ಉದ್ಯಮಿ ಯಶಸ್ ಜೊತೆ ಹಸೆಮಣೆಯೇರಿದ ಅದಿತಿ ಪ್ರಭುದೇವ – ಗಣ್ಯರು, ಅಭಿಮಾನಿಗಳಿಂದ ಶುಭ ಹಾರೈಕೆ
ಶ್ಯಾನೆ ಟಾಪ್ ಹುಡುಗಿಗೆ ಮದುವೆ ಸಂಭ್ರಮ- ಶುಭಹಾರೈಸಿದ ಚಿತ್ರರಂಗದ ಗಣ್ಯರು

ಬೆಂಗಳೂರು : ಸ್ಯಾಂಡಲ್‌ವುಡ್‌ನ ಶ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಯಶಸ್ ಜೊತೆ ಅದಿತಿ ಪ್ರಭುದೇವ ಹಸೆಮಣೆ ಏರಿದ್ದಾರೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಆಗಮಿಸಿ ಶುಭಹಾರೈಸಿದರು.
ಇದನ್ನೂ ಓದಿ : ಕೋರ್ಟ್ನಲ್ಲಿ ಕಾಂತಾರಗೆ ಗೆಲುವು.. ‘ವರಾಹರೂಪಂ’ ಹಾಡಿನ ನಿಷೇಧ ತೆರವು!
ನವೆಂಬರ್ 28ರಂದು ಬೆಳಗ್ಗೆ 9.30ರಿಂದ 10.32ರ ಮುಹೂರ್ತದಲ್ಲಿ ಅದಿತಿ ಪ್ರಭುದೇವ , ಉದ್ಯಮಿ ಯಶಸ್ ಅವರನ್ನು ಮದುವೆ ಆಗಿದ್ದಾರೆ. ನವೆಂಬರ್ 26ರಂದು ಹಳದಿ ಸಮಾರಂಭ, 27 ಮೆಹಂದಿ ಮತ್ತು ಸಂಗೀತ ಸಮಾರಂಭ ಹಾಗೂ ರಾತ್ರಿ ಆರತಕ್ಷತೆ ಕಾರ್ಯಕ್ರಮ ನೆರವೇರಿತ್ತು. ನವೆಂಬರ್ 27ರ ರಾತ್ರಿ ನಡೆದ ಆರತಕ್ಷತೆ ಸಂಭ್ರಮದಲ್ಲಿ ಅನೇಕ ಗಣ್ಯರು ಹಾಜರಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಟಿಯರಾದ ಮೇಘ ಶೆಟ್ಟಿ ಹಾಗೂ ರಚನಾ ಕೂಡ ಮದುವೆಯಲ್ಲಿ ಹಾಜರಿದ್ದರು. ಮೇಘಾ ಮತ್ತು ರಚನಾ ಇಬ್ಬರೂ ಅದಿತಿ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಭಾಗಿಯಾಗಿ ಅದಿತಿ ಮತ್ತು ಯಶಸ್ವಿ ಜೋಡಿಗೆ ಶುಭಹಾರೈಸಿದರು.