ಚಂದ್ರಯಾನ – 3 ಬೆನ್ನಲ್ಲೇ ಇಸ್ರೋಗೆ ಮತ್ತೊಂದು ಸಕ್ಸಸ್‌ – ಮೊದಲ ಬಾರಿಗೆ ಸೌರ ಜ್ವಾಲೆ ಸ್ಫೋಟ ಸೆರೆಹಿಡಿದ ಆದಿತ್ಯ  L1

ಚಂದ್ರಯಾನ – 3 ಬೆನ್ನಲ್ಲೇ ಇಸ್ರೋಗೆ ಮತ್ತೊಂದು ಸಕ್ಸಸ್‌ – ಮೊದಲ ಬಾರಿಗೆ ಸೌರ ಜ್ವಾಲೆ ಸ್ಫೋಟ ಸೆರೆಹಿಡಿದ ಆದಿತ್ಯ  L1

ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಚಂದ್ರಯಾನ ಯಶಸ್ಸಿನ ಬಳಿ, ಸೂರ್ಯನ ಅಧ್ಯಯನಕ್ಕೆ ಆದಿತ್ಯ  L1 ನೌಕೆಯನ್ನು ಈಗಾಗಲೇ ಕಳುಹಿಸಿದೆ. ಇದೀಗ ಮೊದಲ ಬಾರಿಗೆ ಆದಿತ್ಯ L1 ನೌಕೆ ಸೂರ್ಯನಿಂದ ಮೊದಲ ಶಕ್ತಿ ಸ್ಫೋಟವನ್ನು ಸೆರೆ ಹಿಡಿದಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇಸ್ರೋ ಈ ಕುರಿತು ಮಾಹಿತಿ ನೀಡಿದೆ. ಆದಿತ್ಯ-ಎಲ್ 1 ಬೋರ್ಡ್‌ನಲ್ಲಿರುವ ಸ್ಪೆಕ್ಟ್ರೋಮೀಟರ್ ಸುಮಾರು ಅಕ್ಟೋಬರ್ 29 ರಿಂದ ಅದರ ಮೊದಲ ವೀಕ್ಷಣಾ ಅವಧಿಯಲ್ಲಿ ಸೌರ ಜ್ವಾಲೆಗಳ ಸ್ಪೋಟವನ್ನು ಸೆರೆಹಿಡಿದಿದೆ  ಎಂದು ಹೇಳಿದೆ.

ಇಸ್ರೋ ಉಡಾವಣೆ ಮಾಡಿರುವ ಆದಿತ್ಯ L1 ನೌಕೆಯಲ್ಲಿ 7 ಪ್ಲೇಲೋಡ್‌ಗಳಿವೆ. ಇದರಲ್ಲಿ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಪ್ಲೇಲೋಡ್ ಸೂರ್ಯ ಮೇಲ್ಮೈನಲ್ಲಿ ನಡೆಯುವ ಸೌರ ಜ್ವಾಲೆಗಳ ಹಠಾತ್ ಸ್ಫೋಟವನ್ನು ಸೆರೆ ಹಿಡಿದಿದೆ. ಅಕ್ಟೋಬರ್ 29 ರಂದು ಈ ಸ್ಫೋಟವನ್ನು ದಾಖಲಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ – ದೇಶದೆಲ್ಲೆಡೆ ಪಟಾಕಿ ನಿಷೇಧ!

