ನಮ್ಮ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಭಾರಿ ಜನದಟ್ಟಣೆ – ಸಿಗ್ನಲ್ ಸಮಸ್ಯೆಯಿಂದ ಹೆಚ್ಚುವರಿ ರೈಲು ವಿಳಂಬ  

ನಮ್ಮ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಭಾರಿ ಜನದಟ್ಟಣೆ – ಸಿಗ್ನಲ್ ಸಮಸ್ಯೆಯಿಂದ ಹೆಚ್ಚುವರಿ ರೈಲು ವಿಳಂಬ  

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಬಿಎಂಆರ್‌ಸಿಎಲ್‌ ಎರಡು ನಿಲ್ದಾಣಗಳ ಮಧ್ಯೆ ಹೆಚ್ಚುವರಿ ರೈಲುಗಳನ್ನು ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ಬಿಡುಗಡೆ ಮಾಡಿತ್ತು. ಆದ್ರೀಗ  ಅದರಿಂದಲೇ ಹಲವು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ವಿದ್ಯುತ್ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ – ಆದರೆ ಷರತ್ತು ಅನ್ವಯ!

ಹೌದು, ಪೀಕ್‌ ಅವರ್‌ಗಳಲ್ಲಿ ನಮ್ಮ ಮೆಟ್ರೋ ಜನಜಂಗುಳಿಯಿಂದ ಕೂಡಿರುತ್ತದೆ. ಹೀಗಾಗಿ ಬಿಎಂಆರ್‌ಸಿಎಲ್‌ ಕಳೆದ ಸೋಮವಾರದಿಂದ ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣದಿಂದ ಗರುಡಾಚಾರ್‌ಪಾಳ್ಯಕ್ಕೆ ಬೆಳಗ್ಗೆ ಪೀಕ್ ಹವರ್‌ನಲ್ಲಿ ಶಾರ್ಟ್ ಲೂಪ್ ರೈಲನ್ನು ಪ್ರತಿ ಮೂರು ನಿಮಿಷಗಳಿಗೊಂದು ಬಿಡಲಾಗುತ್ತಿದೆ. ಇದರಿಂದಾಗಿಯೇ ಈಗ ಮೆಟ್ರೋ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿದುಬಂದಿದೆ. ಸಿಗ್ನಲಿಂಗ್ ಸಮಸ್ಯೆಗಳಿಂದ ರೈಲುಗಳ ಸಂಚಾರ ವಿಳಂಬವಾಗುತ್ತಿದೆ. ಇದರ ಹೊರತಾಗಿ ಯಾವುದೇ ರೈಲುಗಳನ್ನು ರದ್ದುಗೊಳಿಸಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮೆಜೆಸ್ಟಿಕ್ ನಿಂದ ಗರುಡಾಚಾರ್‌ ಪಾಳ್ಯದವರೆಗೆ ಹೆಚ್ಚುವರಿ ರೈಲು ಇವೆ. ಅದರಾಚೆಯ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಕಿಕ್ಕಿರಿದ ತುಂಬಿರುವ ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳನ್ನು ಹತ್ತುವುದೇ ದೊಡ್ಡ ಸವಾಲಾಗಿದೆ. ಇದರಿಂದ ಅವರ ಗಮ್ಯಸ್ಥಾನ ತಲುಪುವುದು ವಿಳಂಬವಾಗುತ್ತಿದೆ.

ಇನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕಳೆದ ಶನಿವಾರ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಿಂದ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಗೆ ಬೆಳಿಗ್ಗೆ 5 ಗಂಟೆಗೆ ರೈಲು ಸೇವೆ ಆರಂಭವಾಗಲಿದೆ. ಬೆಳಗ್ಗೆ ಹೊತ್ತು ಹೆಚ್ಚು ಜನದಟ್ಟಣೆ ಹಿನ್ನೆಲೆಯಲ್ಲಿ ಪೀಕ್ ಸಮಯದಲ್ಲಿ (8.45 ರಿಂದ 10.20 ರವರೆಗೆ) ನೇರಳೆ ಮಾರ್ಗದಲ್ಲಿ ಶಾರ್ಟ್ ಲೂಪ್ ರೈಲು ಬಿಡುವುದಾಗಿ ತಿಳಿಸಿತ್ತು.

Shwetha M