ಜನರು ಬಟ್ಟೆ ಧರಿಸಲಿ ಎಂದು ಬಯಸಿದ್ದೆ, ಅದನ್ನು ತೆಗೆಯಲು ಅಲ್ಲ – ನಟಿ ಶಿಲ್ಪಾ ಶೆಟ್ಟಿ ಗಂಡನ ಸೆಕ್ಸ್ ಜೋಕ್..!

ಜನರು ಬಟ್ಟೆ ಧರಿಸಲಿ ಎಂದು ಬಯಸಿದ್ದೆ, ಅದನ್ನು ತೆಗೆಯಲು ಅಲ್ಲ – ನಟಿ ಶಿಲ್ಪಾ ಶೆಟ್ಟಿ ಗಂಡನ ಸೆಕ್ಸ್ ಜೋಕ್..!

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್ ಆದ ಬಳಿಕ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮಾಸ್ಕ್ ಮ್ಯಾನ್ ಎಂದೇ ಫೇಮಸ್ ಆಗಿದ್ದಾರೆ. ಎಲ್ಲಿ ಹೋದರೂ ಮುಖ ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಇದರ ಜೊತೆಗೆ ಈಗ ಸ್ಟಾಂಡಪ್ ಕಾಮಿಡಿ ಬೇರೆ ಶುರು ಮಾಡಿಕೊಂಡಿದ್ದಾರೆ. ಈ ವಿಡಿಯೋದ ತುಣುಕು ವೈರಲ್ ಆಗುತ್ತಿದ್ದು, ಸೆಕ್‌ ಜೋಕ್ ಮಾಡ್ತೀನೆ ಅಂತಾ ನೇರವಾಗಿಯೇ ರಾಜ್ ಕುಂದ್ರಾ ಹೇಳಿರುವುದು ಕೂಡಾ ಅಚ್ಚರಿಗೂ ಕಾರಣವಾಗಿದೆ.

ಇದನ್ನೂ ಓದಿ:ಫ್ರೆಂಡ್‌ಗಾಗಿ ಪ್ರೇಯಸಿಯನ್ನೇ ಗಿಫ್ಟ್ ನೀಡಿದ – ಸಿನಿಮಾ ಸ್ಟೋರಿಗೂ ಮೀರಿಸುವಂತಿದೆ ತ್ಯಾಗಮಯಿ ಸ್ನೇಹಿತನ ಕಥೆ..!

ಕಪ್ಪು ಬಣ್ಣದ ಜಂಪ್‌ಸ್ಯೂಟ್ ಹಾಕಿ ಶೋವೊಂದಕ್ಕೆ ರಾಜ್ ಕುಂದ್ರಾ ಬಂದಿದ್ದರು. ಮುಖಕ್ಕೆ ಮಾಸ್ಕ್ ಧರಿಸಿದ್ದರು. ಅವರ ಜೊತೆ ಬಾಡಿಗಾರ್ಡ್ಸ್ ಕೂಡಾ ಇದ್ದರು. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ತಮ್ಮನ್ನು ತಾವೇ ಪರಿಚಯಿಸಿಕೊಂಡರು. ‘ನಾನು ರಾಜ್ ಕುಂದ್ರಾ. ಮಾಸ್ಕ್ ಮ್ಯಾನ್ ಎಂದೇ ಫೇಮಸ್. ಶಿಲ್ಪಾ ಶೆಟ್ಟಿ ಪತಿ ಅಂತಲೂ ಜನಪ್ರಿಯತೆ ಪಡೆದಿದ್ದೇನೆ’ ಎಂದಿದ್ದಾರೆ ರಾಜ್ ಕುಂದ್ರಾ. ವೇದಿಕೆ ಏರಿದ ತಕ್ಷಣ ಅವರು ವಿಷಯಕ್ಕೆ ಬಂದಿದ್ದಾರೆ. ‘ನಾನು ಸೆಕ್ಸ್ ಜೋಕ್ ಹೇಳುತ್ತೇನೆ. ಯಾರಿಗಾದರೂ ಸರಿ ಎನಿಸಿಲ್ಲ ಎಂದರೆ 10 ನಿಮಿಷ ಹೊರಗೆ ಇರಬಹುದು’ ಎಂದರು. ಆದರೆ ಯಾರೊಬ್ಬರೂ ಹೊರಗೆ ಹೋಗಲೇ ಇಲ್ಲ. ಇದಕ್ಕೆ ರಾಜ್ ಕುಂದ್ರಾ ‘ನೀವೆಲ್ಲ ವಿಕೃತರು’ ಎಂದು ನಕ್ಕರು. ಆ ಬಳಿಕ ಅವರು ಅಶ್ಲೀಲ ಸಿನಿಮಾ ನಿರ್ಮಾಣದ ವಿಚಾರವಾಗಿ ಪರೋಕ್ಷವಾಗಿ ಮಾತನಾಡಿದರು. ‘18ನೇ ವಯಸ್ಸಿಗೆ ಲಂಡನ್‌ನಲ್ಲಿ ಟ್ಯಾಕ್ಸಿ ಓಡಿಸಲು ಆರಂಭಿಸಿದೆ. 21ನೇ ವಯಸ್ಸಿಗೆ ಸಾಮ್ರಾಜ್ಯ ಸ್ಥಾಪಿಸಿದೆ. ನಾನು ಯಾವಾಗಲೂ ಜನರು ಬಟ್ಟೆ ಧರಿಸಲಿ ಎಂದು ಬಯಸುತ್ತಿದ್ದೆ, ಅದನ್ನು ತೆಗೆಯಲು ಅಲ್ಲ’ ಎಂದು ರಾಜ್ ಕುಂದ್ರಾ ಹೇಳಿದ್ದಾರೆ. ಈ ಹೇಳಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ.

ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಇತ್ತೀಚೆಗೆ ಸಾರ್ವಜನಿಕವಾಗಿ ಎಲ್ಲೇ ಕಾಣಿಸಿಕೊಂಡರೂ ಮುಖ ಕಾಣದಂತೆ ಮಾಸ್ಕ್ ಧರಿಸಿರುತ್ತಾರೆ. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಅರೆಸ್ಟ್ ಆದ ಬಳಿಕ ಅವರು ಈ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ. 2021ರಲ್ಲಿ ಉದ್ಯಮಿ ರಾಜ್ ಕುಂದ್ರಾ ನೀಲಿ ಚಿತ್ರ  ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್‌ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಇದಾದ ಬಳಿಕ ಕೆಲ ತಿಂಗಳು ರಾಜ್ ಕುಂದ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ನಂತರ ಗಣೇಶೋತ್ಸವದ ವೇಳೆ ಕಾಣಿಸಿಕೊಂಡರೂ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದರು. ಇದೀಗ ಮೊದಲೇ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಆಗಲೂ ಮಾಸ್ಕ್ ಧರಿಸಿ ಬಂದಿದ್ದಾರೆ. ರಾಜ್ ಕುಂದ್ರಾ ಮಾಸ್ಕ್ ಧರಿಸುವ ವಿಚಾರವನ್ನು ಅನೇಕರು ಟೀಕೆ ಮಾಡುತ್ತಿದ್ದಾರೆ. ‘ಧೈರ್ಯವಿದ್ದರೆ ಮಾಸ್ಕ್ ತೆಗೆದು ಬನ್ನಿ’ ಎಂದು ಅವರಿಗೆ ಸವಾಲು ಹಾಕಿದ್ದಾರೆ.

Sulekha