ಫ್ರೀ ಫೈರ್ ಗೇಮ್ಗೆ ಅಡಿಕ್ಟ್ ಆಗಿದ್ದ ಬಾಲಕನ ಹತ್ಯೆ – ಕೊಂದ ಪಾಪ ಪರಿಹಾರಕ್ಕೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬ!

ಈಗೀಗ ಆನ್ಲೈನ್ ಗೇಮ್ಗೆ ಮಕ್ಕಳು ಅಡಿಕ್ಟ್ ಆಗುತ್ತಿದ್ದಾರೆ. ಆನ್ಲೈನ್ ಗೇಮ್ನ ಚಟದಿಂದಾಗಿ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಫ್ರೀ ಫೈರ್ ಗೇಮ್ಗೆ ಅಡಿಕ್ಟ್ ಆಗಿದ್ದ ಬಾಲಕನ ಹತ್ಯೆ ಮಾಡಿ, ಬಳಿಕ ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪುಸ್ತಕದ ಹಾಳೆ ಹರಿದಿದ್ದಕ್ಕೆ ಇದೆಂಥಾ ಶಿಕ್ಷೆ! – ಪ್ರಜ್ಞೆ ತಪ್ಪುವಂತೆ ವಿದ್ಯಾರ್ಥಿಗೆ ಥಳಿಸಿದ ನಾಲ್ವರು ಶಿಕ್ಷಕರು!
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಿಹಾರಕ್ಕೆ ಪ್ರವಾಸ ತೆರಳಿದ್ದ ವೇಳೆ ಆತ್ಮಹತ್ಯೆಗೆ ಕುಟುಂಬಸ್ಥರು ಶರಣಾಗಿದ್ದಾರೆ. 14 ವರ್ಷದ ಅಮೋಘ ಕೀರ್ತಿ ಕೊಲೆಯಾದ ಬಾಲಕ, ನಾಗಪ್ರಸಾದ್ (50) ಕೊಲೆ ಮಾಡಿದ ವ್ಯಕ್ತಿ.
ಏನಿದು ಪ್ರಕರಣ?
ಅಮೋಘ ಕೀರ್ತಿ, ನಾಗಪ್ರಸಾದ್ ಸಹೋದರಿ ಶಿಲ್ಪಾ ಎಂಬಾಕೆಯ ಮಗ. ಅವೋಘ ಕಳೆದ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಈ ವೇಳೆ ಮೊಬೈಲ್ ನಲ್ಲಿ ಫ್ರೀ ಫೈಯರ್ ಗೇಮ್ಗೆ ಅಡಿಕ್ಟ್ ಆಗಿದ್ದ. ಹಣಕ್ಕಾಗಿ ಮಾವನನ್ನ ಬಳಿ ಪೀಡಿಸುತ್ತಿದ್ದ. ಇದರಿಂದ ಸಿಟ್ಟಾದ ನಾಗಪ್ರಸಾದ್ ಬಾಲಕನನ್ನ ಕೊಲೆ ಮಾಡಿದ್ದಾನೆ. ನಂತರ ತಾನೇ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಎಫ್ಐಆರ್ ದಾಖಲಿಸಿದ್ದ ಜೈಲಿಗಟ್ಟಿದ್ದರು. ಆ ನಂತರ ಸಹೋದರಿ ಶಿಲ್ಪಾ ಅಣ್ಣನನ್ನ ಬೇಲ್ ಮೇಲೆ ಕರೆತಂದಿದ್ದಳು.
ನಾಗಪ್ರಸಾದ್ ಬೇಲ್ ಪಡೆದು ಆಚೆ ಬಂದ ಬಳಿಕ ಅಮೋಘ ಕೀರ್ತಿಯನ್ನು ಕೊಂದ ಪಾಪ ಪರಿಹಾರಕ್ಕೆ ಮುಂದಾಗಿದ್ದಾನೆ. ಹೀಗಾಗಿ ಆತ ಇಡೀ ಕುಟುಂಬದ ಜೊತೆ ಕೆಲ ತಿಂಗಳಿಂದ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದ. ಅದೇ ಕಾರಣಕ್ಕಾಗಿ ಬಿಹಾರಕ್ಕೆ ಪ್ರವಾಸ ತೆರಳಿದ್ದ ನಾಗಪ್ರಸನ್ನ ಆತನ ತಾಯಿ ಸುಮಂಗಲಾ (78), ಸಹೋದರಿ ಶಿಲ್ಪಾ (48), ಶ್ರುತಾ (43) ಎಲ್ಲರೂ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕನ ಸಾವಿನಿಂದ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಶರೀರಗಳ ಬಳಿ ನಿದ್ರೆ ಮಾತ್ರೆಗಳು ಸಿಕ್ಕಿದ್ದು, ಓವರ್ ಡೋಸ್ನಿಂದಲೇ ಕುಟುಂಬದವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ತುಮಕೂರಿನ ಗುಬ್ಬಿ ಮೂಲದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವೇಳೆ ಮೃತರ ಬಳಿ ಸಿಕ್ಕ ಮೊಬೈಲ್ ಫೋನುಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, 1.18 ಲಕ್ಷ ನಗದು ಹಣ ಸೇರಿ ಹಲವು ದಾಖಲೆಗಳು ಹಾಗೂ ನಿದ್ರೆ ಮಾತ್ರೆಗಳನ್ನ ವಶಕ್ಕೆ ಪಡೆದಿದ್ದಾರೆ.

ನೋಡಿರಿ

