡಿಯಾ ಫೈನಲ್​ಗೆ ಎಂಟ್ರಿಯಾಗಿತ್ತು. ಆಗ ಯಾರು ಕೂಡ ಕೀನ್ಯಾ ಸೆಮಿಫೈನಲ್​ಗೆ ಬರುತ್ತೆ ಅಂತಾ ಅಂದುಕೊಂಡಿರಲಿಲ್ಲ. ಆದ್ರೆ ಆ ವರ್ಲ್ಡ್​ಕಪ್​ ಕೀನ್ಯಾ ಅಧ್ಭೂತವಾಗಿ ಕ್ರಿಕೆಟ್​ ಆಡಿತ್ತು. ಸ್ಟೀವ್ ಟಿಕೊಲೊ ಕೀನ್ಯಾದ ಸ್ಟಾರ್​ ಕ್ರಿಕೆಟಿಗರಾಗಿದ್ರು. ಅಂದು ಕೀನ್ಯಾ ಸೆಮಿಫೈನಲ್​ ತಲುಪುವಲ್ಲಿ ಭಾರತೀಯನ ಕೊಡುಗೆ ಇತ್ತು. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, 1983ರ ವರ್ಲ್ಡ್​​ಕಪ್​ ವಿನ್ನಿಂಗ್ ಟೀಂನಲ್ಲಿದ್ದ ಸಂದೀಪ್ ಪಾಟೀಲ್​ 2003ರ ವರ್ಲ್ಡ್​​ಕಪ್​ ವೇಳೆ ಕೀನ್ಯಾ ತಂಡದ ಕೋಚ್ ಆಗಿದ್ರು. ಅಂದು ಘಟಾನುಘಟಿ ಟೀಂಗಳ ಜೊತೆ ಸೆಣಸಾಡಿ ಸೆಮಿಫೈನಲ್​ಗೆ ತಲುಪಿದ್ದು ಕೀನ್ಯಾ ಪಾಲಿಗೆ ದೊಡ್ಡ ಅಚೀವ್​ಮೆಂಟ್ ಆಗಿತ್ತು. ಅದೇ ಕೊನೆ ಆಮೇಲೆ ಕೀನ್ಯಾ ಕ್ರಿಕೆಟ್ ಟೀಂ ಹೇಳ ಹೆಸರಿಲ್ಲದಂತಾಗಿದೆ. ಈ ಬಾರಿ ವರ್ಲ್ಡ್​​ಕಪ್​ ಕ್ವಾಲಿಫೈ ರೇಸ್​​ನಲ್ಲೂ ಕೀನ್ಯಾ ಇರಲಿಲ್ಲ. ಕೀನ್ಯಾದ ಈಗಿನ ಕಥೆ ಅದೇನೇ ಇರ್ಲಿ, ಆದ್ರೆ ಈಗ ಅಫ್ಘಾನಿಸ್ತಾನ ತಂಡದ ಪ್ರದರ್ಶನ 2003 ಕೀನ್ಯಾ ಟೀಂನ್ನ ನೆನಪಿಸಿರೋದಂತೂ ಸುಳ್ಳಲ್ಲ. ಜೊತೆಗೆ ಆಫ್ಘಾನಿಸ್ತಾನದ ಸಕ್ಸಸ್​​ನಲ್ಲೂ ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಅಜಯ್ ಜಡೇಜಾ ಕೂಡ ಇದ್ದಾರೆ. ಟೂರ್ನಿಯ ಆರಂಭದಿಂದಲೂ ಆಫ್ಘನ್ನರು ಅತ್ಯಂತ ಸ್ಟ್ಯಾಂಡರ್ಡ್ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಚೇಸಿಂಗ್ ವೇಳೆ ಅಫ್ಘಾನಿಸ್ತಾನದ ಟಾಪ್​-3 ಬ್ಯಾಟ್ಸ್​​ಮನ್​ಗಳೇ ಮ್ಯಾಚ್​ ಮುಗಿಸ್ತಿದ್ದಾರೆ. ಬೌಲಿಂಗ್​​ನಲ್ಲಂತೂ ಸ್ಪಿನ್ನರ್ಸ್ ಮತ್ತು ಪೇಸ್​ ಬೌಲರ್ಸ್ ಕಲೆಕ್ಟಿವ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ನೆದರ್​​ಲ್ಯಾಂಡ್​ ವಿರುದ್ಧದ ಮ್ಯಾಚ್​​ನಲ್ಲಂತೂ ಅಫ್ಘಾನಿಸ್ತಾನದ ಫೀಲ್ಡಿಂಗ್​ ಕೂಡ ಟಾಪ್ ಕ್ಲಾಸ್ ಆಗಿತ್ತು. ನಾಲ್ಕು ರನ್​ಔಟ್​​ಗಳನ್ನ ಮಾಡಿದ್ರು. ಅಂತೂ​ ಸೆಮಿಫೈನಲ್​ಗೆ ಎಂಟ್ರಿ​ಯಾಗೋಕೆ ಅಫ್ಘಾನಿಸ್ತಾನಕ್ಕೂ ಉತ್ತಮ ಚಾನ್ಸ್ ide​. ಇನ್ನೆರಡು ಮ್ಯಾಚ್​​ಗಳು ಬಾಕಿ ಇದ್ದು ಎರಡರಲ್ಲೂ ಅಫ್ಘಾನಿಸ್ತಾನ ಗೆಲ್ಲಬೇಕಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್ ಪೈಕಿ ಯಾವುದಾದ್ರು ಒಂದು ಟೀಂ ತನ್ನ ಉಳಿದಿರುವ ಮ್ಯಾಚ್​ಗಳನ್ನ ಸೋಲಬೇಕಿದೆ. ಈಗ ಅಫ್ಘಾನಿಸ್ತಾನಕ್ಕೆ ಚಾಲೆಂಜ್ ಆಗಿರೋದು ಅಂದ್ರೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್. ಆದ್ರೆ ಆಫ್ಘನ್ನರ ಈ ಪರ್ಫಾಮೆನ್ಸ್​ನಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್  ಉಳಿದಿರುವ ಮ್ಯಾಚ್​​ಗಳನ್ನ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿವೆ. ಹೀಗಾಗಿ ಅಫ್ಘಾನಿಸ್ತಾನಕ್ಕೆ ಸೆಮಿಫೈನಲ್​ಗೆ ಎಂಟ್ರಿಯಾಗುವ ಎಲ್ಲಾ ಅವಕಾಶ ಕೂಡ ಇದೆ. ಏನು ಬೇಕಾದ್ರೂ ಆಗಬಹುದು.

 

Sulekha