ಬಿಗ್‌ಬಾಸ್ ಮನೆಗೆ ನಟಿ ತಾರಾ ಎಂಟ್ರಿ – ಸ್ಪರ್ಧಿಗಳಿಗೆ ಒಂದೆಡೆ ಶಾಕಿಂಗ್, ಮತ್ತೊಂದೆಡೆ ಸರ್‌ಪ್ರೈಸ್

ಬಿಗ್‌ಬಾಸ್ ಮನೆಗೆ ನಟಿ ತಾರಾ ಎಂಟ್ರಿ – ಸ್ಪರ್ಧಿಗಳಿಗೆ ಒಂದೆಡೆ ಶಾಕಿಂಗ್, ಮತ್ತೊಂದೆಡೆ ಸರ್‌ಪ್ರೈಸ್

ಮೂರನೇ ವಾರಕ್ಕೆ ಕಾಲಿಟ್ಟ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಜಗಳ, ದ್ವೇಷ, ಕಣ್ಣೀರೇ ಜಾಸ್ತಿಯಾಗಿ ಕಂಡು ಬಂದಿತ್ತು. ಇದನ್ನ ಅರಿತ ಬಿಗ್‌ಬಾಸ್ ಮನೆಯೊಳಗೆ ಹಿರಿಯ ನಟಿ, ಸದಾ ನಗುಮೊಗದ ತಾರೆ, ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ತಾರಾ ಅವರನ್ನು ಮನೆಯೊಳಗೆ ಕಳುಹಿಸಿಕೊಟ್ಟಿದೆ. ಹಾಗಾದ್ರೆ, ನಟಿ ತಾರಾ ದೊಡ್ಮನೆಯೊಳಗೆ ಎಂಟ್ರಿಕೊಟ್ಟಿದ್ದು ಯಾಕೆ, ಅತಿಥಿಯಾಗಿ ಬಂದ್ರಾ ಇಲ್ಲಾ ಸ್ಪರ್ಧಿಯಾಗಿ ಇಲ್ಲೇ ನಿಲ್ತಾರಾ ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ: ವರ್ತೂರು ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ – ಲಾಕೆಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕನಿಗೂ ಸಂಕಷ್ಟ

