ಬಿಗ್‌ಬಾಸ್ ಮನೆಯಲ್ಲಿ ನಮ್ರತಾ ಬಾಯಲ್ಲಿ ಯಾಕೆ ಆ ಪದ..? – ಕಾರ್ತಿಕ್, ವಿನಯ್‌ಗೂ ಅಡಲ್ಟ್ ಟಾಕ್ ಬೇಕಿತ್ತಾ?

ಬಿಗ್‌ಬಾಸ್ ಮನೆಯಲ್ಲಿ ನಮ್ರತಾ ಬಾಯಲ್ಲಿ ಯಾಕೆ ಆ ಪದ..? – ಕಾರ್ತಿಕ್, ವಿನಯ್‌ಗೂ ಅಡಲ್ಟ್ ಟಾಕ್ ಬೇಕಿತ್ತಾ?

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕೆಲವೊಮ್ಮೆ ಎಲ್ಲೆ ಮೀರಿ ಮಾತಾಡಿರುವುದು ಇದೆ. ಅಂಥಾ ಟೈಮ್‌ನಲ್ಲಿ ಬಿಗ್‌ಬಾಸ್ ಸರಿಯಾಗಿಯೇ ಎಚ್ಚರಿಕೆ ಕೂಡಾ ಕೊಟ್ಟಿದೆ. ಈಗ ಬಿಗ್‌ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್‌ಗಳು ಕೇಳಿಬಂದಿವೆ. ಅದು ಕೂಡಾ ಕಾರ್ತಿಕ್, ನಮ್ರತಾ ಮತ್ತು ವಿನಯ್ ಈ ರೀತಿಯ ಅಡಲ್ಟ್ ಟಾಕ್ ಮಾತಾಡಿದ್ದಾರೆ.

ಇದನ್ನೂ ಓದಿ: ದೊಡ್ಡಪ್ಪ ತೋರಿಸಿದ ಹುಡುಗಿಗೆ ತಾಳಿ ಕಟ್ಟಿದೆ, ಗೇಟಿಂದ ಆಚೆ ಹೋಗು ಅಂತಾ ಹೇಳಿದರು – ಮದುವೆ ವಿವಾದಕ್ಕೆ ತೆರೆ ಎಳೆದ ವರ್ತೂರು ಸಂತೋಷ್

ಬಿಗ್ ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್ ಹೊಸತೇನಲ್ಲ. ಆದರೆ, ಮಾತು ಯಾವತ್ತೂ ಮಿತಿಯಲ್ಲಿರಬೇಕು. ಮಿತಿಮೀರಿದರೆ ವೀಕ್ಷಕರ ಅಸಮಾಧಾನಕ್ಕೆ ಗುರಿಯಾಗಬೇಕಾಗುತ್ತದೆ. ಬಿಗ್ ಬಾಸ್‌ನಲ್ಲಿ ನೂರಾರು ಕ್ಯಾಮೆರಾಗಳು ಸ್ಪರ್ಧಿಗಳನ್ನು ನೋಡುತ್ತಲೇ ಇರುತ್ತವೆ. ಎಷ್ಟೇ ಸಣ್ಣ ಧ್ವನಿಯಲ್ಲಿ ಮಾತನಾಡಿದರೂ ಮೈಕ್ ಮೂಲಕ ಕೇಳುತ್ತದೆ. ಹೀಗಾಗಿ, ಯಾವ ವಿಚಾರಗಳನ್ನೂ ಕೂಡಾ ಬಿಗ್‌ಬಾಸ್ ಮನೆಯಲ್ಲಿ ಮುಚ್ಚಿಡೋಕೆ ಸಾಧ್ಯವೇ ಇಲ್ಲ. ಹೀಗಾಗಿ, ಸ್ಪರ್ಧಿಗಳು ಮಾತಿನ ಬಗ್ಗೆ, ತಮ್ಮ ಆ್ಯಕ್ಷನ್ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈಗ ಬಿಗ್ ಬಾಸ್ ಮನೆಯಲ್ಲಿ ಅಡಲ್ಟ್ ಟಾಕ್ ನಡೆದಿದೆ. ವಿನಯ್, ಕಾರ್ತಿಕ್, ನಮ್ರತಾ ಹಾಗೂ ಅವಿನಾಶ್  ಅಡುಗೆ ಮನೆಯ ಕಟ್ಟೆಯ ಮೇಲೆ ಕುಳಿತಿದ್ದರು. ಈ ವೇಳೆ ಊಟದ ಬಗ್ಗೆ ಚರ್ಚೆ ಬಂತು. ‘ಮಶ್ರೂಮ್ ಘೀ ರೋಸ್ಟ್ ಚೆನ್ನಾಗಿರುತ್ತದೆ’ ಎಂದರು ಕಾರ್ತಿಕ್. ಇದನ್ನು ಕೇಳಿ ನಮ್ರತಾ ಬಾಯಿ ಚಪ್ಪರಿಸಿದರು. ‘ಯಾವುದಾದರೂ ತಿಂಡಿಯ ಹೆಸರು ಹೇಳಿದರೆ ನಮ್ರತಾ ಎಕ್ಸ್‌ಪ್ರೆಶನ್ ಬಹಳ ವಿಚಿತ್ರವಾಗಿ ಇರುತ್ತದೆ. ನಮ್ರತಾ ನೀವು ಹೋಗಿ ಬಿಡಿ’ ಎಂದರು ಕಾರ್ತಿಕ್. ಈ ಮಾತನ್ನು ಕೇಳಿ ನಮ್ರತಾ ಸಿಟ್ಟಾದರು. ನಮ್ರತಾ ಅವರನ್ನು ಸಮಾಧಾನ ಮಾಡೋಕೆ ಬಂದರು ಕಾರ್ತಿಕ್. ಆಗ ನಮ್ರತಾ ಅವರು ಕಾರ್ತಿಕ್‌ಗೆ ಕಚಗುಳಿ ಇಡೋಕೆ ಪ್ರಯತ್ನಿಸಿದರು. ಆದರೆ, ಅವರಿಗೆ ಕಚಗುಳಿ ಆಗಲೇ ಇಲ್ಲ. ‘ಕಚಗುಳಿ ಆಗುತ್ತದೆ ಎಂದರೆ ಅವರು ಗುಡ್ ಇನ್_ _. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ’ ಎಂದರು ವಿನಯ್. ‘ಗುಡ್ ಇನ್ ವಾಟ್..’ ಎಂದರು ಪವಿ. ಇದಕ್ಕೆ ನಮ್ರತಾ, ‘ಗುಡ್ ಇನ್ ಬೆಡ್’ ಎಂದರು. ಆಗ ಕಾರ್ತಿಕ್ ಅವರು, ‘ನನಗೆ ತುಂಬಾನೇ ಕಚಗುಳಿ ಆಗುತ್ತದೆ’ ಎಂದು ನಕ್ಕರು. ಈ ರೀತಿಯ ಅಡಲ್ಟ್ ಟಾಕ್‌ಗಳು ಈ ಮೊದಲು ಕೂಡ ನಡೆದಿವೆ. ಆದರೆ, ಇಂಥಾ ಮಾತುಗಳು ಲಿಮಿಟ್ ಮೀರಬಾರದು ಅಷ್ಟೇ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗುತ್ತದೆ.

Sulekha