ವಿಕಿಪೀಡಿಯಾವನ್ನು ಯಾಮಾರಿಸಿದ್ರಾ ಅದಾನಿ ? – 3 to 29… ಕುಸಿದ ಕುಬೇರ..!

ವಿಕಿಪೀಡಿಯಾವನ್ನು ಯಾಮಾರಿಸಿದ್ರಾ ಅದಾನಿ ? – 3 to 29… ಕುಸಿದ ಕುಬೇರ..!

ಹಿಂಡೆನ್​​ಬರ್ಗ್ ವರದಿಯಿಂದ ಲಕ್ಷಾಂತರ ಕೋಟಿ ರೂಪಾಯಿ ಕಳೆದುಕೊಂಡಿರುವ ಗೌತಮ್ ಅದಾನಿಯ ಉದ್ಯಮ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣ್ತಿಲ್ಲ. ಅದಾನಿ ಗ್ರೂಪ್​​ನ ಷೇರು ಮೌಲ್ಯ ದಿನದಿಂದ ದಿನಕ್ಕೆ ಮತ್ತಷ್ಟು ಕುಸಿಯುತ್ತಲೇ ಇದೆ. ಇದ್ರ ಬೆನ್ನಲ್ಲೇ, ವಿಕಿಪೀಡಿಯಾ ಕೂಡ ಅದಾನಿ ವಿರುದ್ಧ ಗಂಭೀರ ಆರೋಪ ಮಾಡಿದೆ. ವಿಕಿಪೀಡಿಯಾದಲ್ಲಿರುವ ಮಾಹಿತಿಯನ್ನ ಅದಾನಿ ಕಂಪನಿ ಸಿಬ್ಬಂದಿ ತಿರುಚಿರುವ ಸಾಧ್ಯತೆ ಇದೆ. ಅದಾನಿ ಕುರಿತು ತಪ್ಪು ಮಾಹಿತಿ ನೀಡಲಾಗಿದೆ ಅಂತಾ ಆರೋಪಿಸಿದೆ. ಅದಾನಿ ಉದ್ಯಮ ಮತ್ತು ಅದಾನಿ ಕುಟುಂಬಸ್ಥರ ಕುರಿತು ತಪ್ಪು ಮಾಹಿತಿ ನೀಡಿ ತಿದ್ದುಪಡಿ ಮಾಡಲಾಗಿದ್ಯಂತೆ. ಇನ್ನು ವಿಕಿಪೀಡಿಯಾದಲ್ಲಿರುವ ಮಾಹಿತಿಯನ್ನ ಯಾರು ಬೇಕಿದ್ರೂ ಎಡಿಟ್ ಕೂಡ ಮಾಡಬಹುದು. ಈ ನಡುವೆ, ವಿಕಿಪೀಡಿಯಾ ಆರೋಪದ ಬೆನ್ನಲ್ಲೇ ಅದಾನಿ ಗ್ರೂಪ್​ನ ಶೇಕಡಾ 10ರಷ್ಟು ಷೇರು ಮೌಲ್ಯ ಕುಸಿದಿದೆ. ಇನ್ನು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಅದಾನಿ ಈಗ 29ನೇ ಸ್ಥಾನಕ್ಕೆ ಜಾರಿದ್ದಾರೆ.

 

suddiyaana