‘ಆದಿಪುರುಷ್’ ಚಿತ್ರಕ್ಕೆ ಕಾನೂನು ಸಂಕಷ್ಟ – ಚಿತ್ರ ಬಿಡುಗಡೆಯಾಗುವ ಮುನ್ನವೇ ದೂರು ದಾಖಲು!

‘ಆದಿಪುರುಷ್’ ಚಿತ್ರಕ್ಕೆ ಕಾನೂನು ಸಂಕಷ್ಟ – ಚಿತ್ರ ಬಿಡುಗಡೆಯಾಗುವ ಮುನ್ನವೇ ದೂರು ದಾಖಲು!

ಪ್ರಭಾಸ್‌ ಮತ್ತು ಕೃತಿ ಸನೂನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ʼಆದಿಪುರುಷ್‌ʼ ಚಿತ್ರ ಜೂನ್‌ 16 ರಂದು ತೆರೆಕಾಣುತ್ತಿದೆ. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ಮತ್ತೊಂದು ವಿವಾದಕ್ಕೆ ಸಿಲುಕಿದ್ಯಾ ಅನ್ನೋ ಪ್ರಶ್ನೆ  ಮೂಡಿಬರುತ್ತಿದೆ.

ಕೆಲದಿನಗಳ ಹಿಂದೆ ಆದಿಪುರುಷ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ಇದಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದರ ಬೆನ್ನಲ್ಲೇ ಸಂಜಯ್ ದೀನನಾಥ್ ತಿವಾರಿ ಎಂಬುವವರು ಬಾಂಬೆ ಹೈಕೋರ್ಟ್​ನ CBFC ಮಂಡಳಿಯಲ್ಲಿ ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ. ಬಿಡುಗಡೆ ಮಾಡಲಾದ ಪೋಸ್ಟರ್‌ನಲ್ಲಿ ಚಲನಚಿತ್ರ ನಿರ್ಮಾಪಕ ಮತ್ತು ಕಲಾವಿದರು ಗಂಭೀರ ಎನಿಸುವಂತಹ ತಪ್ಪುಗಳನ್ನು ಎಸಗಿದ್ದಾರೆ. ಆದ್ದರಿಂದ ಇಂತಹ ಗಂಭೀರ ತಪ್ಪುಗಳು ಆದಿಪುರುಷ ಚಿತ್ರದಲ್ಲಿ ಮತ್ತೆ ಸಂಭವಿಸುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೂರು ಗಂಟೆ ಸಿಕ್ಕಾಪಟ್ಟೆ ಜಾಸ್ತಿಯಾಯ್ತು..!- ‘ಆದಿಪುರುಷ್’ ಸಿನಿಮಾ ಅವಧಿ ಬಗ್ಗೆ ಅಭಿಮಾನಿಗಳಿಗೆ ಚಿಂತೆ

ಚಿತ್ರದಲ್ಲಿ ತೋರಿಸಿರುವ ದೃಶ್ಯಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಂದು ವೇಳೆ ಸಂಜಯ್ ದೀನನಾಥ್ ಮಾಡಿರುವ ಆರೋಪ ನಿಜವಾಗಿದ್ದರೆ, ಚಿತ್ರಕ್ಕೆ ದೊಡ್ಡ ಹಿನ್ನಡೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ನಿರ್ದೇಶಕ ಓಂ ರಾವತ್​ ಅವರಿಗೆ ‘ಆದಿಪುರುಷ್​’ ಚಿತ್ರ ನಿಜಕ್ಕೂ ಸವಾಲಿನ ಪ್ರಾಜೆಕ್ಟ್​. ಯಾಕೆಂದರೆ, ಈ ಸಿನಿಮಾದ ಮೊದಲ ಟೀಸರ್​ ಬಿಡುಗಡೆ ಆದಾಗ ಗ್ರಾಫಿಕ್ಸ್​ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಚಿತ್ರತಂಡವನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿತ್ತು. ಈ ಸಿನಿಮಾ 3ಡಿ ವರ್ಷನ್​ನಲ್ಲಿ ಬಿಡುಗಡೆ ಆಗಲಿದೆ. ಅಭಿಮಾನಿಗಳನ್ನು ಇಂಪ್ರೆಸ್​ ಮಾಡಬೇಕು ಎಂಬ ಕಾರಣಕ್ಕೆ 3ಡಿ ಬಗ್ಗೆ ಚಿತ್ರತಂಡ ವಿಶೇಷ ಕಾಳಜಿ ವಹಿಸಿದೆ ಎನ್ನಲಾಗಿದೆ.

suddiyaana