ಮೂರು ಗಂಟೆ ಸಿಕ್ಕಾಪಟ್ಟೆ ಜಾಸ್ತಿಯಾಯ್ತು..!- ‘ಆದಿಪುರುಷ್’ ಸಿನಿಮಾ ಅವಧಿ ಬಗ್ಗೆ ಅಭಿಮಾನಿಗಳಿಗೆ ಚಿಂತೆ

ಮೂರು ಗಂಟೆ ಸಿಕ್ಕಾಪಟ್ಟೆ ಜಾಸ್ತಿಯಾಯ್ತು..!- ‘ಆದಿಪುರುಷ್’ ಸಿನಿಮಾ ಅವಧಿ ಬಗ್ಗೆ ಅಭಿಮಾನಿಗಳಿಗೆ ಚಿಂತೆ

‘ಆದಿಪುರುಷ್’ ಸಿನಿಮಾದ ಮೇಲೆ ನಟ ಪ್ರಭಾಸ್ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.  ಆದರೆ, ಯಾಕೋ ಸಿನಿಮಾ ಆರಂಭವಾದ ದಿನದಿಂದ ಈಗಲೂ ಕೂಡಾ ಒಂದಲ್ಲ ಒಂದು ನೆಗೆಟಿವ್ ಕಮೆಂಟ್ ಇದ್ದೇ ಇದೆ. ಇದು ಚಿತ್ರತಂಡಕ್ಕೂ ಟೆನ್ಷನ್ ತಂದಿತ್ತು. ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಲೇ ಇರುವ ಈ ಸಿನಿಮಾದ ಅವಧಿ ಬಗ್ಗೆ ಮಾಹಿತಿ ಸಿಕ್ಕಿದೆ. ‘ಆದಿಪುರುಷ್’ ಸಿನಿಮಾದ ಅವಧಿ ಬರೋಬ್ಬರಿ 174 ನಿಮಿಷ ಇದೆ.

ಇದನ್ನೂ ಓದಿ: ಹನುಮ ಜಯಂತಿ ಆಚರಣೆಯ ಸಂಭ್ರಮದಲ್ಲಿ ‘ಆದಿಪುರುಷ್’ ಸಿನಿಮಾ ಪೋಸ್ಟರ್ ರಿಲೀಸ್

‘ಆದಿಪುರುಷ್’ ಸಿನಿಮಾದ ಅವಧಿ ಇಂಟರ್ವಲ್ ಸಮಯವನ್ನೂ ಸೇರಿದರೆ ಮೂರು ಗಂಟೆ ಮೀರಲಿದೆ. ಅಷ್ಟು ಹೊತ್ತು ಥಿಯೇಟರ್‌ಲ್ಲಿ ಪ್ರೇಕ್ಷಕರು ಕೂರಲು ಸಾಧ್ಯವೇ ಅನ್ನೋ ಚರ್ಚೆ ಶುರುವಾಗಿದೆ. ನ್ಯೂಯಾರ್ಕ್‌ನಲ್ಲಿ ಜೂನ್ 7ರಿಂದ ಜೂನ್ 18ರವರೆಗೆ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್’ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್’ ಸಿನಿಮಾ ಆಯ್ಕೆ ಆಗಿದೆ. ಸಿನಿಮೋತ್ಸವದ ವೆಬ್ಸೈಟ್ನಲ್ಲಿ ಈ ಚಿತ್ರದ ಅವಧಿ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಮೂರು ಗಂಟೆ ಅವಧಿಯ ಸಿನಿಮಾವನ್ನು ನೋಡಬೇಕು ಎಂದರೆ ಪ್ರೇಕ್ಷಕರಿಗೆ ಸಖತ್ ತಾಳ್ಮೆ ಅಗತ್ಯ. ಹಾಗಾಗಿ ಇಷ್ಟು ದೀರ್ಘವಾದ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ.

‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಅವರದ್ದು ರಾಮನ ಪಾತ್ರ. ಕೃತಿ ಸನೋನ್ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಅಬ್ಬರಿಸಲಿದ್ದಾರೆ. ಪೌರಾಣಿಕ ಕಥಾಹಂದರದ ಈ ಚಿತ್ರಕ್ಕೆ ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಜೂನ್ 16ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

suddiyaana