ಔಷಧಿ ವಿಚಾರಕ್ಕೆ ಗಂಡ- ಹೆಂಡತಿ ಜಗಳ – ಅಳಿಯ ಕಥೆಯನ್ನೇ ಮುಗಿಸಿದ ಮಾವ

ಔಷಧಿ ವಿಚಾರಕ್ಕೆ ಗಂಡ- ಹೆಂಡತಿ ಜಗಳ –  ಅಳಿಯ ಕಥೆಯನ್ನೇ ಮುಗಿಸಿದ ಮಾವ

ಮಗಳಜೊತೆ ಜಗಳ ಮಾಡಿದ್ದಕ್ಕೆ ಅಳಿಯನ ನೆತ್ತರು ಹರಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.  ಮೃತ ವ್ಯಕ್ತಿಯನ್ನು 31 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ವಿನಯ್‌ ಗುಪ್ತಾ ಎಂದು ಗುರುತಿಸಲಾಗಿದೆ. ವಿನಯ್ ಗುಪ್ತಾ ಮತ್ತು ಅವರ ಪತ್ನಿ ರೇಖಾ ನಡುವೆ ಮಗುವಿಗೆ ಔಷಧಿ ನೀಡುವ ಬಗ್ಗೆ ಜಗಳವಾಗಿದೆ. ಈ ಸಮಯದಲ್ಲಿ, ರೇಖಾ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮನೆಯಿಂದ ಹೊರಟು ಹೋಗಿದ್ದಾಳೆ.

ನಂತರ ಆಕೆ ದೆಹಲಿಯ ನಿಹಾಲ್ ವಿಹಾರ್‌ನಲ್ಲಿರುವ ತನ್ನ ತವರು ಮನೆಗೆ ಹೋಗಿ ಇಬ್ಬರು ಸಹೋದರರು, ಅತ್ತಿಗೆ, ತಂದೆ ಮತ್ತು ಚಿಕ್ಕಪ್ಪ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ವಾಪಸ್‌ ತನ್ನ ಮನೆಗೆ ಬಂದಿದ್ದಾಳೆ. ಕುಟುಂಬ ಸದಸ್ಯರೊಂದಿಗೆ ಮನೆಗೆ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯಾವಳಿಗಳಲ್ಲಿ ರೇಖಾ ಕೆಂಪು ಸೂಟ್ ಧರಿಸಿದ್ದರೆ, ಅವರ ಅತ್ತಿಗೆ ನೀಲಿ ಸೂಟ್ ಧರಿಸಿರುವುದು ಕಂಡುಬಂದಿದೆ. ರೇಖಾ ಅವರ ಇಬ್ಬರು ಸಹೋದರರು, ಅವರ ತಂದೆ ಮತ್ತು ಇನ್ನೊಬ್ಬ ವ್ಯಕ್ತಿ ಕಾರಿನಲ್ಲಿರುವುದು ಸಹ ಈ ದೃಶ್ಯಗಳಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಅಮಾನವೀಯ ಘಟನೆ – ಖಾಸಗಿ ಕ್ಷಣದ ವಿಡಿಯೋ ಇಟ್ಟುಕೊಂಡು ಅಪ್ರಾಪ್ತೆ ಮೇಲೆ 7 ಜನರಿಂದ ಅತ್ಯಾ*ಚಾರ

ರೇಖಾ ಮನೆಗೆ ಬರುತ್ತಿದ್ದಂತೆ ಜೋರಾಗಿ ಕೂಗಾಡಲು ಪ್ರಾರಂಭಿಸಿದ್ದಾಳೆ. ಆಕೆಯ ಸಹೋದರರು ಹಾಗೂ ತಂದೆ ವಿನಯ್‌ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ವಿನಯ್‌ ತಾಯಿ ಹೇಳಿಕೆ ಪ್ರಕಾರ ಮನೆಗೆ ಬಂದ ಅತಿಥಿಗಳಿಗೆ ನೀರು ತರಲು ಒಳಗೆ ಹೋದಾಗ ವಿನಯ್‌ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ವಿನಯ್‌ ತೀವ್ರ ಅಸ್ವಸ್ಥರಾಗಿದ್ದರು. ಶೀಘ್ರವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆತನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.

ಇನ್ನು ವಿನಯ್ ನೋಯ್ಡಾ ಮೂಲದ ಸಾಫ್ಟ್‌ವೇರ್ ಕಂಪನಿಯಾದ ಅಡೋಬ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತ  ವಾರ್ಷಿಕ ಸುಮಾರು 60 ಲಕ್ಷ ರೂ.ಗಳ ಪ್ಯಾಕೇಜ್ ಹೊಂದಿದ್ದರು. ಮೂರುವರೆ ವರ್ಷಗಳ ಹಿಂದೆ ರೇಖಾಳನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ದೆಹಲಿಯ ಮನೆಯಲ್ಲಿ, ವಿನಯ್ ಮತ್ತು ಅವನ ಹೆಂಡತಿ ಮನೆಯ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದರೆ, ವಿನಯ್‌ ತಂದೆ ತಾಯಿ ಕೆಳ ಮಹಡಿಯಲ್ಲಿ ವಾಸಿಸುತ್ತಿದ್ದರು. ಕುಟುಂಬಸ್ಥರ ಪ್ರಕಾರ ಈ ಹಿಂದೆಯೂ ರೇಖಾ ಹಲವು ವಿಷಯಕ್ಕೆ ಜಗಳ ಮಾಡುತ್ತಿದ್ದಳು ಅನ್ನೋ ಆರೋಪ ಕೇಳಿ ಬಂದಿದೆ.

Kishor KV

Leave a Reply

Your email address will not be published. Required fields are marked *