ಏರ್ ಶೋಗೆ ಮುಹೂರ್ತ ಫಿಕ್ಸ್ – ಈ ಬಾರಿ ಹೇಗಿರುತ್ತೆ ಗೊತ್ತಾ ವಿಮಾನಗಳ ಚಮತ್ಕಾರ?

ಏರ್ ಶೋಗೆ ಮುಹೂರ್ತ ಫಿಕ್ಸ್ – ಈ ಬಾರಿ ಹೇಗಿರುತ್ತೆ ಗೊತ್ತಾ ವಿಮಾನಗಳ ಚಮತ್ಕಾರ?

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17 ರವರೆಗೆ 14 ನೇ ಆವೃತ್ತಿಯ “ಏರೋ ಇಂಡಿಯಾ ಏರ್ ಶೋ” ನಡೆಯಲಿದೆ.  ಈಗಾಗಲೇ “ಏರೋ ಇಂಡಿಯಾ ಏರ್ ಶೋ” ಪ್ರದರ್ಶನದ  14ನೇ ಆವೃತ್ತಿಗಾಗಿ 731 ಎಕ್ಸಿಬಿಟರ್​ಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಏರೋ ಇಂಡಿಯಾ 1996 ರಿಂದ ಬೆಂಗಳೂರಿನಲ್ಲಿ ಏರ್ ಶೋ ಆಯೋಜಿಸುತ್ತಿದೆ.  13 ಯಶಸ್ವಿ ಆವೃತ್ತಿಗಳೊಂದಿಗೆ ಜಾಗತಿಕವಾಗಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. 14 ನೇ ಆವೃತ್ತಿಯ   ಮೆಗಾ ಏರ್ ಶೋ ವನ್ನು ಪ್ರಧಾನಿ ನರೇಂದ್ರ ಮೋದಿ ಫೆ. 13 ರಂದು ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ: ಮೊಟ್ಟೆಯೇ ಬೇಕೆಂದು ಪಟ್ಟು ಹಿಡಿದ ಮಕ್ಕಳು – ಸಮೀಕ್ಷೆಯಲ್ಲಿ ಸತ್ಯ ಬಹಿರಂಗ!

‘ಕೋಟ್ಯಂತರ ಅವಕಾಶಗಳ ರನ್​ವೇ’ ಘೋಷವಾಕ್ಯದೊಂದಿಗೆ ಏರ್​ಶೋ ನಡೆಯಲಿದೆ. ‘ಮಂಥನ್​’ ಹೆಸರಿನ ಸ್ಟಾರ್ಟ್​ಅಪ್​ ಮತ್ತು ‘ಬಂಧನ್’ ಕಾರ್ಯಕ್ರಮದಲ್ಲಿ ಹಲವು ಒಪ್ಪಂದಗಳಿಗೆ ಉದ್ಯಮಿಗಳು ಸಹಿಹಾಕಲಿದ್ದಾರೆ. ವಿವಿಧ ದೇಶಗಳ ರಕ್ಷಣಾ ಸಚಿವರೊಂದಿಗೆ ಸಂವಾದ ನಡೆಯಲಿದೆ. ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿವಿಧ ಕಂಪನಿಗಳ ಸಿಇಒಗಳೊಂದಿಗೆ ವಿಶೇಷ ಸಭೆಯೂ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಯುದ್ಧೋಪಕರಣಗಳನ್ನು ಆಮದು ಮಾಡಿಕೊಳ್ಳುವ ಉದ್ದೇಶದಿಂದ ಮಾತುಕತೆ ನಡೆಸುವುದಕ್ಕಷ್ಟೇ ಸಂವಾದಗಳು ಸೀಮಿತವಾಗುವುದಿಲ್ಲ. ಯುದ್ಧೋಪಕರಣಗಳ ರಫ್ತು ಮತ್ತು ಸಹಯೋಗಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

14 ನೇ ಆವೃತ್ತಿಯ   ಮೆಗಾ ಏರ್ ಶೋ ವನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಅಧಿಕೃತ ವೆಬ್​ಸೈಟ್​ ಮೂಲಕ ಟಿಕೆಟ್​ಗಳನ್ನು ಖರೀದಿಸಲು ಅವಕಾಶವಿದೆ. ಬ್ಯುಸಿನೆಸ್ ಟಿಕೆಟ್​ಗೆ ₹ 5,000 ಶುಲ್ಕ ನಿಗದಿಪಡಿಸಲಾಗಿದೆ. ವಿದೇಶಿಯರಿಗೆ 150 ಡಾಲರ್ ಶುಲ್ಕವಿದೆ. ವಿಮಾನಗಳು ಹಾಗೂ ಎಕ್ಸಿಬಿಷನ್ ನೋಡುವ ಟಿಕೆಟ್​ಗೆ ₹ 2,500 ಶುಲ್ಕವಿದೆ. ಕೇವಲ ವಿಮಾನಗಳನ್ನು ನೋಡುವ ಸ್ಥಳದ ಪ್ರವೇಶಕ್ಕೆ ₹ 1,000 ಶುಲ್ಕ ನಿಗದಿಪಡಿಸಲಾಗಿದೆ. ಮೊದಲು ಎರಡು ದಿನ ಉದ್ಯಮಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೊನೆಯ ಎರಡು ದಿನ ಸಾರ್ವಜನಿಕರಿಗೆ ಮೆಗಾ ಏರ್ ಶೋ ವೀಕ್ಷಿಸಲು ಅವಕಾಶ ನೀಡಲಾಗಿದೆ.

suddiyaana