ಮೊದಲ ಬಾರಿಗೆ ಸಿಂಹದ ಮರಿಗಳನ್ನು ಕಂಡ ಚಿಂಪಾಂಜಿ ಮಾಡಿದ್ದೇನು ಗೊತ್ತಾ?

ಮೊದಲ ಬಾರಿಗೆ ಸಿಂಹದ ಮರಿಗಳನ್ನು ಕಂಡ ಚಿಂಪಾಂಜಿ ಮಾಡಿದ್ದೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವೆ ನಂಟು ಹೆಚ್ಚುತ್ತಲೇ ಇದೆ. ಅದ್ರಲ್ಲೂ ಮಕ್ಕಳಿಗೆ ಪ್ರಾಣಿಗಳು ಬೇಗನೆ ಹತ್ತಿರವಾಗುತ್ತವೆ. ಈಗೀಗ ಪ್ರಾಣಿಗಳು ಕೂಡ ಮನುಷ್ಯರಂತೆಯೇ ವರ್ತಿಸುತ್ತವೆ. ಏಕೆಂದರೆ ಕೆಲವೊಂದು ಪ್ರಾಣಿಗಳು ಮನುಷ್ಯರಂತೆ ಬುದ್ಧಿಯನ್ನು ಹೊಂದಿದ್ದು ಕೆಲವೊಮ್ಮೆ ಇದು ಮಾಡುವಂತಹ ಕೆಲಸಗಳು ನೋಡುಗರನ್ನೇ ಆಶ್ಚರ್ಯಪಡುವಂತೆ ಮಾಡುತ್ತವೆ.  ಇನ್ನು ಚಿಂಪಾಂಜಿ, ಗೊರಿಲ್ಲಾಗಳ ಹಾವಭಾವ, ವರ್ತನೆಗಳು ಮನುಷ್ಯರನ್ನೇ ಹೋಲುತ್ತವೆ. ಇವುಗಳು ವ್ಯಕ್ತಪಡಿಸುವ ಭಾವನೆಗಳನ್ನು ಅರಿತುಕೊಳ್ಳಲು ಕಷ್ಟವಾಗೋದಿಲ್ಲ. ಅಷ್ಟೇ ಅಲ್ಲದೇ ಇವುಗಳು ಇತರ ಕೆಲ ಪ್ರಾಣಿಗಳನ್ನು, ಮರಿಗಳನ್ನು ಕಂಡಾಗ ತೋರುವ ಹಾವ ಭಾವಗಳು ಅಚ್ಚರಿ ಮೂಡಿಸುತ್ತವೆ. ಇಂತಹ ಸಾಕಷ್ಟು ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಚಿಂಪಾಂಜಿಯೊಂದು ಮೊದಲ ಬಾರಿಗೆ  ಸಿಂಹದ ಮರಿಗಳನ್ನು ನೋಡುವ ಮತ್ತು ಅವುಗಳನ್ನು ಮುದ್ದಿಸಿ, ಆಟ ಆಡಿಸುವ ದೃಶ್ಯ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಅಯ್ಯಯ್ಯೋ ಹೆಂಗಪ್ಪಾ ಬಿಡಿಸಿಕೊಳ್ಳೋದು – ಏಡಿ ಜೊತೆ ಆಡಲು ಹೋದವನ ಮೂಗಿಗೆ ಆಪತ್ತು!

ಚಿಂಪಾಂಜಿ ಸಿಂಹದ ಮರಿಗಳನ್ನು ಮುದ್ದಾಡುತ್ತಿರುವ ದೃಶ್ಯವನ್ನು landonscherr ಅನ್ನುವ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್  ಮಾಡಲಾಗಿದೆ. ವ್ಯಕ್ತಿಯೊಬ್ಬರು ಚಿಂಪಾಂಜಿಯನ್ನು ಕರೆತರುವ ದೃಶ್ಯದ ಮೂಲಕ ಈ ವಿಡಿಯೋ ಶುರುವಾಗುತ್ತದೆ. ಇದಾದ ಬಳಿಕ ಪುಟಾಣಿ ಸಿಂಹದ ಮರಿಗಳ ದೃಶ್ಯ ಅಲ್ಲಿ ಕಾಣಿಸುತ್ತವೆ. ಈ ಪುಟಾಣಿ ಸಿಂಹಗಳನ್ನು ಕಂಡ ತಕ್ಷಣ ಚಿಂಪಾಂಜಿಯ ಖುಷಿಗೆ ಪಾರವೇ ಇರುವುದಿಲ್ಲ. ಕೂಡಲೇ ಚಿಂಪಾಂಜಿ ಓಡಿ ಹೋಗಿ ಸಿಂಹದ ಮರಿಗಳನ್ನು ಗಟ್ಟಿಯಾಗಿ ಅಪ್ಪಿಕೊಂಡಿದೆ. ಅಲ್ಲದೇ  ಅದು ತನ್ನ ಖುಷಿ ವ್ಯಕ್ತಪಡಿಸುವ ಜತೆಗೆ ಪುಟಾಣಿಗಳೊಂದಿಗೆ ಆಟ ಆಡುತ್ತದೆ. ಜತೆಗೆ, ಅಷ್ಟೇ ಜಾಗರೂಕತೆಯಿಂದಲೂ ನೋಡಿಕೊಳ್ಳುತ್ತದೆ. ಈ ದೃಶ್ಯ ಭಾರಿ ವೈರಲ್ ಆಗುತ್ತಿದೆ.

ಈ ಮುದ್ದಾದ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇದು ಆನಂದ ನೀಡುವ ದೃಶ್ಯವಿದು. ಚಿಂಪಾಂಜಿಗೆ ಹೇಗೆ ವರ್ತಿಸಬೇಕು ಮತ್ತು ಪ್ರೀತಿಯನ್ನು ಹೇಗೆ ನೀಡಬೇಕೆಂದು ತಿಳಿದಿದೆ. ನನಗೆ ತಿಳಿದಿರುವ ಬಹಳಷ್ಟು ಮನುಷ್ಯರಿಗಿಂತ ಈ ಚಿಂಪಾಂಜಿಯೇ ವಾಸಿ ಅಂತಾ ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by LANDON SCHERR (@landonscherr)

suddiyaana