ಗೌತಮ್ ಅದಾನಿ ಮೇಲೆ ಮತ್ತೊಂದು ಗಂಭೀರ ಆರೋಪ – ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ
ಹಿಂಡನ್‌ಬರ್ಗ್ ವರದಿಯ ನಂತರ ಭಾರತೀಯ ಉದ್ಯಮಿ ಗೌತಮ್ ಅದಾನಿ ಅವರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸಾರ್ವಜನಿಕವಾಗಿ ಪಟ್ಟಿ ಮಾಡಲ್ಪಟ್ಟ ಅದಾನಿ ಕಂಪನಿಗಳ ಷೇರುಗಳಲ್ಲಿ ಮಾರಿಷಸ್ ಮೂಲಕ ಪಾರದರ್ಶಕವಲ್ಲದ ಹೂಡಿಕೆಯನ್ನ ಅದಾನಿ ಸಮೂಹ ಮಾಡುತ್ತಿದೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ ಸಂಸ್ಥೆ ಆರೋಪ ಮಾಡಿದೆ.
ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ ಸಂಸ್ಥೆ, ಪಾರದರ್ಶಕವಲ್ಲದ ಹೂಡಿಕೆ ಮಾಡುತ್ತಿರುವ ಇಂತಹ ಎರಡು ಸಂಸ್ಥೆಗಳನ್ನ ಪತ್ತೆ ಮಾಡಿದೆ. ಹಾಗೇ ಇವುಗಳಲ್ಲಿ ಹೂಡಿಕೆದಾರರು ವಿದೇಶಿ ವ್ಯವಸ್ಥೆಗಳ ಮೂಲಕ ಷೇರುಗಳ ಖರೀದಿ ಮತ್ತು ಮಾರಾಟ ನಡೆಸಿರುವುದು ಪತ್ತೆಯಾಗಿದೆ ಎಂದೂ ತಿಳಿಸಿದೆ. ಆದರೆ ಈ ಆರೋಪವನ್ನ ಅದಾನಿ ಸಮೂಹ ಅಲ್ಲಗಳೆದಿದೆ. ಇದೀಗ ಈ ಆರೋಪದ ಬೆನ್ನಲ್ಲೇ ಅದಾನಿ ಸಮೂಹ ಕಂಪನಿಗಳ ಷೇರುಗಳಲ್ಲಿ ಕುಸಿತ ಕಂಡಿದೆ.
ಇದನ್ನೂ ಓದಿ: ಗೃಹಬಳಕೆಯ ಬೆನ್ನಲ್ಲೇ ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಇಳಿಕೆ!
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. G20 ನಾಯಕರು ಭಾರತಕ್ಕೆ ಬರುವ ಮುನ್ನವೇ, ಪ್ರಧಾನಿ ಮೋದಿಯವರ ನಿಕಟವರ್ತಿಗಳ ಮಾಲೀಕತ್ವದ ಈ ವಿಶೇಷ ಕಂಪನಿ ಯಾವುದು ಮತ್ತು ಭಾರತದಂತಹ ಆರ್ಥಿಕತೆಯಲ್ಲಿ ಈ ವ್ಯಕ್ತಿಗೆ ವ್ಯವಹಾರ ಮಾಡಲು ಅನುಮತಿ ನೀಡಿದ್ದು ಯಾರು ಎಂದು ಕೇಳುತ್ತಿದ್ದೇನೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ.