ಆದಿತ್ಯ L1 ಉಡಾವಣಾ ತಾಲೀಮು ಪೂರ್ಣ – ಆಂತರಿಕ ತಪಾಸಣೆ ಯಶಸ್ವಿ

ಆದಿತ್ಯ L1 ಉಡಾವಣಾ ತಾಲೀಮು ಪೂರ್ಣ – ಆಂತರಿಕ ತಪಾಸಣೆ ಯಶಸ್ವಿ

ಬೆಂಗಳೂರು: ಚಂದ್ರಯಾನ -3 ಸಕ್ಸಸ್‌ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೂರ್ಯಯಾನಕ್ಕೆ ಸಜ್ಜಾಗಿದ್ದು, ಸೆ. 2 ರಂದು ಉಡಾವಣೆಯಾಗಲಿದೆ. ಇದೀಗ ಇಸ್ರೋ ಉಡ್ಡಯನದ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿದೆ.

ಶ್ರೀಹರಿಕೋಟದ ಉಡ್ಡಯನ ನೆಲೆಯಿಂದ ಸೆ.2ರಂದು ಬೆಳಗ್ಗೆ 11.50ಕ್ಕೆ ನೌಕೆಯ ಉಡ್ಡಯನ ನಡೆಯಲಿದ್ದು, ಈ ಸಂಬಂಧ ನೌಕೆಯ ಉಡ್ಡಯನ ಪ್ರಕ್ರಿಯೆ ಮತ್ತು ರಾಕೆಟ್‌ನ ಆಂತರಿಕ ತಪಾಸಣಾ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: ಚಂದ್ರಯಾನ – 3 ಸಕ್ಸಸ್‌ ಬೆನ್ನಲ್ಲೇ ಹೊಸ ಕ್ರಾಂತಿಗೆ ಮುಂದಾದ ಇಸ್ರೋ – ಆದಿತ್ಯ-ಎಲ್ 1 ಉಡಾವಣೆಗೆ ಮುಹೂರ್ತ ಫಿಕ್ಸ್!

ಚಂದ್ರನ ಕಡೆಗೆ ಈಗಾಗಲೇ ಮೂರು ಉಡ್ಡಯನ ಕೈಗೊಂಡಿರುವ ಇಸ್ರೋ, ಇದೇ ಮೊದಲ ಬಾರಿಗೆ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‌-1 ಎಂಬ ನೌಕೆಯೊಂದನ್ನು ರವಾನಿಸುತ್ತಿದೆ. ನೌಕೆಯನ್ನು ಪಿಎಸ್‌ಎಲ್‌ವಿ-ಸಿ 57 ರಾಕೆಟ್‌ ಮೂಲಕ ಉಡ್ಡಯನ ಮಾಡಲಾಗುತ್ತಿದ್ದು, ಅದನ್ನು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಎಲ್‌1 ಎಂದು ಕರೆಯಲಾಗುವ ಸ್ಥಳದಲ್ಲಿ ನಿಯೋಜಿಸಲಾಗುತ್ತದೆ. ಎಲ್‌1 ಸ್ಥಳಕ್ಕೆ ತಲುಪಲು ಅದಕ್ಕೆ 4 ತಿಂಗಳು ಹಿಡಿಯಲಿದೆ. ಅದು ಅಲ್ಲಿಂದಲೇ ಸೂರ್ಯನ ಕುರಿತು ಸಂಶೋಧನೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ.

suddiyaana