ನಟಿ ಸಮಂತಾಗೆ ಮತ್ತೆ ಮತ್ತೆ ಕಾಡುತ್ತಿದೆ ಅನಾರೋಗ್ಯದ ಸಮಸ್ಯೆ, ವಿದೇಶದಲ್ಲಿ ಚಿಕಿತ್ಸೆ ?

ನಟಿ ಸಮಂತಾಗೆ ಮತ್ತೆ ಮತ್ತೆ ಕಾಡುತ್ತಿದೆ ಅನಾರೋಗ್ಯದ ಸಮಸ್ಯೆ, ವಿದೇಶದಲ್ಲಿ ಚಿಕಿತ್ಸೆ ?

ತೆಲುಗು ನಟಿ ಸಮಂತಾ ರುತ್ ಪ್ರಭು ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ತೆರಳಿದ್ದಾರೆ ಅನ್ನೋ ವಿಚಾರ ಕೇಳಿಬರುತ್ತಿದೆ. ನಟಿ ಸಮಂತಾ ತಾನು ಮೈಯೋಸಿಟಿಸ್ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದು, ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ಹೇಳಿಕೊಂಡಿದ್ದರು. ನಂತರ ವಾಪಸ್​ ಬಂದು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಕೈಗೆ ಡ್ರಿಪ್ಸ್​ ಹಾಕಿಕೊಂಡೇ ಅವರು ‘ಯಶೋದಾ’ ಸಿನಿಮಾದ ಡಬ್ಬಿಂಗ್​ ಮುಗಿಸಿದ್ದರು. ಇದಾದ ಬಳಿಕವೂ ಸಂಪೂರ್ಣ ಗುಣಮುಖವಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಚಿಕಿತ್ಸೆ ಪಡೆಯಲು ದಕ್ಷಿಣ ಕೊರಿಯಾಗಿ ತೆರಳಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ.

ಇದನ್ನೂ ಓದಿ:   ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಹಸೆಮಣೆಯೇರಲು ರೆಡಿನಾ ? – ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಮದುವೆ ಸೌಂಡ್..!

ನಟಿ ಸಮಂತಾ ಭಾರತದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೂ ಕೂಡ ಅವರಿಗೆ ಪೂರ್ತಿ ವಾಸಿ ಆಗಿಲ್ಲ. ಸಮಂತಾ ಇಷ್ಟೊತ್ತಿಗೆಲ್ಲಾ ನಟ ವಿಜಯ್​ ದೇವರಕೊಂಡ ಜೊತೆಗೆ ‘ಖುಷಿ’ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಬೇಕಿತ್ತು. ಆದರೆ, ಚಿಕಿತ್ಸೆಗೆ ತೆರಳಿದ್ದರಿಂದ  ಸಿನಿಮಾದ ಕೆಲಸ ವಿಳಂಬವಾಗಿದೆ ಎನ್ನಲಾಗುತ್ತಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ಸೂಪರ್​ ಹಿಟ್​ ಆದ ಬಳಿಕ ಹಾಗೂ ‘ಪುಷ್ಪ’ ಸಿನಿಮಾದಲ್ಲಿ ಐಟಂ ಡ್ಯಾನ್ಸ್​ ಮಾಡಿದ ನಂತರ ಸಮಂತಾ ಅವರಿಗೆ ಹತ್ತಾರು ಆಫರ್​ಗಳು ಬರಲು ಶುರುವಾದವು. ಆದರೆ ಅನಾರೋಗ್ಯದ ಕಾರಣದಿಂದ ಎಲ್ಲವನ್ನೂ ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೇಗೋ ಕಷ್ಟಪಟ್ಟು ‘ಯಶೋದಾ’ ಸಿನಿಮಾದ ಕೆಲಸಗಳನ್ನು ಮುಗಿಸಿಸಿದ್ದರು. ಇನ್ನೇನು ಪೂರ್ತಿ ಗುಣಮುಖರಾಗಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗುತ್ತಾರೆ ಎಂದುಕೊಳ್ಳುತ್ತಿರುವಾಗಲೇ ಈ ಸುದ್ದಿ ಕೇಳಿಬಂದಿದೆ.

suddiyaana