ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಈಗ ‘ಆದಿಪುರುಷ್’ ಸಿನಿಮಾದ ಮೇಲೆ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊನೆಗೂ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪ್ರಭಾಸ್ ಮತ್ತು ಕೃತಿ ಸನೊನ್‌  (Kriti Sanon) ನಟನೆಯ ‘ಆದಿಪುರುಷ್’ ಸಿನಿಮಾದ ರಿಲೀಸ್‌ ಡೇಟ್ ಫಿಕ್ಸ್‌ ಆಗಿದೆ. ಈ ಕುರಿತು ಅಧಿಕೃತವಾಗಿ ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ.

ಇದನ್ನೂ ಓದಿ:  ಕೆ.ಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ವಿವಾಹಕ್ಕೆ ಸಿದ್ಧತೆ- ಮದುವೆ ಮನೆ ಝಗಮಗ

ನಟ ಪ್ರಭಾಸ್‌ಗೆ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ. ನೆಚ್ಚಿನ ನಟನ ಸಿನಿಮಾಗಾಗಿ ಕಾದು ನೋಡುವ ಅಭಿಮಾನಿ ಬಳಗ ದೊಡ್ಡದಿದೆ. ಹೊಸವರ್ಷಕ್ಕೆ ಆದಿಪುರುಷ್ ಚಿತ್ರ ತೆರೆಕಾಣಬೇಕಿತ್ತು. ಚಿತ್ರದ ಟೀಸರ್‌ಗೆ ಸಿಕ್ಕಿರುವ ನೆಗೆಟಿವ್ ರೆಸ್ಪಾನ್ಸ್‌ನಿಂದಾಗಿ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿತ್ತು. ಜೊತೆಗೆ ಚಿತ್ರದಲ್ಲೂ ಸಾಕಷ್ಟು ಬದಲಾವಣೆ ತರಲಾಗಿತ್ತು. ಒಂದಿಷ್ಟು ಬದಲಾವಣೆಯೊಂದಿಗೆ ಬರುತ್ತೇವೆ ಎಂದು ನಿರ್ದೇಶಕರು ಅಭಿಮಾನಿ ಬಳಗಕ್ಕೂ ತಿಳಿಸಿದ್ದರು. ಇದೀಗ ಚಿತ್ರದಲ್ಲಿ ಹಲವು ಬದಲಾವಣೆಯ ನಂತರ ಜೂನ್‌ 16, 2023ರಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಎಂದು ನಿರ್ದೇಶಕ ಓಂ ರೌತ್‌ ತಿಳಿಸಿದ್ದಾರೆ. ಇನ್ನು 3ಡಿ ರೂಪದಲ್ಲಿ ಆದಿಪುರುಷ್ ಸಿನಿಮಾ ತೆರೆಗೆ ಬರಲಿದೆ.

ರಾಧೆ ಶ್ಯಾಮ್ ಚಿತ್ರದ ಬಗ್ಗೆಯೂ ಸಾಕಷ್ಟು ಕುತೂಹಲ ಸೃಷ್ಟಿಯಾಗಿತ್ತು. ಬಾಹುಬಲಿ ಚಿತ್ರದ ನಂತರ ರಾಧೆಶ್ಯಾಮ್ ಚಿತ್ರ ಪ್ರಭಾಸ್ ಗೆ ಯಶಸ್ಸು ತಂದುಕೊಡುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ರಾಧೆಶ್ಯಾಮ್ ಚಿತ್ರ ಪ್ಲಾಪ್ ಆಗಿತ್ತು. ಪ್ರಭಾಸ್ ಗೂ ಈ ಚಿತ್ರ ಸೋಲಿನ ಪಾಠ ಹೇಳಿಕೊಟ್ಟಂತಿತ್ತು. ಇದೀಗ ಆದಿಪುರುಷ್ ಸಿನಿಮಾ ಪ್ರಭಾಸ್ ಗೆ ಯಶಸ್ಸು ತಂದುಕೊಡಲಿದೆಯಾ ಅನ್ನೋದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

suddiyaana