ಸೂರ್ಯ ಮೇಲ್ಮೈನಲ್ಲಿ ಎಕ್ಸ್ ಕಿರಣಗಳ ಬೆಳಕಿನ ರೂಪದಲ್ಲಿ ಶಕ್ತಿ ಮತ್ತು ವಿಕರಣವನ್ನು ಹೊರಸೂಸುತ್ತದೆ. ಈ ವೇಳೆ ಹಠಾತ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗಳನ್ನು ಆದಿತ್ಯ ಎಲ್1 ದಾಖಲಿಸಿದೆ. ಸೂರ್ಯನ ಸುತ್ತಲಿನ ವಾತಾವರಣವರದಲ್ಲಿ ಸಂಗ್ರವಾಗಿರುವ ಕಾಂತೀಯ ಶಕ್ತಿ ಬಿಡುಗಡೆ ವೇಳೆ  ಈ ರೀತಿ ಸ್ಫೋಟಗಳು ಸಂಭವಿಸುತ್ತದೆ. ಈ ಪೈಕೆ ಕೆಲವು ತೀವ್ರ ಸ್ಫೋಟವಾಗಿದ್ದರೆ, ಕೆಲವು ಸಾಮಾನ್ಯವಾಗಿರುತ್ತದೆ. ಈ ಸ್ಫೋಟದ ತೀವ್ರತೆಯನ್ನೂ ಇಸ್ರೋ ಉಪಗ್ರಹ ದಾಖಲಿಸಿದೆ.

ಸೆಪ್ಟೆಂಬರ್ 9 ರಂದು ಆದಿತ್ಯ ಎಲ್ 1 ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ನೆಲೆಯಿಂದ ಉಡಾವಣೆ ಮಾಡಲಾಗಿತ್ತು. ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಮೂಲಕ ಆದಿತ್ಯ ಎಲ್ 1 ನೌಕೆ ಹಾರಿಸಲಾಗಿತ್ತು. 15 ಲಕ್ಷ ಕಿಲೋಮೀಟರ್ ದೂರಕ್ಕೆ ಸಾಗಿ ಸೂರ್ಯನ ಎಲ್ 1 ಪಾಯಿಂಟ್‌ನಲ್ಲಿ ಈ ಅದಿತ್ಯ ಎಲ್ 1 ಅಧ್ಯಯನ ನಡೆಸಲಿದೆ. ಈ ದೂರ ಕ್ರಮಿಸಲು 125 ದಿನಗಳ ಅವಶ್ಯಕತೆ ಇದೆ. ಸೂರ್ಯನ ದೂರ ಭೂಮಿಯಿಂದ 15 ಕೋಟಿ ಕಿಲೋಮೀಟರ್.

ಲ್ಯಾಗ್ರೇಂಜಿಯನ್‌ ಪಾಯಿಂಟ್‌’ ಅಥವಾ ಎಲ್‌1 ಎನ್ನುವುದು ಸೂರ್ಯ-ಭೂಮಿಯ ಗುರುತ್ವ ಬಲ ಸಮಾನವಾಗಿರುವ ಸ್ಥಳ. ಇಲ್ಲಿ ನೌಕೆ ನಿಯೋಜಿಸಿದರೆ ಸೂರ್ಯನನ್ನು ಗ್ರಹಣದಂಥ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಸತತವಾಗಿ ನೇರವಾಗಿ ವೀಕ್ಷಣೆ ಮಾಡಲು ಸಾಧ್ಯ. ಇದು ಹೆಚ್ಚಿನ ಇಂಧನ ವ್ಯರ್ಥಮಾಡದೇ ಸುದೀರ್ಘ ಕಾಲ ನೌಕೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ನೌಕೆಯಲ್ಲಿನ 4 ಉಪಕರಣಗಳು ಸತತವಾಗಿ ಸೂರ್ಯನನ್ನು ವೀಕ್ಷಿಸುತ್ತಾ ಮಾಹಿತಿ ಸಂಗ್ರಹಿಸಲಿದ್ದರೆ, ಉಳಿದ ಮೂರು ಉಪಕರಣಗಳು ಸ್ಥಳದಲ್ಲಿನ ಪಾರ್ಟಿಕಲ್‌ (ಕಣಗಳು) ಮತ್ತು ಪ್ರದೇಶಗಳ ಅಧ್ಯಯನ ನಡೆಸಿ ಅದರ ಮಾಹಿತಿಯನ್ನು ಭೂಮಿಗೆ ರವಾನಿಸಲಿವೆ.

Shwetha M