ಬಿಗ್ ಬಾಸ್ ರಿಯಾಲಿಟಿ ಶೋ ಮೂರನೇ ವಾರಕ್ಕೆ ತಲುಪಿದೆ. ಮನೆಯಲ್ಲಿ ಜಗಳದ ಕಾವು ಜೊರಾಗಿದೆ. ಮತ್ತೊಂದು ಕಡೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ವರ್ತೂರು ಸಂತೋಷ್ ಅವರು ಏಕಾಏಕಿ ಎಗ್ಸಿಟ್ ಆಗಿದ್ದು ಮನೆಯವರಿಗೆ ಶಾಕಿಂಗ್ ಎನಿಸಿದೆ. ಆದರೂ, ಯಾಕೆ, ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ವರ್ತೂರು ಸಂತೋಷ್ ಬಗ್ಗೆ ಮಾತಾಡುವ ಹಾಗೂ ಇಲ್ಲ. ಇದೇ ಸಮಯದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಶಿಕ್ಷೆ ಕೂಡಾ ನೀಡಿದೆ. ನಿಯಮ ಮುರಿದ ಎಲ್ಲರಿಗೂ ಬಿಗ್ ಬಾಸ್ ಮರಳಿನ ಮೂಟೆ ಹೊತ್ತಿಕೊಳ್ಳುವ ಶಿಕ್ಷೆ ನೀಡಿದ್ದಾರೆ. ಇದು ಸ್ಪರ್ಧಿಗಳ ನಡುವೆ ಮತ್ತಷ್ಟೂ ಬಿಸಿ ಬಿಸಿ ಜಗಳಕ್ಕೆ ಎಡೆಮಾಡಿಕೊಟ್ಟಿದೆ. ಒಬ್ಬರ ಮೇಲೆ ಇನ್ನೊಬ್ಬರು ಕಾಲ್ಕೆರೆದು ಜಗಳವಾಡೋದೇ ಈ ಬಾರಿಯ ಬಿಗ್‌ಬಾಸ್ ಶೋನ ಹೈಲೆಟ್ ಆಗಿದೆ ಎಂದರೂ ತಪ್ಪಿಲ್ಲ. ಹೀಗಿರುವಾಗಲೇ ಎಲ್ಲಾ ಮುನಿಸು, ಎಲ್ಲಾ ನೋವನ್ನೂ ದೂರ ಮಾಡಲು ಬಂದ ಹಾಗೆ ಬಿಗ್‌ಬಾಸ್ ಮನೆಗೆ ನಟಿ ತಾರಾ ಎಂಟ್ರಿಕೊಟ್ಟಿದ್ದಾರೆ. ಥೇಟ್ ಮಹಾಲಕ್ಷ್ಮೀಯಂತೆ ಸಿಂಗಾರಗೊಂಡು ಬಂದ ಸೊಬಗಿನ ತಾರೆ ಬಿಗ್‌ಬಾಸ್ ಮನೆಯ ಕಳೆ ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲ, ನಟಿ ತಾರಾ ಅವರನ್ನು ನೋಡಿದ ಬಿಗ್‌ಬಾಸ್ ಸ್ಪರ್ಧಿಗಳು ಸಿಕ್ಕಾಪಟ್ಟೆ ಸಂಭ್ರಮಿಸಿದ್ದಾರೆ. ಎಲ್ಲರ ಮುಖದಲ್ಲೂ ಸಂತಸ ಕಂಡು  ಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ನವರಾತ್ರಿ ಆಚರಣೆ ಇತ್ತು. ದಸರಾ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಲು ನಟಿ ತಾರಾ ಅವರನ್ನು ದೊಡ್ಮನೆಗೆ ಅತಿಥಿಯಾಗಿ ಬರಮಾಡಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಎಲ್ಲರೂ ಹೊಸಬಟ್ಟೆ ಧರಿಸಿ ನವರಾತ್ರಿ ಹಬ್ಬ ಆಚರಿಸಿದ್ದಾರೆ. ಮುಖ್ಯದ್ವಾರದ ಮೂಲಕ ತಾರಾ ಬಿಗ್ ಬಾಸ್‌ ಮನೆಗೆ ಬಂದಿದ್ದಾರೆ. ಸ್ಪರ್ಧಿಗಳಿಗೆ ಕೆಲವು ಫನ್ ಆ್ಯಕ್ಟಿವಿಟಿ ನೀಡಲಾಗಿದೆ. ಬಿಗ್ ಬಾಸ್ ಸಾಂಗ್ ಪ್ಲೇ ಮಾಡುತ್ತಾರೆ. ಈ ಸಾಂಗ್ ಯಾರಿಗೆ ಸೂಕ್ತ ಎನಿಸುತ್ತದೆ ಎನ್ನುವುದನ್ನು ಸ್ಪರ್ಧಿಗಳು ಹೇಳಬೇಕು. ಈ ವೇಳೆ ಕಾರ್ತಿಕ್ ಫ್ಲರ್ಟ್ ಮಾಡುತ್ತಾರೆ ಎಂದು ಮನೆಯವರು ತಾರಾ ಎದುರು ದೂರು ನೀಡಿದರು. ‘ನೀನು ಫ್ಲರ್ಟ್ ಬೇರೆ ಮಾಡ್ತೀಯಾ’ ಎಂದು ತಾರಾ ಅಚ್ಚರಿಗೊಂಡರು. ಇದಕ್ಕೆ ಮನೆಯವರೆಲ್ಲ ‘ಸಿಕ್ಕಾಪಟ್ಟೆ ಫ್ಲರ್ಟ್ ಮಾಡ್ತಾನೆ’ ಎಂದರು. ಇದಕ್ಕೆ ತಾರಾಮ್ಮನ ನಗು ನೋಡಿ ಎಲ್ಲರೂ ಮನಸಾರೆ ನಕ್ಕರು. ಇದರ ಜೊತೆಗೆ ಡ್ರೋನ್ ಪ್ರತಾಪ್ ಇಷ್ಟು ದಿನದ ಸಿಟ್ಟನ್ನೆಲ್ಲಾ ತುಕಾಲಿ ಸಂತೋಷ್ ಮೇಲೆ ತೀರಿಸಿಕೊಂಡಿದ್ದು ಸಿಕ್ಕಾಪಟ್ಟೆ ಮಜಾ ಆಗಿತ್ತು.  ಡ್ರೋನ್ ಅಂತೂ ತುಕಾಲಿ ಸಂತೋಷ್ ಬೆನ್ನಿಗೆ ಗುದ್ದುವಂತೆ, ಆಕ್ಟ್ ಮಾಡಿದರು. ಇದನ್ನು ನೋಡಿದ ತಾರಾ, ಈ ರೀತಿ ಹೊಡೆಯೋಕೆ ಎಷ್ಟು ದಿನದಿಂದ ಕಾಯುತ್ತಿದ್ದೆ ಎಂದು ಕೇಳಿದರು. ಇದನ್ನು ಕೇಳಿ ಉಳಿದ ಸ್ಪರ್ಧಿಗಳಿಗೆ ಹೌದು ಅಂತಾ ಅನಿಸಿ ಒಳಗೊಳಗೆ ನಗು ಬರುತ್ತಿತ್ತು.

ಒಂದು ಕಡೆ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದರೆ, ಮತ್ತೊಂದು ಕಡೆ ಸೂತಕದ ಛಾಯೆಯೂ ಆವರಿಸಿಕೊಂಡಿದೆ. ಅದನ್ನು ಮರೆಸುವುದಕ್ಕಾಗಿಯೇ ಬಿಗ್ ಬಾಸ್ ಈ ಐಡಿಯಾ ಮಾಡಿರಬೇಕು ಅಂತಿದ್ದಾರೆ ವೀಕ್ಷಕರು. ಇನ್ನು ಇವರೆಲ್ಲರ ಜೊತೆ ಮಿಂಗಲ್ ಆಗಲು ತಾರಾ ಅವರೇ ಹೇಳಿಮಾಡಿಸಿದ ನಟಿ ಅಂದರೂ ತಪ್ಪಾಗಲ್ಲ. ಈಗಾಗಲೇ ತಾರಾ ಅವರಿಗೆ ಕಿರುತೆರೆ ಜೊತೆಯೂ ನಂಟಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ರಾಜ ರಾಣಿ’ ಹಾಗೂ ‘ನಮ್ಮಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋಗೆ ತಾರಾ ಜಡ್ಜ್ ಆಗಿದ್ದರು. ಈಗ ಅವರು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ.  ಹಾಗಂತ ತಾರಾ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿಲ್ಲ. ಅತಿಥಿಯಾಗಿ ಎಂಟ್ರಿ ಕೊಟ್ಟು, ಹಬ್ಬ ಮುಗಿಸಿಕೊಂಡು ವಾಪಸ್ಸಾಗಲಿದ್ದಾರೆ.

Sulekha