ಅಂದು ಪುಟ್ಟಕ್ಕನ ಮಕ್ಕಳು, ಇಂದು ಗಂಧದ ಗುಡಿ – ಅರ್ಧದಲ್ಲೇ ಕೈಕೊಟ್ಟ ಕಿರುತೆರೆ ನಟಿ ಸಂಜನಾ ಬುರ್ಲಿ

ಅಂದು ಪುಟ್ಟಕ್ಕನ ಮಕ್ಕಳು, ಇಂದು ಗಂಧದ ಗುಡಿ – ಅರ್ಧದಲ್ಲೇ ಕೈಕೊಟ್ಟ ಕಿರುತೆರೆ ನಟಿ ಸಂಜನಾ ಬುರ್ಲಿ

ಕಿರುತೆರೆ ನಟಿ ಸಂಜನಾ ಬುರ್ಲಿ ಮತ್ತೊಂದು ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟು ಹೊರನಡೆದಿದ್ದಾರೆ. ಈ ಮೊದಲು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದರು. ಅದರಲ್ಲೂ ಅರ್ಧದಲ್ಲೇ ಧಾರಾವಾಹಿಯಿಂದ ಹೊರಬಂದಿದ್ದರು. ಇದೀಗ ಗಂಧದ ಗುಡಿ ಧಾರಾವಾಹಿಯಿಂದಲೂ ಹೊರಬಂದಿದ್ದಾರೆ.

ಇದನ್ನೂಓದಿ:ಭಾಗ್ಯಲಕ್ಷ್ಮೀ ಶೂಟಿಂಗ್ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟು! – ನಟಿಗೆ ಏನಾಯ್ತು?

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಶ್ರೀ ಗಂಧದಗುಡಿ ಧಾರಾವಾಹಿ. ಈ ಧಾರಾವಾಹಿ ಆರಂಭವಾಗಿ ಈಗ 156ನೇ ಎಪಿಸೋಡ್‌ ಆಗಿದೆ. ಇದೀಗ ಈ ಧಾರಾವಾಹಿಯ ನಾಯಕಿ ಸಂಜನಾ ಬುರ್ಲಿ ಧಾರಾವಾಹಿಯಿಂದ ಹೊರಬಂದಿದ್ದಾರೆ. ಗಂಧದಗುಡಿ ಧಾರಾವಾಹಿಯಲ್ಲಿ ಚಂದನಾ ಪಾತ್ರದಲ್ಲಿ ನಟಿ ಸಂಜನಾ ಬುರ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಚಂದನಾ ಪಾತ್ರಕ್ಕೆ ಸಂಜನಾ ಗುಡ್‌ಬೈ ಹೇಳಿದ್ದಾರೆ. ಈ ಪಾತ್ರಕ್ಕೆ ಬೇರೆ ನಟಿ ಬಣ್ಣ ಹಚ್ಚಲಿದ್ದಾರೆ.

ಈ ಹಿಂದೆ ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲೂ ಅರ್ಧದಲ್ಲೇ ಹೊರ ಬಂದಿದ್ದರು. ಆಗ ಶಿಕ್ಷಣದ ವಿಚಾರವಾಗಿ ಹೊರಗಡೆ ಬಂದಿರುವುದಾಗಿ ಸಂಜನಾ ಬುರ್ಲಿ ಸ್ಪಷ್ಟನೆ ನೀಡಿದ್ದರು. ಈಗ ಮದುವೆ ಕಾರಣ ನೀಡಿ ಸಂಜನಾ ಬುರ್ಲಿ ಧಾರಾವಾಹಿಯಿಂದ ಹೊರಬಂದಿದ್ದಾರೆ. ಸಂಜನಾ ಇತ್ತೀಚೆಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಮಾರ್ಚ್‌ ತಿಂಗಳಿನಲ್ಲಿ ಮದುವೆ ಆಗುವುದಾಗಿಯೂ ಹೇಳಿದ್ದರು. ಈ ಕಾರಣಕ್ಕಾಗಿ ಅವರು ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ.

ಗಂಧದಗುಡಿ ಧಾರಾವಾಹಿಗೆ ಒಳ್ಳೆಯ ರೇಟಿಂಗ್ಸ್‌ ಕೂಡ ಇದೆ. ಚಂದನಾ ಸುತ್ತವೇ ಕಥೆ ಕೂಡ ಸಾಗುತ್ತಿದೆ. ಇದೀಗ ಸಂಜನಾ ಧಾರಾವಾಹಿಯಿಂದ ಹೊರಬಂದಿದ್ದು, ನಿಖರ ಕಾರಣವನ್ನು ಸೀರಿಯಲ್‌ ತಂಡವಾಗಲೀ, ಸಂಜನಾ ಅವರಾಗಲೀ ಏನೂ ಹೇಳಿಲ್ಲ. ಸಂಜನಾ ಬುರ್ಲಿ ಜಾಗಕ್ಕೆ ಹೊಸ ನಟಿಯ ಎಂಟ್ರಿಯಾಗಿದೆ. ರಾಮಾಚಾರಿ ಹಾಗೂ ಶುಭಸ್ಯ ಶೀಘ್ರಂ ಧಾರಾವಾಹಿಯಲ್ಲಿ ನಟಿಸಿದ್ದ ಸ್ನೇಹಾ ಮಂಜುನಾಥ್‌ ಅವರು ಸೀರಿಯಲ್‌ಗೆ ನಾಯಕಿ ಎನ್ನಲಾಗಿದೆ.

Sulekha

Leave a Reply

Your email address will not be published. Required fields are marked *